ಜೈಪುರ: ಪಂಜಾಬ್ ಕಿಂಗ್ಸ್ ತಂಡಕ್ಕೆ ಮೊದಲ ಸೋಲಿನ ರುಚಿ ತೋರಿಸಿದ ಸಂತಸದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವು ಶುಕ್ರವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಳಗವನ್ನು ಎದುರಿಸಲಿದೆ.

ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡವು ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಅವರ ಅಬ್ಬರದ ಆರಂಭದ ಬಲದ ಮೇಲೆ ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟುತ್ತಿದೆ. ಪಂಜಾಬ್ ಎದುರಿನ ಪಂದ್ಯದಲ್ಲಿ ವೈಭವ್ ಐದು ಸಿಕ್ಸರ್ ಹೊಡೆದು ಮಿಂಚಿದ್ದರು. ಯಶಸ್ವಿ ಅರ್ಧಶತಕ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಡೊನೊವ್ಯಾನ್ ಫೆರಿರಾ ಅಜೇಯ ಅರ್ಧಶತಕ ಗಳಿಸಿದ್ದರು. ಅದರಿಂದಾಗಿ ಕಠಿಣ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದಿತ್ತು. ಸದ್ಯ ‘ಇ ಸಿಗರೇಟ್’ ವಿವಾದದಲ್ಲಿ ಸಿಲುಕಿರುವ ನಾಯಕ ರಿಯಾನ್ ಪರಾಗ್ ಅವರು ಇದುವರೆಗೂ ಬ್ಯಾಟಿಂಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್ ಮತ್ತು ಕನ್ನಡಿಗ ಯಶರಾಜ್ ಪುಂಜಾ ಅವರು ವಿಕೆಟ್ ಗಳಿಸಿದ್ದರು. ಆದರೆ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜ ವಿಕೆಟ್ ಪಡೆಯದಿದ್ದರೂ ಉಳಿದೆಲ್ಲ ಬೌಲರ್ಗಳಿಗಿಂತ ಕಡಿಮೆ ರನ್ ಕೊಟ್ಟಿದ್ದರು. ಈ ಬೌಲಿಂಗ್ ಪಡೆಯ ಮುಂದೆ ಡೆಲ್ಲಿ ತಂಡದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ.

ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡವು ತನ್ನ ಕಳೆದೆರಡು ಪಂದ್ಯಗಳಲ್ಲಿ ಸೋತಿದೆ. ಆದರೆ ಪಂಜಾಬ್ ಎದುರು 264 ರನ್ ಗುರಿಯೊಡ್ಡಿಯೂ ಸೋತಿದ್ದ ತಂಡವು, ನಂತರ ಆರ್ಸಿಬಿ ಎದುರು ಕೇವಲ 75 ರನ್ಗಳಿಗೆ ಕುಸಿದಿತ್ತು. ಕೆ.ಎಲ್. ರಾಹುಲ್ ಪಂಜಾಬ್ ಎದುರು ಶತಕ ಹೊಡೆದಿದ್ದರು. ಆದರೆ ಅವರೂ ಸೇರಿದಂತೆ ಎಲ್ಲ ಬ್ಯಾಟರ್ಗಳೂ ಆರ್ಸಿಬಿ ಎದುರು ವಿಫಲರಾಗಿದ್ದರು.

ಡೆಲ್ಲಿ ತಂಡದ ಬೌಲಿಂಗ್ ಪಡೆಯಲ್ಲಿ ಲುಂಗಿ ಎನ್ಗಿಡಿ ಆಡುವುದು ಇನ್ನೂ ಖಚಿತವಾಗಿಲ್ಲ. ಆದರೆ ಅನುಭವಿ ವೇಗಿ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರು ತಂಡಕ್ಕೆ ಮರಳಿದ್ದಾರೆ. ಕಳೆದ ಪಂದ್ಯದಲ್ಲಿ ಕೈಲ್ ಜೆಮಿಸನ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ, ದುಷ್ಮಂತ ಚಮೀರಾ, ನಾಯಕ ಅಕ್ಷರ್ ಮತ್ತು ಟಿ ನಟರಾಜನ್ ಅವರು ತಮ್ಮ ನೈಜ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಅಗತ್ಯ ಈಗ ಇದೆ. ಪ್ಲೇ ಆಫ್ ಪ್ರವೇಶದ ಅವಕಾಶ ಜೀವಂತವಾಗಿ ಇರಬೇಕಾದರೆ ಈ ಪಂದ್ಯವೂ ಸೇರಿದಂತೆ ಮುಂದಿನ ಎಲ್ಲದರಲ್ಲೂ ಜಯಿಸಿದರೆ ಅನುಕೂಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.