ಮುಂಬೈ : ಸತತ ಮೂರು ಸೋಲುಗಳಿಂದಾಗಿ ಒತ್ತಡದಲ್ಲಿರುವಮುಂಬೈ ಇಂಡಿಯನ್ಸ್ ತಂಡವು ಅಜೇಯ ಓಟ ಮುಂದುವರಿಸುವ ಛಲದಲ್ಲಿರುವ ಪಂಜಾಬ್ ಕಿಂಗ್ಸ್ ಪಡೆಯನ್ನು ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಿಸಲಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡವು ತವರಿನಂಗಳದಲ್ಲಿಲಯಕ್ಕೆ ಮರಳುವ ಛಲದಲ್ಲಿದೆ. ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವಶ್ರೇಯಸ್ ಅಯ್ಯರ್ ಅವರಿಗೂ ವಾಂಖೆಡೆ ಕ್ರೀಡಾಂಗಣ ತವರಿನಂಗಳ ಎಂಬುದು ವಿಶೇಷ.

ಮುಂಬೈ ತಂಡವು ನಾಲ್ಕು ದಿನಗಳ ಹಿಂದೆ ಇಲ್ಲಿಯೇ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತ್ತು.

ಈ ಪಂದ್ಯವು ಮುಂಬೈ ತಂಡಕ್ಕೆ ಮಹತ್ವದ್ದಾಗಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯಿಸಿದೆ. 13 ವರ್ಷಗಳ ನಂತರ ಟೂರ್ನಿ ಯಲ್ಲಿ ತಾನಾಡಿದ ಮೊದಲ ಪಂದ್ಯ ಗೆದ್ದ ಸಂಭ್ರಮ ಆಚರಿಸಿತ್ತು. ಆದರೆ ನಂತರದ ಹಣಾಹಣಿಗಳಲ್ಲಿ ಗೆಲುವು ಒಲಿದಿಲ್ಲ.

ರಿಯಾನ್ ರಿಕೆಲ್ಟನ್, ಶರ್ಫೆನ್ ರುದರ್ಫೋರ್ಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಂತಹ ಉತ್ತಮ ಬ್ಯಾಟರ್ಗಳು ತಂಡದಲ್ಲಿದ್ದಾರೆ. ಆದರೆ ಅವರಿಂದ ಸ್ಥಿರವಾದ ಪ್ರದರ್ಶನ ಮೂಡಿಬಂದಿಲ್ಲ. ಸೋಲುಗಳಿಗೆ ಅದೂ ಒಂದು ಕಾರಣವಾಗಿದೆ.

ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಅವರಂತಹ ಅನುಭವಿ ಬೌಲರ್ಗಳು ತಂಡದಲ್ಲಿ ದ್ದಾರೆ. ಬೂಮ್ರಾ ಅವರು ನಾಲ್ಕು ಪಂದ್ಯಗಳಲ್ಲಿ ಒಂದೂ ವಿಕೆಟ್ ಗಳಿಸಿಲ್ಲ. ಆದರೆ ರನ್ಗಳನ್ನು ನಿಯಂತ್ರಿಸಿದ್ದಾರೆ.ಉಳಿದ ಬೌಲರ್ಗಳು ರನ್ಗಳನ್ನು ಧಾರಾಳವಾಗಿ ನೀಡಿದ್ದಾರೆ. ಈ ಕ್ಲಿಷ್ಟಕರ ಹಾದಿಯಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸುವುದು ಹಾರ್ದಿಕ್ ನಾಯಕತ್ವಕ್ಕೆ ದೊಡ್ಡ ಸವಾಲಾಗಿದೆ.

ಶ್ರೇಯಸ್ ಬಳಗವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೆದ್ದಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಶ್ರೇಯಸ್ ಅವರೇ ಗೆಲುವಿನ ರೂವಾರಿಯಾಗಿದ್ದರು. ಅವರಲ್ಲದೇ ಕೂಪರ್ ಕೊನೊಲಿ, ಪ್ರಭಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಅವರು ಹೆಚ್ಚು ರನ್ ಕೊಡುತ್ತಿರುವುದು ತಂಡದ ಚಿಂತೆಗೆ ಕಾರಣವಾಗಿದೆ. ಝೇವಿಯರ್ ಬಾರ್ಟಲೆಟ್, ಕನ್ನಡಿಗ ವೈಶಾಖ ವಿಜಯಕುಮಾರ್, ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಮಾರ್ಕೋ ಯಾನ್ಸೆನ್ ಅವರೇ ಬೌಲಿಂಗ್ ವಿಭಾಗದ ಹೊಣೆಯನ್ನು ನಿಭಾಯಿಸಬೇಕಿದೆ.

ರೋಹಿತ್ ಆಡುವುದು ಅನಿಶ್ಚಿತ

ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರ ರೋಹಿತ್ ಶರ್ಮಾ ಅವರ ಲಭ್ಯತೆ ಅನಿಶ್ಚಿತವಾಗಿದೆ. ಅವರು ಬುಧವಾರ ತಂಡದ ಲಘು ವ್ಯಾಯಾಮದ ವೇಳೆ ಕಾಣಿಸಿಕೊಂಡರು.

ಆರ್ಸಿಬಿ ವಿರುದ್ಧ ಭಾನುವಾರ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಬ್ಯಾಟ್ ಮಾಡುವ ವೇಳೆ (ಆರನೇ ಓವರಿನಲ್ಲಿ) ಮಂಡಿರಜ್ಜು (ಹ್ಯಾಮ್ಸ್ಟ್ರಿಂಗ್) ನೋವಿನಿಂದ ರೋಹಿತ್ ಮೈದಾನ ತೊರೆದಿದ್ದರು. ಆಗ ಅವರು 13 ಎಸೆತಗಳಲ್ಲಿ 19 ರನ್ ಗಳಿಸಿದ್ದರು.

‘ವೈದ್ಯಕೀಯ ತಂಡದವರು ಮತ್ತು ಕೋಚಿಂಗ್ ಸಿಬ್ಬಂದಿ ಅವರ ಫಿಟ್ನೆಸ್ ಮೇಲೆ ನಿಗಾ ವಹಿಸಿದ್ದಾರೆ’ ಎಂದು ತಂಡದ ಸಿಬ್ಬಂದಿಯೊಬ್ಬರು ನೆಟ್ಸ್ಗೆ ಮುನ್ನ ತಿಳಿಸಿದ್ದರು. ಆದರೆ ನೆಟ್ಸ್ನಲ್ಲಿ ಕಾಣಿಸಿಕೊಂಡ ಕಾರಣ ಆಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. 38 ವರ್ಷ ವಯಸ್ಸಿನ ಆಟಗಾರ ಲಘು ವ್ಯಾಯಾಮದ ಜೊತೆಗೆ ಆರಾಮವಾಗಿ ಓಡುತ್ತಿದ್ದುದು ಕಾಣಿಸಿತು. ಬಲಗಾಲಿಗೆ ಪಟ್ಟಿ ಕಟ್ಟಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.