ಹೈದರಾಬಾದ್ (ಪಿಟಿಐ): ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್ ತಂಡವು ತನ್ನ ಬ್ಯಾಟಿಂಗ್ ವಿಭಾಗ ದಲ್ಲಿರುವ ಲೋಪಗಳನ್ನು ಸುಧಾರಿಸಿ ಕೊಂಡು ಸನ್ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯಲು ಸಿದ್ಧವಾಗಿದೆ.

ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ರೋಚಕ ಘಟ್ಟ ತಲುಪುವ ನಿರೀಕ್ಷೆ ಮೂಡಿಸಿದೆ. ಏಕೆಂದರೆ; ಪಂಜಾಬ್ ತಂಡವು ಈ ಟೂರ್ನಿಯಲ್ಲಿ ತನ್ನ ಮೊದಲ ಏಳು ಪಂದ್ಯಗಳ ಪೈಕಿ ಆರರಲ್ಲಿ ಜಯಭೇರಿ ಬಾರಿಸಿತ್ತು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸೋತಿತು. ಆದರೂ 13 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾ ಬಾದ್, ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ತಲಾ 12 ಅಂಕ ಗಳಿಸಿವೆ. ಕ್ರಮವಾಗಿ 2ರಿಂದ 5ನೇ ಸ್ಥಾನದಲ್ಲಿವೆ. ಆದ್ದರಿಂದ ಈ ಪಂದ್ಯದಲ್ಲಿ ಸನ್ರೈಸರ್ಸ್ ತಂಡವು ಗೆದ್ದರೆ ಅಗ್ರಸ್ಥಾನ ಕ್ಕೇರಲಿದೆ. ಆತಿಥೇಯ ಬಳಗಕ್ಕೆ ಇದು ಮುಯ್ಯಿ ತೀರಿಸಿಕೊಳ್ಳುವ ಅವಕಾಶವೂ ಹೌದು. ಏಕೆಂದರೆ ಮೊದಲ ಸುತ್ತಿನಲ್ಲಿ ಸನ್ರೈಸರ್ಸ್ ತಂಡವು ಪಂಜಾಬ್ ಎದುರು ಮುಲ್ಲನಪುರದಲ್ಲಿ ಸೋತಿತ್ತು.

ಹಾಲಿ ರನ್ನರ್ಸ್ ಅಪ್ ಪಂಜಾಬ್ ತಂಡದ ಪ್ರಿಯಾಂಶ್ ಆರ್ಯ, ಪ್ರಭ ಸಿಮ್ರನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಅವರು ಉತ್ತಮ ಲಯದಲ್ಲಿ ದ್ದಾರೆ. ಆದರೆ ಕಳೆದ ಎರಡೂ ಹಣಾಹಣಿಗಳಲ್ಲಿ ಅವಸರದ ಹೊಡೆತಗಳಿಗೆ ಪ್ರಯತ್ನಿಸಿದ್ದರಿಂದ ದಂಡ ತೆತ್ತರು. ಅದಕ್ಕಾಗಿ ತಂಡವೂ ಪರಿತಪಿಸಬೇಕಾಯಿತು.

ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಜೊತೆಯಾಟಗಳು ಮೂಡಿ ಬಂದರೆ ಮಾತ್ರ ಉತ್ತಮ ಮೊತ್ತ ಗಳಿಸಲು ಸಾಧ್ಯವಾಗಲಿದೆ. ಅರ್ಷದೀಪ್ ಸಿಂಗ್, ವೈಶಾಖ ವಿಜಯಕುಮಾರ್, ಝೇವಿಯರ್ ಬಾರ್ಟಲೆಟ್, ಮಾರ್ಕೊ ಯಾನ್ಸೆನ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಇರುವ ಬೌಲಿಂಗ್ ಬಳಗವು ಸ್ಥಿರತೆ ಕಾಪಾಡಿಕೊಳ್ಳುವ ಅಗತ್ಯವಿದೆ. ಏಕೆಂದರೆ ಸನ್ರೈಸರ್ಸ್ ತಂಡದ ಬ್ಯಾಟಿಂಗ್ ವಿಭಾಗವು ಬಲಾಢ್ಯವಾಗಿದೆ.

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಅವರು ಉತ್ತಮ ಆರಂಭ ನೀಡಿದರೆ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಅನಿಕೇತ್ ವರ್ಮಾ ಅವರು ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಬಲ್ಲರು. ಈ ಹಿಂದಿನ ಪಂದ್ಯದಲ್ಲಿ ಇಂತಹ ಆಟವು ತಂಡದಿಂದ ಮೂಡಿಬಂದಿದೆ. ಬೌಲಿಂಗ್ನಲ್ಲಿ ಪ್ಯಾಟ್ ಕಮಿನ್ಸ್ ಮರಳಿರುವುದರಿಂದ ತಂಡದ ಬಲ ಹೆಚ್ಚಿದೆ. ಸನ್ ತಂಡವು ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಸೋತಿತ್ತು. ಮತ್ತೆ ಪುಟಿದೇಳುವ ಛಲದಲ್ಲಿದೆ. ಇನ್ನೊಂದೆಡೆ ಪಂಜಾಬ್ ತಂಡವು ಗೆಲುವಿನ ಹಳಿಗೆ ಮರಳುವತ್ತ ಚಿತ್ತ ನೆಟ್ಟಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1381963219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.