ಬುಧವಾರ, ಜುಲೈ 6, 2022
22 °C

IPL 2022: ಮಾರಾಟವಾಗದೆ ಉಳಿದ 'ಮಿಸ್ಟರ್ ಐಪಿಎಲ್' ರೈನಾ...ಇಲ್ಲಿದೆ ಪೂರ್ಣ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಟಿ20 ಕ್ರಿಕೆಟ್‌ನ ಮೆಗಾ ಹರಾಜು ಪ್ರಕ್ರಿಯೆಯು ಭಾನುವಾರ ಮುಕ್ತಾಯವಾಗಿದೆ. ಆದರೆ, ಹರಾಜು ಪ್ರಕ್ರಿಯೆಯಲ್ಲಿ ಭಾರತದ ಸುರೇಶ್ ರೈನಾ, ವೇಗಿ ಇಶಾಂತ್ ಶರ್ಮಾ, ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್, ಆ್ಯರನ್ ಫಿಂಚ್ ಬಿಕರಿಯಾಗದೆ ಉಳಿದಿದ್ದಾರೆ.

2008ರಿಂದ 2021ರ ವರೆಗೂ ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಸುರೇಶ್‌ ರೈನಾ ( ಒಟ್ಟು ₹110.7 ಕೋಟಿ) ಅವರನ್ನು ಈ ಬಾರಿ ಯಾವುದೇ ತಂಡ ಆಯ್ಕೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ರೈನಾ ಬಿಕರಿಯಾಗದೆ ಉಳಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ 2020ರ ಐಪಿಎಲ್‌ನಿಂದ ರೈನಾ ಮನೆಗೆ ಮರಳಿದ್ದರು. 2021ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮತ್ತೆ ಸೇರ್ಪಡೆಯಾಗಿದ್ದ ಅವರು ಕೇವಲ 160 ರನ್‌ ಗಳಿಸಿದ್ದರು. ಬ್ಯಾಟಿಂಗ್‌ ಸರಾಸರಿ 17.77 ದಾಖಲಾಗಿತ್ತು.

'ಮಿಸ್ಟರ್‌ ಐಪಿಎಲ್‌' ಎಂದೇ ಹೆಸರಾಗಿದ್ದ ರೈನಾ ಅವರಿಗೆ ಮೂಲ ಬೆಲೆ ₹2 ಕೋಟಿ ನಿಗದಿಯಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಬಾರಿ ಚಾಂಪಿಯನ್ ಆಗುವಲ್ಲಿ ಸುರೇಶ್ ರೈನಾ ಪಾತ್ರ ಪ್ರಮುಖವಾಗಿತ್ತು. ಐಪಿಎಲ್‌ ಟೂರ್ನಿಯಲ್ಲಿ ಅವರು ಈವರೆಗೂ 5,528 ರನ್‌ ಗಳಿಸಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ಒಟ್ಟು 204 ಆಟಗಾರರು ತಂಡಗಳಿಗೆ ಸೇರಿದ್ದು, ಫ್ರಾಂಚೈಸಿಗಳು ₹551.70 ಕೋಟಿ ವೆಚ್ಚ ಮಾಡಿವೆ.

ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಇಮ್ರಾನ್‌ ತಾಹೀರ್, ಆ್ಯಡಂ ಜಂಪಾ, ಆ್ಯರನ್ ಫಿಂಚ್, ಡೇವಿಡ್ ಮಿಲಾನ್, ಉಸ್ಮಾನ್ ಖ್ವಾಜಾ, ಕೇದಾರ್ ಜಾಧವ್, ಮಾರ್ಟಿನ್ ಗಪ್ಟಿಲ್, ಕಾರ್ಲೊಸ್ ಬ್ರೇಥ್‌ವೇಟ್, ಚೇತೇಶ್ವರ್ ಪೂಜಾರ, ಮುರಳಿ ವಿಜಯ್,...ಮಾರಾಟವಾಗದ ಪ್ರಮುಖ ಆಟಗಾರರು.

ಮೊದಲ ದಿನವೇ ಜಾಕ್‌ಪಾಟ್ ಹೊಡೆದಿದ್ದ ಇಶಾನ್‌ ಕಿಶನ್, ದೀಪಕ್ ಚಾಹರ್ ಅವರಿಗಿಂತ ಹೆಚ್ಚಿನ ಮೌಲ್ಯವನ್ನು ಎರಡನೇ ದಿನ ಯಾರೂ ಪಡೆಯಲಿಲ್ಲ. ಇದರಿಂದಾಗಿ ಇಶಾನ್‌ (₹15.25 ಕೋಟಿ) ಈ ಬಾರಿಯ ದುಬಾರಿ ಆಟಗಾರನಾದರು.

ಇದನ್ನೂ ಓದಿ–

ಬಿಕರಿಯಾಗದೆ ಉಳಿದ ಆಟಗಾರರ ಪಟ್ಟಿ ಇಲ್ಲಿದೆ–

ಭಾರತೀಯ ಆಟಗಾರರು

ಸುರೇಶ್ ರೈನಾ
ಚೇತೇಶ್ವರ ಪೂಜಾರ
ಉಮೇಶ್ ಯಾದವ್
ವೃದ್ಧಿಮಾನ್ ಸಹಾ
ಇಶಾಂತ್ ಶರ್ಮಾ
ಸೌರಭ್ ತಿವಾರಿ
ಅಮಿತ್ ಮಿಶ್ರಾ
ಪಿಯೂಷ್ ಚಾವ್ಲಾ
ಪವನ್ ನೇಗಿ
ಧವಲ್ ಕುಲಕರ್ಣಿ
ರಜತ್ ಪಾಟಿದಾರ್
ಅನ್ಮೋಲ್‌ಪ್ರೀತ್ ಸಿಂಗ್
ಮೊಹಮ್ಮದ್ ಅಜರುದ್ದೀನ್
ವಿಷ್ಣು ವಿನೋದ್
ವಿಷ್ಣು ಸೋಲಂಕಿ
ಎನ್. ಜಗದೀಸನ್
ಎಂ. ಸಿದ್ಧಾರ್ಥ್
ಸಂದೀಪ್‌ ಲಮಿಚಾನೆ
ಹರಿ ನಿಶಾಂತ್
ಕರುಣ್ ನಾಯರ್
ಸಿದ್ದಾರ್ಥ್ ಕೌಲ್
ಸಂದೀಪ್ ವಾರಿಯರ್
ತನ್ಮಯ್ ಅಗರ್ವಾಲ್
ಪಂಕಜ್ ಜಸ್ವಾಲ್
ಮಾಯಾಂಕ್ ಯಾದವ್
ರಾಹುಲ್ ಬುದ್ಧಿ
ವಿರಾಟ್ ಸಿಂಗ್
ಹಿಮ್ಮತ್ ಸಿಂಗ್
ಸಚಿನ್ ಬೇಬಿ
ಹಿಮಾಂಶು ರಾಣಾ
ಯಶ್ ಠಾಕೂರ್
ಆಕಾಶ್ ಸಿಂಗ್

ಇದನ್ನೂ ಓದಿ–

ವಿದೇಶಿ ಆಟಗಾರರು

ಡೇವಿಡ್ ಮಿಲ್ಲರ್ - ದಕ್ಷಿಣ ಆಫ್ರಿಕಾ
ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ
ಡೇವಿಡ್ ಮಲಾನ್ – ಇಂಗ್ಲೆಂಡ್
ಮಾರ್ನಸ್ ಲಾಬುಷೇನ್ – ಆಸ್ಟ್ರೇಲಿಯಾ
ಇಯಾನ್ ಮಾರ್ಗನ್ – ಇಂಗ್ಲೆಂಡ್
ಆ್ಯರನ್ ಫಿಂಚ್ – ಆಸ್ಟ್ರೇಲಿಯಾ
ಮಾರ್ಟಿನ್ ಗಪ್ಟಿಲ್ – ನ್ಯೂಜಿಲೆಂಡ್
ಶಕೀಬ್ ಅಲ್ ಹಸನ್ – ಬಾಂಗ್ಲಾದೇಶ
ಮೊಹಮ್ಮದ್ ನಬಿ – ಅಫ್ಗಾನಿಸ್ತಾನ
ಮ್ಯಾಥ್ಯೂ ವೇಡ್ – ಆಸ್ಟ್ರೇಲಿಯಾ
ಸ್ಯಾಮ್ ಬಿಲ್ಲಿಂಗ್ಸ್ – ಇಂಗ್ಲೆಂಡ್
ಇಮ್ರಾನ್ ತಾಹಿರ್ - ದಕ್ಷಿಣ ಆಫ್ರಿಕಾ
ಆದಿಲ್ ರಶೀದ್ – ಇಂಗ್ಲೆಂಡ್
ಮುಜೀಬ್ ಜದ್ರಾನ್ – ಅಫ್ಗಾನಿಸ್ತಾನ
ಆ್ಯಡಮ್‌ ಜಂಪಾ – ಆಸ್ಟ್ರೇಲಿಯಾ
ಜೇಮ್ಸ್ ನಿಶಾಮ್ – ನ್ಯೂಜಿಲೆಂಡ್
ಕ್ರಿಸ್‌ ಜೋರ್ಡಾನ್ – ಇಂಗ್ಲೆಂಡ್
ಲುಂಗಿ ಎನ್‌ಗಿಡಿ - ದಕ್ಷಿಣ ಆಫ್ರಿಕಾ
ಶೆಲ್ಡನ್‌ ಕಾಟ್ರೆಲ್‌ - ವೆಸ್ಟ್‌ ಇಂಡೀಸ್
ನಾಥನ್ ಕೌಲ್ಟರ್ ನೈಲ್ – ನ್ಯೂಜಿಲೆಂಡ್
ಕೇನ್ ರಿಚರ್ಡ್ಸನ್ – ಆಸ್ಟ್ರೇಲಿಯಾ
ತಬ್ರೈಜ್ ಶಮ್ಸಿ - ದಕ್ಷಿಣ ಆಫ್ರಿಕಾ
ಇಶ್ ಸೋಧಿ – ನ್ಯೂಜಿಲೆಂಡ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು