ಮುಂಬೈ (ಪಿಟಿಐ): ನಿಕೋಲಸ್ ಪೂರನ್ ಅವರ ಬಿರುಗಾಳಿ ಇನಿಂಗ್ಸ್ ನಿಂದಾಗಿ (20 ಎಸೆತಗಳಲ್ಲಿ 63) ಲಖನೌ ಸೂಪರ್ ಜೈಂಟ್ಸ್ ತಂಡವು ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ಗೆ 228 ರನ್ಗಳ ಸವಾಲಿನ ಮೊತ್ತ ಗಳಿಸಿತು. ಇನಿಂಗ್ಸ್ನ ಮಧ್ಯಮ ಕ್ರಮಾಂಕವು ಕುಸಿಯದೇ ಹೋಗಿದ್ದಲ್ಲಿ ಮೊತ್ತ ಇನ್ನೂ ಹಿಗ್ಗುತಿತ್ತು.

ಈ ಪಂದ್ಯಕ್ಕೆ ಮೊದಲು ಪೂರನ್ ರನ್ ಬರ ಎದುರಿಸಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಬೌಲರ್ಗಳು ನೇರ ಮತ್ತು ಲೆಂಗ್ತ್ನಲ್ಲಿ ಎಡವಿದ್ದನ್ನು ಬಂಡವಾಳ ಮಾಡಿಕೊಂಡ ವೆಸ್ಟ್ ಇಂಡೀಸ್ನ ಆಟಗಾರ ಒಂದು ಬೌಂಡರಿ ಜೊತೆ ಎಂಟು ಸಿಕ್ಸರ್ಗಳನ್ನು ಎತ್ತಿದರು. ಆನ್ಸೈಡ್ನಲ್ಲಿ ಪ್ರಾಬಲ್ಯ ಮೆರೆದರು.

ಆರಂಭ ಆಟಗಾರ ಮಿಚೆಲ್ ಮಾರ್ಷ್ ಜೊತೆ ಕೇವಲ 34 ಎಸೆತಗಳಲ್ಲಿ 94 ರನ್ ಜೊತೆಯಾಟವಾಡಿ ತಂಡಕ್ಕೆ ಮಿಂಚಿನ ಆರಂಭ ಒದಗಿಸಿದರು. ಜಸ್ಪ್ರೀತ್ ಬೂಮ್ರಾ (0/45) ಅವರು ದಂಡನೆಗೊಳಗಾದರು. ಕಾರ್ಬಿನ್ ಬಾಷ್ (20ಕ್ಕೆ2) ಇನಿಂಗ್ಸ್ನ ಮಧ್ಯದಲ್ಲಿ ಲಖನೌಗೆ ಲಗಾಮು ತೊಡಿಸಿದರು.

ದೀಪಕ್ ಚಾಹರ್ ಮೊದಲ ಓವರಿನಲ್ಲಿ ಸಿಕ್ಸರ್ ಮತ್ತು ಬೌಂಡರಿ ಮೂಲಕ ಮಾರ್ಷ್ ಲಖನೌ ಆಟಕ್ಕೆ ವೇಗ ನೀಡಿದರು. ಮೂರನೇ ಓವರಿನಲ್ಲಿ ದಾಳಿಗಿಳಿದ ಅಲ್ಲಾ ಘಜನಫರ್ ಅವರು ಜೋಸ್ ಇಂಗ್ಲಿಸ್ ವಿಕೆಟ್ ಪಡೆದರು. ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಕ್ಯಾಚ್ ಪಡೆದರು. ಆದರೆ ಪೂರನ್ ಬಂದ ಹಾಗೆಯೇ ಆಕ್ರಮಣದಲ್ಲಿ ತೊಡಗಿದರು.

ಸತತ ಕ್ರಿಕೆಟ್ನಿಂದ ಕಳೆಗುಂದಿದಂತೆ ಕಂಡ ಬೂಮ್ರಾ ಯಾರ್ಕರ್ಗಳನ್ನು ಹಾಕುವಾಗ ಎಡವಿದರು. ಎರಡು ಬಾರಿ ನೋಬಾಲ್ ಕೂಡ ಮಾಡಿದ್ದು, ಅವುಗಳನ್ನು ಮಾರ್ಷ್ ಬೌಂಡರಿಗಟ್ಟಿದರು. ಮತ್ತೊಮ್ಮೆ ಅವರ ನಾಲ್ಕನೇ ಓವರಿನಲ್ಲಿ ಮಿಡ್ವಿಕೆಟ್ ಮತ್ತು ಲಾಂಗ್ ಆನ್ ಮಧ್ಯೆ ಅಟ್ಟಿದ ಭರ್ಜರಿ ಸಿಕ್ಸರ್ಗೆ ಸ್ವತಃ ಸೂರ್ಯಕುಮಾರ್ ತಲೆದೂಗಿದರು. ಬೂಮ್ರಾ ಅವರ ಎರಡನೇ (ಇನಿಂಗ್ಸ್ನ ನಾಲ್ಕನೇ) ಓವರಿನಲ್ಲಿ 21 ರನ್ಗಳು ಬಂದವು. ವಿಲ್ ಜಾಕ್ಸ್ ಮೊದಲ ಓವರಿನಲ್ಲಿ ಮೂರು ಸಿಕ್ಸರ್ ಸಹಿತ 20 ರನ್ ಬಾಚಿದರು. ಘಜನಫರ್ ಕೂಡ ದಂಡನೆಗೆ ಒಳಗಾದರು. ಪವರ್ಪ್ಲೇ ಮುಗಿದಾಗ ಲಖನೌ ಮೊತ್ತ 1 ವಿಕೆಟ್ಗೆ 90.

ಪೂರನ್ ಈ ಹಿಂದಿನ 17 ಇನಿಂಗ್ಸ್ಗಳಲ್ಲಿ ಪೂರನ್ ಅರ್ಧಶತಕ ಬಾರಿಸಲಾಗಿರಲಿಲ್ಲ. ಈ ಬಾರಿ ಮುಂಬೈ ಕಳಪೆ ಬೌಲಿಂಗ್ ಅವರಿಗೆ ಅವಕಾಶ ನಿಡಿತು. ದೀಪಕ್ ಚಾಹರ್ ಬೌಲಿಂಗ್ನಲ್ಲಿ ಸಿಕ್ಸರ್ನೊಡನೆ 16 ಎಸೆತಗಳಲ್ಲೇ ಅರ್ಧ ಶತಕ ದಾಟಿದರು. ಲಖನೌ ಈ ಹಂತದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿತ್ತು.

ಆದರೆ ಕಾರ್ಬಿನ್ ಬಾಷ್ ಅವರು ಪೂರನ್ ಮತ್ತು ಮಾರ್ಷ್ ಅವರ ವಿಕೆಟ್ಗಳನ್ನು ಪಡೆದು ಲಖನೌ ನಾಗಾಲೋಟಕ್ಕೆ ಕಡಿವಾಣ ಹಾಕಿದರು. ನಾಯಕ ರಿಷಭ್ ಪಂತ್ (15, 10 ಎಸೆತ) ಮತ್ತೊಮ್ಮೆ ವಿಫಲರಾದರು. ಒಂದು ಹಂತದಲ್ಲಿ 1 ವಿಕೆಟ್ಗೆ 123 ರನ್ ಗಳಿಸಿದ್ದ ಲಖನೌ 12 ಓವರುಗಳ ಬಳಿಕ 160 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಏಡನ್ ಮರ್ಕರಂ (ಅಜೇಯ 31) ಮತ್ತು ಹಿಮ್ಮತ್ ಸಿಂಗ್ (ಅಜೇಯ 40) ಅವರು ಕುಸಿತ ತಡೆಗಟ್ಟಿ ಮುರಿಯದ ಆರನೇ ವಿಕೆಟ್ಗೆ 68 ರನ್ ಸೇರಿಸಿದ್ದರಿಂದ ತಂಡ 225ರ ಗಡಿ ದಾಟಿತು.

ಅಲಭ್ಯರಾದ ಪಾಂಡ್ಯ: ಬೆನ್ನುನೋವಿನ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಆಡಲಿಲ್ಲ. ಹೀಗಾಗಿ ಸೂರ್ಯಕುಮಾರ್ ನೇತೃತ್ವ ವಹಿಸಿದರು. ಈ ಹಿಂದಿನ ಕೆಲವು ಪಂದ್ಯಗಳನ್ನು ಕಳೆದುಕೊಂಡಿದ್ದ ರೋಹಿತ್ ಶರ್ಮಾ ತಂಡಕ್ಕೆ ಮರಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-33984837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.