ನವದೆಹಲಿ (ಪಿಟಿಐ): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬೌಲರ್, ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ ಅವರು ಶನಿವಾರ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಕ್ಯಾಚ್ ಪಡೆಯುವ ಯತ್ನದಲ್ಲಿ ಬಿದ್ದು ಗಾಯಗೊಂಡರು.

ಪಂಜಾಬ್ ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ಅವರು ಅಕ್ಷರ್ ಪಟೇಲ್ ಹಾಕಿದ ಎರಡನೇ ಓವರ್ನ ಎಸೆತವನ್ನು ಹೊಡೆದರು. ಆದರೆ ಚೆಂಡು ಬ್ಯಾಟ್ಗೆ ಅಪ್ಪಳಿಸಿ ಎತ್ತರಕ್ಕೆ ಸಾಗಿತು. ಕ್ಯಾಚ್ ಪಡೆಯಲು ಲುಂಗಿ ಓಡಿದರು. ಆದರೆ ಡೈವ್ ಮಾಡುವ ಯತ್ನದಲ್ಲಿ ಬಿದ್ದರು. ಅಂಗಾತ ಬಿದ್ದ ಅವರ ತಲೆಯ ಹಿಂಭಾಗವು ನೆಲಕ್ಕೆ ಅಪ್ಪಳಿಸಿತು. ಕುತ್ತಿಗೆಯ ಭಾಗವೂ ಗಾಸಿಗೊಂಡಿತು. ಏಳಲು ಯತ್ನಿಸಿದ ಅವರು ಹಾಗೇಯೇ ಕುಸಿದು ಮಲಗಿದರು. ಕೂಡಲೇ ಧಾವಿಸಿ ಬಂದ ವೈದ್ಯಕೀಯ ಸಿಬ್ಬಂದಿಯು ಪ್ರಥಮ ಚಿಕಿತ್ಸೆ ನೀಡಿದರು.

ಮೈದಾನದೊಳಗೇ ಆಂಬುಲೆನ್ಸ್ ಕರೆಸಿ ಲುಂಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಬುಲೆನ್ಸ್ ಮೈದಾನದಿಂದ ‘ಬಿಎಲ್ಕೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಗೆ ಕೇವಲ 11 ನಿಮಿಷಗಳಲ್ಲಿ ತಲುಪಿತು.

ಲುಂಗಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-4-1257383255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.