ಮುಲ್ಲನಪುರ (ಪಿಟಿಐ): ವೈಭವ್ ಸೂರ್ಯವಂಶಿ ಈ ಹಿಂದಿನ ಪಂದ್ಯಗಳಲ್ಲಿ ಆಡಿದ್ದಕ್ಕಿಂತಲೂ ವಿಭಿನ್ನವಾದ ಆಟವನ್ನು ಶುಕ್ರವಾರ ಗುಜರಾತ್ ಟೈಟನ್ಸ್ ಎದುರು ಆಡಿದರು.

ಒತ್ತಡದ ಸಂದರ್ಭದಲ್ಲಿಯೂ ಬೆರಗುಗೊಳಿಸುವಂತಹ ಕೆಲವು ಹೊಡೆತ ಗಳನ್ನು ಪ್ರಯೋಗಿಸಿ, ಪ್ರಬುದ್ಧ ಆಟವಾಡಿದ ವೈಭವ್ ಮತ್ತೊಮ್ಮೆ ಶತಕದಂಚಿನಲ್ಲಿ ಎಡವಿದರು. ಇನ್ನೊಂದೆಡೆ ಡೊನೊವ್ಯಾನ್ ಫೆರಿರಾ ಮಿಂಚಿದ್ದರಿಂದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 214 ರನ್ ಗಳಿಸಿತು.

ಕ್ವಾಲಿಫಯರ್ (2) ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ಅವರು ಆರಂಭದಲ್ಲಿಯೇ ರಾಯಲ್ಸ್ಗೆ ಬಲವಾದ ಪೆಟ್ಟುಕೊಟ್ಟರು. ಸಿರಾಜ್ ಅವರು ಯಶಸ್ವಿ ಜೈಸ್ವಾಲ್ ಅವರನ್ನು ಮೊದಲ ಓವರ್ನಲ್ಲಿಯೇ ಔಟ್ ಮಾಡಿದರು. ಎರಡನೇಓವರ್ನಲ್ಲಿ ಕಗಿಸೊ ಅವರು ಧ್ರುವ ಜುರೇಲ್ ಗೆ ಡಗ್ಔಟ್ ಹಾದಿ ತೋರಿಸಿದರು. ಕೇವಲ 9 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ರಾಯಲ್ಸ್ ಪಾಳೆಯದಲ್ಲಿ ಆತಂಕ ಮನೆಮಾಡಿತ್ತು. ರಬಾಡ, ಸಿರಾಜ್ ಮತ್ತು ಪ್ರಸಿದ್ಧಕೃಷ್ಣ ಅವರು ಸ್ಪಷ್ಟ ಯೋಜನೆಯೊಂದಿಗೆ ಬೌಲಿಂಗ್ ಮಾಡಿದರು. ವೈಭವ್ ಅವರನ್ನು ಕಟ್ಟಿಹಾಕಲು ಬ್ಯಾಕ್ ಆಫ್ ಲೆಂಗ್ತ್ ಬೌಲಿಂಗ್ ಮಾಡಿದರು. ಬೌನ್ಸರ್ ಕೂಡ ಪ್ರಯೋಗಿಸಿದರು. ಕೆಲವು ನಿಧಾನ ಎಸೆತಗಳನ್ನೂ ಹಾಕಿದರು. ಪಿಚ್ನಲ್ಲಿ ಚೆಂಡು ಬ್ಯಾಟ್ಗೆ ಬರುತ್ತಿರಲಿಲ್ಲ. ಎಲಿಮಿನೇಟರ್ ನಡೆದಿದ್ದ ಪಿಚ್ ಇದೇ ಆಗಿತ್ತು. ಆದರೂ ಭಿನ್ನವಾಗಿತ್ತು. ಅದರಿಂದಾಗಿ ಆರಂಭದಲ್ಲಿ ಕೆಲವು ಎಸೆತಗಳನ್ನು ಆಡುವಲ್ಲಿ ವೈಭವ್ ತುಸು ಪ್ರಯಾಸಪಟ್ಟರು.

ನಂತರ ಕುದುರಿಕೊಂಡ ಅವರು, ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜ ಜೊತೆಗೆ ವೈಭವ್ ಇನಿಂಗ್ಸ್ ಬೆಳೆಸುವತ್ತ ಚಿತ್ತ ನೆಟ್ಟರು. 47 ಎಸೆತಗಳಲ್ಲಿ 96 ರನ್ ಗಳಿಸಿದರು. ರಬಾಡ ಹಾಕಿದ್ದ 153 ಕಿ.ಮೀ ವೇಗದ ಎಸೆತವನ್ನೂ ವೈಭವ್ ಸಿಕ್ಸರ್ ಎತ್ತಿದರು. ಜಡೇಜ 35 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟದಲ್ಲಿ 127 ರನ್ಗಳು ಸೇರಿದವು. ಈ ನಡುವೆ ಮೊಣಕೈ ನೋವಿನಿಂದಾಗಿ ಜಡೇಜ ನಿವೃತ್ತರಾದರು.

ವೈಭವ್ ಅವರು 46 ರನ್ ಗಳಿಸಿದ್ದ ಸಂದರ್ಭದಲ್ಲಿ ಸಾಯಿ ಸುದರ್ಶನ್ ಅವರು ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದ್ದರು. ಇದು ಕೂಡ ಟೈಟನ್ಸ್ಗೆ ದುಬಾರಿಯಾಯಿತು. ಜೇಸನ್ ಹೋಲ್ಡರ್ ಎಸೆತಗಳನ್ನು ಕೂಡ ವೈಭವ್ ಬೌಂಡರಿಗೆರೆ ದಾಟಿಸಿದರು. ಆದರೆ ಶತಕಕ್ಕೆ ನಾಲ್ಕು ರನ್ ಅಗತ್ಯವಿದ್ದಾಗ ಕಗಿಸೊ ಬೌಲಿಂಗ್ನಲ್ಲಿ ಅಪ್ಪರ್ ಕಟ್ ಮಾಡಲು ಹೋಗಿ ಮತ್ತೊಮ್ಮೆ ಕೈಸುಟ್ಟುಕೊಂಡರು. ಥರ್ಡ್ಮ್ಯಾನ್ ಬೌಂಡರಿಯ ಸಮೀಪವಿದ್ದ ಪ್ರಸಿದ್ಧಕೃಷ್ಣ ಕ್ಯಾಚ್ ಪಡೆದರು. ವೈಭವ್ ಬೇಸರದಿಂದ ಡಗ್ಔಟ್ಗೆ ತೆರಳಿದರು. ಮೂರು ದಿನಗಳ ಹಿಂದೆ ಇದೇ ಮೈದಾನದಲ್ಲಿ 29 ಎಸೆತಗಳಲ್ಲಿ ಅವರು 97 ರನ್ ಗಳಿಸಿದ್ದರು. ಆಗಲೂ ಇಂತಹದೇ ಹೊಡೆತಕ್ಕೆ ವಿಕೆಟ್ ಕಳೆದುಕೊಂಡಿದ್ದರು.

ವೈಭವ್ ನಿರ್ಗಮಿಸಿದಾಗ ತಂಡದ ಮೊತ್ತ ಇನ್ನೂ ಇನ್ನೂರರ ಗಡಿ ದಾಟಿರಲಿಲ್ಲ. ಆಗ ಡೊನೊವ್ಯಾನ್ ಫೆರಿರಾ 11 ಎಸೆತಗಳಲ್ಲಿ 38 ರನ್ ಹೊಡೆದರು. ನಾಲ್ಕು ಸಿಕ್ಸರ್ ಸಿಡಿಸಿದರು. ರಶೀದ್ ಹಾಕಿದ ಕೊನೆಯ ಓವರ್ನಲ್ಲಿ 27 ರನ್ ಸೂರೆ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-870454611

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.