ಮಂಗಳವಾರ, ಏಪ್ರಿಲ್ 7, 2020
19 °C

ನೀವೇ ನಿರ್ಧರಿಸಿ: ಎನ್‌ಜೆಡ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘13ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಬೇಕೊ ಅಥವಾ ಬೇಡವೊ ಎಂಬುದನ್ನು ನೀವೇ ತೀರ್ಮಾನಿಸಿ’ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ (ಎನ್‌ಜೆಡ್‌ಸಿ) ತನ್ನ ಆಟಗಾರರಿಗೆ ಹೇಳಿದೆ.

‘ಕೊರೊನಾ ಸೋಂಕು ತಗುಲದಂತೆ ಎಲ್ಲರೂ ಎಚ್ಚವಹಿಸಬೇಕಿದೆ. ಇದಕ್ಕಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದ್ದೇವೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕೊ ಬೇಡವೊ ಎಂಬುದನ್ನು ಆಟಗಾರರೇ ತೀರ್ಮಾನಿಸಬೇಕು’ ಎಂದು ಎನ್‌ಜೆಡ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಜೇಮ್ಸ್‌ ನೀಶಮ್‌ (ಕಿಂಗ್ಸ್‌ ಇಲೆವನ್‌ ಪಂಜಾಬ್‌), ಲಾಕಿ ಫರ್ಗ್ಯೂಸನ್‌ (ಕೋಲ್ಕತ್ತ ನೈಟ್‌ ರೈಡರ್ಸ್‌), ಮಿಷೆಲ್‌ ಮೆಕ್‌ಲೆನಾಗನ್‌ ಮತ್ತು ಟ್ರೆಂಟ್‌ ಬೌಲ್ಟ್‌ (ಇಬ್ಬರೂ ಮುಂಬೈ ಇಂಡಿಯನ್ಸ್‌), ಕೇನ್‌ ವಿಲಿಯಮ್ಸನ್‌ (ಸನ್‌ರೈಸರ್ಸ್‌ ಹೈದರಾಬಾದ್‌) ಹಾಗೂ ಮಿಷೆಲ್‌ ಸ್ಯಾಂಟನರ್‌ (ಚೆನ್ನೈ ಸೂಪರ್‌ ಕಿಂಗ್ಸ್‌) ಅವರು ಈ ಬಾರಿಯ ಲೀಗ್‌ನಲ್ಲಿ ಪಾಲ್ಗೊಳ್ಳಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು