ಲಖನೌ (ಪಿಟಿಐ): ಗುರುವಾರ ರಾತ್ರಿ ಆಗಾಗ ಸುರಿದು ನಿಂತ ಮಳೆಯ ನಡುವೆ ಮಿಚೆಲ್ ಮಾರ್ಷ್ ಅವರ ಸಿಡಿಲಬ್ಬರದ ಶತಕ ಅರಳಿತು. ಬಳಿಕ, ಪ್ರಿನ್ಸ್ ಯಾದವ್ (33ಕ್ಕೆ3) ಹಾಗೂ ಶಾಬಾಜ್ ಅಹಮದ್ (33ಕ್ಕೆ2) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ಗಳಿಗೆ ಆಘಾತ ನೀಡಿದರು.

ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ಜೈಂಟ್ಸ್ ತಂಡವು 9 ರನ್ಗಳಿಂದ ರೋಚಕ ಗೆಲುವು ಸಾಧಿಸಿತು.

ಏಕನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮಾರ್ಷ್ ಅವರ ಶತಕದ ಬಲದಿಂದ ಲಖನೌ ತಂಡವು 19 ಓವರ್ಗಳಲ್ಲಿ 3 ವಿಕೆಟ್ಗೆ 209 ರನ್ ಗಳಿಸಿತು.

ಸವಾಲಿನ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡದ ಆರಂಭಿಕರಾದ ಜೇಕಬ್ ಬೆಥೆಲ್ (4; 5ಎ) ಹಾಗೂ ವಿರಾಟ್ ಕೊಹ್ಲಿ (0; 2ಎ) ಮತ್ತೆ ವಿಫಲರಾದರು. ಇವರಿಬ್ಬರು ಔಟಾದಾಗ ತಂಡದ ಮೊತ್ತ ಕೇವಲ 9.

ಸಂಕಷ್ಟದಲ್ಲಿದ್ದ ಆರ್ಸಿಬಿ ತಂಡಕ್ಕೆ ರಜತ್ ಪಾಟೀದಾರ್ (61; 31ಎ, 4x3, 6x6) ಹಾಗೂ ದೇವದತ್ತ ಪಡಿಕ್ಕಲ್ (34; 25ಎ) ಮೂರನೇ ವಿಕೆಟ್ಗೆ 95 (53 ಎಸೆತ) ರನ್ ಜೊತೆಯಾಟವಾಡಿ ಆಸರೆಯಾದರು. ಕೊನೆಯಲ್ಲಿ ಟಿಮ್ ಡೇವಿಡ್ (40; 17ಎ, 4x4, 6x3), ಕೃಣಾಲ್ ಪಾಂಡ್ಯ (ಔಟಾಗದೇ 28; 16ಎ) ಹಾಗೂ ರೊಮಾರಿಯೊ ಶೆಫರ್ಡ್ (ಔಟಾಗದೇ 23; 15ಎ) ಹೋರಾಟ ತೋರಿದರಾದರೂ ಗೆಲುವು ಕೈಗೆಟುಕಲಿಲ್ಲ.

ಕೊನೆಯ ಓವರ್ನಲ್ಲಿ ಆರ್ಸಿಬಿ ಗೆಲುವಿಗೆ 20 ರನ್ ಅಗತ್ಯವಿತ್ತು. ಲಖನೌ ನಾಯಕ ಪಂತ್ ಚೆಂಡನ್ನು ಸ್ಪಿನ್ನರ್ ದಿಗ್ವೇಶ್ಗೆ ನೀಡಿದರು. ಕೇವಲ 10 ರನ್ ಬಿಟ್ಟುಕೊಟ್ಟ ದಿಗ್ವೇಶ್, ಲಖನೌ ತಂಡಕ್ಕೆ ಲೀಗ್ನಲ್ಲಿ ಮೂರನೇ ಗೆಲುವು ತಂದುಕೊಟ್ಟರು. ಆರ್ಸಿಬಿ 19 ಓವರ್ಗಳ ಅಂತ್ಯಕ್ಕೆ 6 ವಿಕೆಟ್ಗೆ 203 ರನ್ ಗಳಿಸಿತು. ಲಖನೌ ತಂಡವು ಇದಕ್ಕೆ ಮೊದಲು ಹಾಲಿ ಲೀಗ್ನಲ್ಲಿ ಸತತ ಆರು ಪಂದ್ಯಗಳಲ್ಲಿ ಸೋಲನುಭವಿಸಿತ್ತು.

ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆತಿಥೇಯ ತಂಡದ ಆರಂಭಿಕ ಜೋಡಿ ಮಿಚೆಲ್ ಮಾರ್ಷ್ (111; 51ಎ) ಅವರು ಯುವ ಆಟಗಾರ ಅರ್ಷಿಣ್ ಕುಲಕರ್ಣಿ (17 ರನ್) ಅವರೊಂದಿಗೆ ಅಮೋಘ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 95 ರನ್ ಸೇರಿಸಿದರು. ಅದರಲ್ಲಿ ಮಾರ್ಷ್ ಅವರದ್ದೇ ಸಿಂಹಪಾಲು.

ಐಪಿಎಲ್ನಲ್ಲಿ 200ನೇ ಪಂದ್ಯವಾಡಿದ ಭುವನೇಶ್ವರ್ ಕುಮಾರ್ ಮತ್ತು ಸ್ಪಿನ್ನರ್ ಕೃಣಾಲ್ ಪಾಂಡ್ಯ ಅವರನ್ನು ಬಿಟ್ಟರೆ ಉಳಿದ ಬೌಲರ್ಗಳು ದುಬಾರಿಯಾದರು. ಎಲ್ಲರಿಗೂ ಮಾರ್ಷ್ ಬಿಸಿ ಮುಟ್ಟಿಸಿದರು.

10ನೇ ಓವರ್ನಲ್ಲಿ ಕುಲಕರ್ಣಿ ವಿಕೆಟ್ ಗಳಿಸಿದ ಕೃಣಾಲ್ ಅವರು ಜೊತೆಯಾಟವನ್ನು ಮುರಿದರು. ಆಗ ಕ್ರೀಸ್ಗೆ ಬಂದ ನಿಕೊಲಸ್ ಪೂರನ್ (ಬ್ಯಾಟಿಂಗ್ 38; 23ಎ, 4x4, 6x1) ಅವರೊಂದಿಗೂ ಉತ್ತಮ ಜೊತೆಯಾಟವನ್ನು ಮಾರ್ಷ್ ಬೆಳೆಸಿದರು.

ಈ ಅವಧಿಯಲ್ಲಿ ಮೂರು ಸಲ (ಓವರ್: 2ನೇ, 9ನೇ ಮತ್ತು 14ನೇ) ಮಳೆಯಿಂದಾಗಿ ಆಟ ನಿಂತಿತ್ತು. ಮಳೆ ಬಂದಾಗೊಮ್ಮೆ 15–20 ನಿಮಿಷ ಆಟ ಸ್ಥಗಿತವಾಗಿ ಮತ್ತೆ ಆರಂಭವಾಯಿತು. ಆದರೂ ಮಾರ್ಷ್ ಅವರ ಏಕಾಗ್ರತೆ ಮತ್ತು ಲಯಕ್ಕೆ ಯಾವುದೇ ಭಂಗ ಬರಲಿಲ್ಲ. ಬೌಲರ್ಗಳನ್ನು ದಂಡಿಸಿದರು.

ಮಾರ್ಷ್ ಅವರು 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟು 49 ಎಸೆತಗಳಲ್ಲಿ 100ರ ಗಡಿ ದಾಟಿದರು. ಇದರಲ್ಲಿ ತಲಾ 9 ಬೌಂಡರಿ ಮತ್ತು ಸಿಕ್ಸರ್ಗಳಿದ್ದವು. ಅಮೋಘವಾದ ಡ್ರೈವ್ಗಳು ಮತ್ತು ಫ್ಲಿಕ್ಗಳ ಆಟದ ಸೊಬಗನ್ನು ಅವರು ಉಣಬಡಿಸಿದರು.

ಕೊನೆಯಲ್ಲಿ ನಾಯಕ ರಿಷಭ್ ಪಂತ್ (ಔಟಾಗದೇ 32; 10ಎ, 4x4, 6x2) ಮಿಂಚಿನ ಬ್ಯಾಟಿಂಗ್ ಮೂಲಕ ತಂಡವನ್ನು 200ರ ಗಡಿ ದಾಟಿಸಿದರು. ಮಳೆಯ ಅಡಚಣೆಯಿಂದಾಗಿ ಇನಿಂಗ್ಸ್ ಅನ್ನು ತಲಾ 19 ಓವರ್ಗಳಿಗೆ ಇಳಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-4-1500280612

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.