ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು?

Last Updated 22 ಡಿಸೆಂಬರ್ 2021, 13:58 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 2022ರ ಮೆಗಾ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಫೆಬ್ರುವರಿ 7 ಮತ್ತು 8ರಂದು ಆಯೋಜನೆಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೋವಿಡ್ ಪರಿಸ್ಥಿತಿಯು ಕೈಮೀರದಿದ್ದರೆ ಭಾರತದಲ್ಲಿಯೇ ಐಪಿಎಲ್ ಮೆಗಾ ಹರಾಜು ನಡೆಸಲಾಗುವುದು. ಇದು ಎರಡು ದಿನಗಳವರೆಗೆ ನಡೆಯುವುದು. ಬೆಂಗಳೂರಿನಲ್ಲಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಅಧಿಕಾರಿಯು ತಿಳಿಸಿದ್ದಾರೆ.

ಕೋವಿಡ್‌ 19ರ ರೂಪಾಂತರಿತ ತಳಿಯಾದ ಓಮೈಕ್ರಾನ್ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿವೆ. ಮುಂದಿನ ಪರಿಸ್ಥಿತಿ ಹೇಗಿರಲಿದೆ ಎಂಬ ಕುರಿತು ಅನಿಶ್ಚಿತ ವಾತಾವರಣವೂ ಇದೆ.

ಈ ವರ್ಷ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಮತ್ತು ವೆಂಚರ್ ಕ್ಯಾಪಿಟಲ್ಸ್‌ ಫರ್ಮ್ ಸಿವಿಸಿ ಮಾಲೀಕತ್ವದ ಅಹಮದಾಬಾದ್ ತಂಡಗಳು ಪದಾರ್ಪಣೆ ಮಾಡಲಿವೆ. ಈ ತಂಡಗಳಿಗೂ ಆಟಗಾರರ ಆಯ್ಕೆ ನಡೆಯಲಿದೆ. ಈಗಾಗಲೇ ಟೂರ್ನಿಯಲ್ಲಿರುವ ಉಳಿದ ಎಂಟು ತಂಡಗಳು ಬಿಡುಗಡೆಗೊಳಿಸಲಾದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಈಗಾಗಲೇ ತಮ್ಮ ತಂಡಗಳಲ್ಲಿರುವ ಆಟಗಾರರನ್ನು ಬಿಡುಗಡೆ ಮಾಡುವ ನಿಯಮದ ಕುರಿತು ಕೆಲವು ಫ್ರ್ಯಾಂಚೈಸಿ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡ ಮತ್ತು ಆರ್. ಅಶ್ವಿನ್ ಅವರಂತಹ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುವುದು ತುಂಬ ಬೇಸರದ ಸಂಗತಿ. ಹರಾಜು ನಿಯಮಗಳು ಹೀಗಿರುವುದರಿಂದ ಪಾಲಿಸಬೇಕಾಗುತ್ತದೆ. ಒಂದು ತಂಡವನ್ನು ಬಲಿಷ್ಠವಾಗಿ ಕಟ್ಟುವುದು ಬಹಳ ದೊಡ್ಡ ಕೆಲಸ. ಯುವ ಆಟಗಾರರನ್ನು ಹುಡುಕಿ ತಂದು ಪ್ರೋತ್ಸಾಹಿಸಿ ಅವಕಾಶ ಕೊಡಲಾಗುತ್ತವೆ. ಅವರು ಉತ್ತಮವಾಗಿ ಆಡಿ ರಾಷ್ಟ್ರೀಯ ತಂಡದಲ್ಲಿಯೂ ಸ್ಥಾನ ಪಡೆಯುತ್ತಾರೆ. ಆದರೆ ಮೂರು ವರ್ಷಗಳ ನಂತರ ಅವರನ್ನು ಬಿಟ್ಟುಕೊಡಬೇಕಾದಾಗ ನೋವಾಗುತ್ತದೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸಹಮಾಲೀಕರಾದ ಪಾರ್ಥ್ ಜಿಂದಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT