ಲಖನೌ : ಕರ್ನಾಟಕದ ಪ್ರಸಿದ್ಧಕೃಷ್ಣ ಅವರ ಅಮೋಘ ಬೌಲಿಂಗ್ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಭಾನುವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಜಯಿಸಿತು.

ಏಕನಾ ಕ್ರೀಡಾಂಗಣದಲ್ಲಿ ಬೆಂಗಳೂರಿನ ವೇಗದ ಬೌಲರ್ ಪ್ರಸಿದ್ಧ (4-0-28-4) ಅವರ ನಿಖರ ದಾಳಿಯ ಮುಂದೆ ಆತಿಥೇಯ ಲಖನೌ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 164 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡವು 7 ವಿಕೆಟ್ಗಳಿಂದ ಜಯಿಸಿತು. ಟೂರ್ನಿಯಲ್ಲಿ ಪ್ರಸಿದ್ಧ ನಾಲ್ಕು ಪಂದ್ಯಗಳಿಂದ ಒಟ್ಟು 10 ವಿಕೆಟ್ ಗಳಿಸಿದರು.

ನಾಯಕ ಶುಭಮನ್ ಗಿಲ್ (56; 40ಎ, 4x6, 6x1) ಮತ್ತು ಜೋಸ್ ಬಟ್ಲರ್ (60; 37ಎ, 4x11) ಅಮೋಘ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನ ಹಾದಿಯನ್ನು ಸರಳಗೊಳಿಸಿದರು. 18.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 165 ರನ್ ಗಳಿಸಿದ ಗುಜರಾತ್ ಜಯಭೇರಿ ಬಾರಿಸಿತು. ಗಿಲ್ ಮತ್ತು ಬಟ್ಲರ್ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಗಳಿಸಿದರು.

ಟಾಸ್ ಗೆದ್ದ ಟೈಟನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಕಗಿಸೊ ರಬಾಡ ಹಾಕಿದ ಇನಿಂಗ್ಸ್ನ ಎರಡನೇ ಓವರ್ನಲ್ಲಿ ಮಿಚೆಲ್ ಮಾರ್ಷ್ (11 ರನ್) ಅವರು ಔಟಾದರು. ಇದಾಗಿ ಎರಡು ಓವರ್ಗಳ ನಂತರ ಮೊಹಮ್ಮದ್ ಸಿರಾಜ್ ಅವರು ರಿಷಭ್ ಪಂತ್ (18; 11ಎ)ವಿಕೆಟ್ ಕಬಳಿಸಿ ಮತ್ತೊಂದು ಪೆಟ್ಟು ಕೊಟ್ಟರು. ಈ ಸಂದರ್ಭವನ್ನು ಪ್ರಸಿದ್ಧ ಸಮರ್ಥವಾಗಿ ಬಳಸಿಕೊಂಡರು. ಪವರ್ಪ್ಲೇ ನಂತರದ ಓವರ್ನಲ್ಲಿ ಆರಂಭಿಕ ಬ್ಯಾಟರ್ ಏಡನ್ ಮರ್ಕರಂ (30; 21ಎ, 4X5, 6X1) ವಿಕೆಟ್ ಪಡೆದು ತಮ್ಮ ಖಾತೆ ತೆರೆದರು. ಆಯುಷ್ ಬಡೋನಿ (9ರನ್), ನಿಕೊಲಸ್ ಪೂರನ್ (19 ರನ್) ಹಾಗೂ ಕಳೆದ ಪಂದ್ಯದಲ್ಲಿ ಆರ್ಭಟಿಸಿದ್ದ ಮುಕುಲ್ ಚೌಧರಿ (18 ರನ್) ಅವರಿಗೆ ಡಗ್ಔಟ್ ದಾರಿ ತೋರಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್ ಜೈಂಟ್ಸ್: 20 ಓವರ್ಗಳಲ್ಲಿ 8ಕ್ಕೆ164 (ಏಡನ್ ಮರ್ಕರಂ 30, ರಿಷಭ್ ಪಂತ್ 18, ನಿಕೊಲಸ್ ಪೂರನ್ 19, ಅಬ್ದುಲ್ ಸಮದ್ 18, ಮುಕುಲ್ ಚೌಧರಿ 18, ಜಾರ್ಜ್ ಲಿಂಡೆ 16, ಮೊಹಮ್ಮದ್ ಶಮಿ ಔಟಾಗದೇ 12, ಅಶೋಕ್ ಶರ್ಮಾ 32ಕ್ಕೆ2, ಪ್ರಸಿದ್ಧಕೃಷ್ಣ 28ಕ್ಕೆ4) ಗುಜರಾತ್ ಟೈಟನ್ಸ್: 18.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 165 (ಸಾಯಿ ಸುದರ್ಶನ್ 15, ಶುಭಮನ್ ಗಿಲ್ 56, ಜೋಸ್ ಬಟ್ಲರ್ 60, ವಾಷಿಂಗ್ಟನ್ ಸುಂದರ್ ಔಟಾಗದೇ 21, ರಾಹುಲ್ ತೆವಾಟಿಯಾ ಔಟಾಗದೇ 10, ಮೊಹಮ್ಮದ್ ಶಮಿ 36ಕ್ಕೆ1, ಪ್ರಿನ್ಸ್ ಯಾದವ್ 31ಕ್ಕೆ1, ದಿಗ್ವೇಶ್ ಸಿಂಗ್ ರಾಠಿ 31ಕ್ಕೆ1) ಫಲಿತಾಂಶ: ಗುಜರಾತ್ ಟೈಟನ್ಸ್ಗೆ 7 ವಿಕೆಟ್ ಜಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-51-733946104

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.