ಧರ್ಮಶಾಲಾ: ವೇಗಿ ಶಾರ್ದೂಲ್ ಠಾಕೂರ್ (39ಕ್ಕೆ4) ಅವರ ಅಮೋಘ ಬೌಲಿಂಗ್ ದಾಳಿಯ ಬಳಿಕ ತಿಲಕ್ ವರ್ಮಾ (ಔಟಾಗದೇ 75;33ಎ) ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು. ಇದರಿಂದಾಗಿ ಮುಂಬೈ ಇಂಡಿಯನ್ಸ್ ತಂಡವು ಗುರುವಾರ ನಡೆದ ಐಪಿಎಲ್ನ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಆರಂಭದ ಏಳು ಪಂದ್ಯಗಳಲ್ಲಿ ಅಜೇಯವಾಗಿದ್ದ ಶ್ರೇಯಸ್ ಅಯ್ಯರ್ ಪಡೆಯು ನಂತರ ಸತತ ಐದನೇ ಸೋಲು ಅನುಭವಿಸುವುದರೊಂದಿಗೆ ಒತ್ತಡಕ್ಕೆ ಸಿಲುಕಿತು. ಈ ಪಂದ್ಯವನ್ನು ಗೆದ್ದು ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಲ್ಲುವ ಕನಸಿ ನಲ್ಲಿದ್ದ ತಂಡಕ್ಕೆ ನಿರಾಸೆಯಾಯಿತು. ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವುದರಿಂದ ಆ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿರಲಿಲ್ಲ.

ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಾರ್ದೂಲ್ ದಾಳಿಯ ನಡುವೆಯೂ ಪಂಜಾಬ್ ತಂಡ 8 ವಿಕೆಟ್ಗಳಿಗೆ 200 ರನ್ ಗಳಿಸಿತು. ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್ (57; 32ಎ, 4X6, 6X4) ಮತ್ತು ಅಝ್ಮತ್ವುಲ್ಲಾ ಒಮರ್ಝೈ (38; 17ಎ, 4X2, 6X4) ಉಪಯುಕ್ತ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ (25;26ಎ) ಮತ್ತು ರಯಾನ್ ರಿಕೆಲ್ಟನ್ (48;23ಎ, 4x4, 6x4) ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್ಗೆ 61 ರನ್ ಸೇರಿಸಿದರು. ಅರ್ಧಶತಕದ ಹೊಸ್ತಿಲಲ್ಲಿದ್ದ ರಯಾನ್ ಅವರ ವಿಕೆಟ್ ಪಡೆದ ಒಮರ್ಝೈ ಸಂಭ್ರಮಿಸಿದರು. ನಂತರ ಬಂದ ನಮನ್ ಧೀರ್ (9) ಬೇಗನೆ ಔಟಾದರು. ಅದರ ಬೆನ್ನಲ್ಲೇ ರೋಹಿತ್ ಕೂಡ ನಿರ್ಗಮಿಸಿದರು.

83 ರನ್ಗಳಿಗೆ ಅಗ್ರ ಕ್ರಮಾಂಕದ ಮೂರು ಬ್ಯಾಟರ್ಗಳನ್ನು ಕಳೆದುಕೊಂಡ ಮುಂಬೈ ತಂಡ ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಎಡಗೈ ಬ್ಯಾಟರ್ ತಿಲಕ್ ಜವಾಬ್ದಾರಿಯುತ ಆಟವಾಡಿದರು. ಅವರು, ಶೆರ್ಫೇನ್ ರುದರ್ಫೋರ್ಡ್ ಅವರೊಂದಿಗೆ 61 (42ಎ) ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಗೆಲುವಿಗೆ 21 ಎಸೆತಗಳಲ್ಲಿ 52 ರನ್ ಬೇಕಿದ್ದಾಗ ಶೆರ್ಫೇನ್ ಔಟಾದರು.

ತಿಲಕ್ ಅವರನ್ನು ಸೇರಿಕೊಂಡ ವಿಲ್ ಜ್ಯಾಕ್ಸ್ (25;10ಎ, 4x2, 6x2) ಡೆತ್ ಓವರ್ಗಳಲ್ಲಿ ಬೌಲರ್ಗಳನ್ನು ದಂಡಿಸಿದರು. ಮಾರ್ಕೊ ಯಾನ್ಸೆನ್ ಹಾಕಿದ 18ನೇ ಓವರ್ನಲ್ಲಿ 22 ರನ್ ರನ್ ಸೂರೆ ಮಾಡಿದ ಈ ಜೋಡಿ, ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಅರ್ಷದೀಪ್ ಸಿಂಗ್ ಹಾಕಿದ 19ನೇ ಓವರ್ನಲ್ಲಿ 13 ರನ್ ಚಾಚಿತು. ಕೊನೆಯ ಓವರ್ನಲ್ಲಿ ಗೆಲುವಿಗೆ 15 ರನ್ ಬೇಕಿತ್ತು. ಝೇವಿಯರ್ ಬಾರ್ಟಲೆಟ್ ಹಾಕಿದ ಓವರ್ನಲ್ಲಿ ಒಂದು ಎಸೆತ ಬಾಕಿ ಇರುವಂತೆ ತಂಡವು ಗೆಲುವಿನ ದಡ ಸೇರಿತು. ಮುಂಬೈ 4 ವಿಕೆಟ್ಗೆ 205 ರನ್ ಗಳಿಸಿ ಸಂಭ್ರಮಿಸಿತು.

ಸಿಂಗ್ ಮಿಂಚು: ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೂರ್ಯಕುಮಾರ್ ಯಾದವ್ ವಿಶ್ರಾಂತಿ ಪಡೆದ ಕಾರಣ ಜಸ್ಪ್ರೀತ್ ಬೂಮ್ರಾ ನಾಯಕತ್ವ ವಹಿಸಿದರು.

ಬೂಮ್ರಾ ಹಾಕಿದ ಎರಡನೇ ಓವರ್ನಲ್ಲಿ ಪ್ರಭಸಿಮ್ರನ್ ಅವರ ಸುಲಭವಾದ ಕ್ಯಾಚ್ ಅನ್ನು ಸ್ಲಿಪ್ ಫೀಲ್ಡರ್ ನಮನ್ ಧೀರ್ ಕೈಚೆಲ್ಲಿದರು. ಇದರ ಲಾಭ ಪಡೆದ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ (27 ರನ್) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. ಪ್ರಿಯಾಂಶ್ ಅವರನ್ನು ದೀಪಕ್ ಚಾಹರ್ ಕ್ಲೀನ್ಬೌಲ್ಡ್ ಮಾಡಿದರು. ಸಿಂಗ್ ಅವರು ಕೂಪರ್ ಕೊನೊಲಿ (21; 22ಎ) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು.

12ನೇ ಓವರ್ನಲ್ಲಿ ಸಿಂಗ್ ವಿಕೆಟ್ ಗಳಿಸಿದ ಶಾರ್ದೂಲ್ ಖಾತೆ ತೆರೆದರು. ಅದೇ ಓವರ್ನಲ್ಲಿ ಶ್ರೇಯಸ್ ವಿಕೆಟ್ ಕೂಡ ಎಗರಿಸಿದರು. ಸೂರ್ಯಾಂಶ್ ಶೆಡ್ಗೆ ಹಾಗೂ ಮಾರ್ಕೊ ಯಾನ್ಸೆನ್ ಅವರು ದೊಡ್ಡಮಟ್ಟದ ಇನಿಂಗ್ಸ್ ಆಡದಂತೆ ಕಡಿವಾಣ ಹಾಕಿದರು.

ಕೊನೆಯ ಹಂತದ ಓವರ್ಗಳಲ್ಲಿ ಒಮರ್ಝೈ ಬೀಸಾಟವಾಡಿದರು. ವಿಷ್ಣು ವಿನೋದ್ (ಔಟಾಗದೇ 15; 8ಎ) ಮತ್ತು ಝೇವಿಯರ್ (ಔಟಾಗದೇ 18) ಅವರು ಭರ್ಜರಿ ಬ್ಯಾಟಿಂಗ್ ಮಾಡಿದರು.

ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 200 (ಪ್ರಿಯಾಂಶ್ ಆರ್ಯ 22, ಪ್ರಭಸಿಮ್ರನ್ ಸಿಂಗ್ 57, ಕೂಪರ್ ಕೊನೊಲಿ 21, ಅಝ್ಮತ್ವುಲ್ಲಾ ಒಮರ್ಝೈ 38, ವಿಷ್ಣು ವಿನೋದ್ ಔಟಾಗದೇ 15, ಝೇವಿಯರ್ ಬಾರ್ಟಲೆಟ್ ಔಟಾಗದೇ 18, ದೀಪಕ್ ಚಾಹರ್ 36ಕ್ಕೆ2, ಶಾರ್ದೂಲ್ ಠಾಕೂರ್ 39ಕ್ಕೆ4). ಮುಂಬೈ ಇಂಡಿಯನ್ಸ್: 19.5 ಓವರ್ ಗಳಲ್ಲಿ 4 ವಿಕೆಟ್ಗೆ 205 (ರೋಹಿತ್ ಶರ್ಮಾ 25, ರಯಾನ್ ರಿಕೆಲ್ಟನ್ 48, ತಿಲಕ್ ವರ್ಮಾ ಔಟಾಗದೇ 75, ವಿಲ್ ಜ್ಯಾಕ್ಸ್ ಔಟಾಗದೇ 25; ಅಝ್ಮತ್ವುಲ್ಲಾ ಒಮರ್ಝೈ 36ಕ್ಕೆ 2). ಪಂದ್ಯದ ಆಟಗಾರ: ತಿಲಕ್ ವರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.