ಮುಂಬೈ: ತಿಣುಕಾಡುತ್ತಿರುವ ಮುಂಬೈ ಇಂಡಿಯನ್ಸ್ ತಂಡವು ತಾರಾ ವರ್ಚಸ್ಸಿನ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಅವರು ಲಯಕ್ಕೆ ಮರಳುವರೆಂಬ ವಿಶ್ವಾಸದಲ್ಲಿದೆ. ಐದು ಬಾರಿಯ ಚಾಂಪಿಯನ್ ತಂಡ ಸೋಮವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕೊನೆಯ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಎರಡೂ ತಂಡಗಳ ಪ್ಲೇ ಆಫ್ ಕನಸು ಹೆಚ್ಚುಕಮ್ಮಿ ಭಗ್ನಗೊಂಡಿದೆ. ಆಲ್ ರೌಂಡರ್ ಪಾಂಡ್ಯ (146 ರನ್ ಮತ್ತು 4 ವಿಕೆಟ್) ಮತ್ತು ಸೂರ್ಯಕುಮಾರ್ (186 ರನ್) ಈ ಬಾರಿ ನಿರಾಸೆ ಅನುಭವಿಸಿದ್ದಾರೆ. ಇದು ತಂಡದ ಹಿನ್ನಡೆಗೂ ಕಾರಣವಾಗಿದೆ. ಮಾಜಿ ನಾಯಕ ರೋಹಿತ್ ಶರ್ಮಾ ಅವರು ಮಂಡಿರಜ್ಜು ನೋವಿನಿಂದ ಚೇತರಿಸಿ ಕೊಳ್ಳದಿರುವುದೂ ತಂಡದ ಮನೋಬಲ ಕುಗ್ಗಿಸಿದೆ.

ಮುಂಬೈ ತಂಡ ಏಳು ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಎರಡರಲ್ಲಿ ಮಾತ್ರ ಜಯಗಳಿಸಿದೆ. ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೆ, ಎಂಟು ಪಂದ್ಯಗಳಲ್ಲಿ ಎರಡು ಗೆದ್ದು, ಆರು ಸೋತಿರುವ ಲಖನೌ ಕೊನೆಯ ಸ್ಥಾನದಲ್ಲಿದೆ. ಎರಡೂ ತಂಡಗಳು ತಲಾ 4 ಪಾಯಿಂಟ್ಸ್ ಸಂಗ್ರಹಿಸಿವೆ.

ಪಾಂಡ್ಯ ಅವರ ತಂತ್ರಗಾರಿಕೆ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳಿವೆ. ಅವರ ನಿರ್ಧಾರಗಳು ನಿರೀಕ್ಷಿತ ಫಲ ನೀಡಿಲ್ಲ. ಅನುಭವಿ ಬ್ಯಾಟರ್ಗಳು ವಿಫಲರಾಗಿದ್ದಾರೆ. ಬೌಲರ್ಗಳು ಯಶಸ್ಸು ಗಳಿಸುತ್ತಿಲ್ಲ. ಹೀಗಾಗಿ ತಂಡದ ಸ್ಥೈರ್ಯ ಉತ್ತಮ ಮಟ್ಟದಲ್ಲಿಲ್ಲ. ಈ ಬಾರಿಯ ಅಭಿಯಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮಾತ್ರ ಮುಂಬೈ ಅಧಿಕಾರಯುತ ಜಯಗಳಿಸಿತ್ತು.

ಭಾರತ ಟಿ20 ತಂಡದ ನಾಯಕ ಸೂರ್ಯ ಅವರು ಒಳ್ಳೆಯ ಆರಂಭವನ್ನು ದೊಡ್ಡಮೊತ್ತವಾಗಿ ಪರಿವರ್ತಿಸಲು ವಿಫಲರಾಗಿದ್ದಾರೆ. ತಮ್ಮ ಟ್ರೇಡ್ಮಾರ್ಕ್ ಹೊಡೆತಗಳಿಗೇ ಔಟಾಗುತ್ತಿದ್ದಾರೆ.

ಲಖನೌ ತಂಡದ ನಾಯಕ ರಿಷಭ್ ಪಂತ್ ಅವರಂತೂ ವಿರಾಮಕ್ಕಾಗಿ ಹಾತೊರೆದಿದ್ದಾರೆ. ತಂಡ ಸತತ ಐದು ಪಂದ್ಯ ಸೋತು ಸುಣ್ಣವಾಗಿದೆ. ಸಾಧಾರಣ ಮಟ್ಟದ ಬ್ಯಾಟಿಂಗ್ ತಂಡಕ್ಕೆ ಹಿನ್ನಡೆ ತಂದಿದೆ. ಬೌಲರ್ಗಳ ಪ್ರಯತ್ನ ಉತ್ತಮ ವಾಗಿದ್ದರೂ ಬ್ಯಾಟರ್ಗಳು ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-934069474

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.