ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಆದರೆ ಡೆಲ್ಲಿ ತಂಡವು ಅನುಭವಿ ಕೆ.ಎಲ್.ರಾಹುಲ್ ಸೇರಿದಂತೆ ಪ್ರಮುಖ ಬ್ಯಾಟರ್ಗಳಿಂದ ಹೆಚ್ಚಿನ ರನ್ನುಗಳನ್ನು ನಿರೀಕ್ಷಿಸುತ್ತಿದೆ.

ಡೆಲ್ಲಿ ಬೌಲರ್ಗಳು ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ 22 ವರ್ಷ ವಯಸ್ಸಿನ ಸಮೀರ್ ರಿಜ್ವಿ ಅವರನ್ನು ಬಿಟ್ಟರೆ ಅನುಭವಿ ಬ್ಯಾಟರ್ಗಳು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಅವರಿಂದ ಹೆಚ್ಚಿನ ಕೊಡುಗೆ ಬಂದರೆ ತಂಡದ ಬಲ ಹೆಚ್ಚಲಿದೆ. ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿರುವ ನಿತೀಶ್ ರಾಣಾ ಅವರ ಮೇಲೆ ಹೆಚ್ಚಿನ ಒತ್ತಡವಿದೆ.

ಪಥುಮ್ ನಿಸಾಂಕ ಈ ಹಿಂದಿನ ಪಂದ್ಯದಲ್ಲಿ ಲಯ ಕಂಡುಕೊಂಡಿದ್ದು, ಟೈಟನ್ಸ್ನ ವೇಗಿಗಳಾದ ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಎದುರಿಸಲು ವಿಶ್ವಾಸ ನೀಡಲಿದೆ.

ಕಳೆದ ವರ್ಷದ ಐಪಿಎಲ್ನ ಕೊನೆಯ ಪಂದ್ಯ ಸೇರಿದಂತೆ ಸತತ ಮೂರು ಅರ್ಧ ಶತಕಗಳನ್ನು ಬಾರಿಸಿರುವ ರಿಜ್ವಿ ಈ ಬಾರಿಯ ಐಪಿಎಲ್ನಲ್ಲಿ ಗಮನಸೆಳೆದ ಬ್ಯಾಟರ್ ಗಳಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರಿಗೆ ಗುಣಮಟ್ಟದ ಬೌಲರ್ಗಳ ಎದುರು ಆಡುವ ಸವಾಲು ಇದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಆರಂಭದಲ್ಲಿ ಅಳೆದೂತೂಗಿ ಆಡಿದ ಅವರು ನಂತರ ಅಬ್ಬರಿಸಿದ್ದರು. ತಂಡ ಅವರ ಆಟದಿಂದ ಜಯಗಳಿಸಿತು. ಮುಕೇಶ್ ಕುಮಾರ್ ಬೌಲಿಂಗ್ನಲ್ಲಿ ಪ್ರಭಾವಿ ಎನಿಸಿದ್ದಾರೆ. ಅಕ್ಷರ್ ಪಟೇಲ್ ಅವರು ಪವರ್ಪ್ಲೆ ಮತ್ತು ಮಧ್ಯಮ ಹಂತದಲ್ಲಿ ಪರಿಣಾಮಕಾರಿ ಎನಿಸಿದ್ದಾರೆ. ಎನ್ಗಿಡಿ ಕೂಡ ಹೆಗಲು ನೀಡಿದ್ದಾರೆ.

ಆದರೆ ಗುಜರಾತ್ ತಂಡ ಈ ಬಾರಿ ಅರಂಭದಲ್ಲಿ ಎಡವಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ 205 ರನ್ಗಳ ಗುರಿ ಎದುರಿಸುವಾಗ ಉತ್ತಮ ಆರಂಭ ಮಾಡಿತು. ಆದರೆ ಪ್ರಬಲ ಮಧ್ಯಮ ಕ್ರಮಾಂಕ ಎಡವಿತು. ಸಾಯಿ ಸುದರ್ಶನ್ ಒದಗಿಸಿದ ಉತ್ತಮ ಆರಂಭ ಫಲ ನೀಡಿರಲಿಲ್ಲ. ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತೆವಾಟಿಯಾ ಅವರು ಒತ್ತಡ ನಿಭಾಯಿಸಬೇಕಾಗಿದೆ.

ನಾಯಕ ಶುಭಮನ್ ಗಿಲ್ ಅವರು ಸ್ನಾಯುಸೆಳೆತದಿಂದಾಗಿ ಈ ಹಿಂದಿನ ಪಂದ್ಯ ಕಳೆದುಕೊಂಡಿದ್ದರು. ಡೆಲ್ಲಿ ವಿರುದ್ಧ ಅವರು ಲಭ್ಯರಾಗಲಿದ್ದಾರೆ ಎಂದು ಹಂಗಾಮಿ ನಾಯಕ ರಶೀದ್ ಖಾನ್ ತಿಳಿಸಿದ್ದಾರೆ.

ಎರಡೂ ಪಂದ್ಯಗಳನ್ನು ಸೋತಿರುವ ಟೈಟನ್ಸ್ ತಂಡ ಔಲಿಂಗ್ನಲ್ಲೂ ಹೆಚ್ಚು ವೃತ್ತಿಪರತೆ ತೋರಿಸಬೇಕಾಗಿದೆ. ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ಕೊಂಚ ದುಬಾರಿಯಾಗಿದ್ದರು. ಪ್ರಸಿದ್ಧಕೃಷ್ಣ ಸ್ಥಿರ ಪ್ರದರ್ಶನ ನೀಡಬೇಕಾಗಿದೆ.

ರಶೀದ್ ಖಾನ್ ಲಯ ಕಂಡುಕೊಂಡಿ ರುವುದು ಸಮಾಧಾನಕರ ಅಂಶ. ಆದರೆ ವರ್ಚಸ್ಸು ಮೂಡಿಸಿದವರು 23 ವರ್ಷ ವಯಸ್ಸಿನ ವೇಗಿ ಅಶೋಕ್ ಶರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.