ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಆತಿಥ್ಯ ವಹಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ರಾಜ್ಯ ಸರ್ಕಾರವು ಸೋಮವಾರ ಅಧಿಕೃತವಾಗಿ ಅನುಮತಿ ನೀಡಿದೆ.

2025ರ ಜೂನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ವೇಳೆ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ನಂತರ ಇಲ್ಲಿ ಐಪಿಎಲ್ ನಡೆಯುವ ಬಗ್ಗೆ ಇದ್ದ ಅನಿಶ್ಚಿತತೆಗಳು ಇದರಿಂದಾಗಿ ದೂರವಾಗಿವೆ.

ಈ ಬಾರಿಯ ವೇಳಾಪಟ್ಟಿಯ ಪ್ರಕಾರ ಈ ಕ್ರೀಡಾಂಗಣದಲ್ಲಿ ಇದೇ ತಿಂಗಳ 28ರಂದು ಐಪಿಎಲ್ನ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 13ರಂದು ಅಣಕು ಅವಲೋಕನ ನಡೆಸಿದ ತಜ್ಞರ ಸಮಿತಿಯು ಇಲ್ಲಿ ನಡೆದಿರುವ ನವೀಕರಣ ಕಾಮಗಾರಿ ಮತ್ತು ಪಂದ್ಯಪೂರ್ವ ಸಿದ್ಧತೆಗಳ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದೆ’ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪಂದ್ಯಗಳನ್ನು ನಡೆಸಲು ಅನುಮತಿ ದೊರಕಿದರೂ, ತಜ್ಞರ ಸಮಿತಿ ಮತ್ತು ಪೊಲೀಸ್ ಇಲಾಖೆಯು ಕಾರ್ಯಾಚರಣೆ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿ ಕೆಎಸ್ಸಿಎಗೆ ಕೆಲವು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (ಎಸ್ಒಪಿ) ಪಾಲಿಸಲು ಸೂಚಿಸಿದೆ.

ಮೊದಲ ಪಂದ್ಯಕ್ಕೆ ಮುನ್ನ ಸಂಸ್ಥೆಯು, ಮಾರ್ಚ್ 26ರ ಆಸುಪಾಸಿನಲ್ಲಿ 2–3 ಬಾರಿ ಅಣಕು ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

‘ಆರ್ಸಿಬಿ ಪಂದ್ಯಗಳ ಟಿಕೆಟ್ ಹೊಂದಿರುವವರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಿರುವ ಮೆಟ್ರೊ ನಿಗಮವು, ಮುಂದಿನ ದಿನಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳ ಆತಿಥ್ಯದ ವೇಳೆಗೂ ಕೆಎಸ್ಸಿಎ ಜೊತೆ ಪಾಲುದಾರಿಕೆ ವಹಿಸಲಿದೆ’ ಎಂದು ಮೆನನ್ ವಿಶ್ವಾಸ ವ್ಯಕ್ತಪಡಿಸಿದರು.

ಅನ್ಬಾಕ್ಸ್ ಕಾರ್ಯಕ್ರಮ: ಆರ್ಸಿಬಿಯ ಅನ್ಬಾಕ್ಸ್ ಕಾರ್ಯಕ್ರಮವೂ ಇಲ್ಲಿ ನಡೆಯಲಿದೆ. ಮೊದಲ ಹಂತದ ವೇಳಾಪಟ್ಟಿಯಲ್ಲಿ ಆರ್ಸಿಬಿಯ ಎರಡು ಪಂದ್ಯಗಳು ಈ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಏಪ್ರಿಲ್ 5ರಂದು ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ತವರಿನ ಏಳು ಪಂದ್ಯಗಳ ಪೈಕಿ ಆರ್ಸಿಬಿ ತಂಡವು ಐದು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಉಳಿದ ಎರಡು ಪಂದ್ಯ ಗಳನ್ನು ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲು ನಿರ್ಧರಿಸಿದೆ.

ಆರ್ಸಿಬಿ ಆಟಗಾರರು ಮಂಗಳವಾರ ಇಲ್ಲಿ ಸೇರಿಕೊಳ್ಳಲಿದ್ದು, ಬುಧವಾರ ತರಬೇತಿ ಶಿಬಿರ ಆರಂಭವಾಗುವ ನಿರೀಕ್ಷೆಯಿದೆ.

ಗೃಹ ಸಚಿವರೊಂದಿಗೆ ಭಾಗೀದಾರರ ಸಭೆ

ಗೃಹ ಸಚಿವ ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌದದಲ್ಲಿ ತಜ್ಞರ ಸಮಿತಿಯ ಜೊತೆಗೆ ಕೆಎಸ್ಸಿಎ, ಆರ್ಸಿಬಿ ಮತ್ತು ಕಾರ್ಯಕ್ರಮ ಆಯೋಜಕರಾದ ಡಿಎನ್ಎ ಪ್ರತಿನಿಧಿಗಳ ಸಭೆ ನಡೆಯಿತು. ಸಭೆಯ ನಂತರ ಸರ್ಕಾರದ ಅನುಮತಿ ದೊರಕಿದೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಅನುಮತಿ ನೀಡುವಲ್ಲಿ ಸಚಿವ ಪರಮೇಶ್ವರ ಅವರ ನೇತೃತ್ವ, ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಕೆಎಸ್ಸಿಎ ಕೃತಜ್ಞತೆ ಸಲ್ಲಿಸುತ್ತದೆ’ ಎಂದು ಅವರು ಹೇಳಿದ್ದಾರೆ. ತಜ್ಞರ ಸಮಿತಿ ಮುಖ್ಯಸ್ಥ ಮಹೇಶ್ವರ ರಾವ್, ಸದಸ್ಯ ಕಾರ್ಯದರ್ಶಿಯಾಗಿರುವ ಪೊಲೀಸ್ ಆಯುಕ್ತ ಸೀಮಾಂತಕುಮಾರ್ ಸಿಂಗ್ ಮತ್ತು ಸದಸ್ಯರಿಗೂ ಕೃತಜ್ಞತೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.