2026ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎಲ್ಲಾ ತಂಡಗಳು ಟೂರ್ನಿಯ ಕೊನೆಯ ಹಂತಕ್ಕೆ ತಲುಪಿವೆ. ಇನ್ನು ಪ್ರತಿ ತಂಡಕ್ಕೆ ಕೇವಲ 4 ಅಥವಾ 5 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಪಾಯಿಂಟ್ಸ್ ಪಟ್ಟಿಯ ಕೆಳಭಾಗದಲ್ಲಿರುವ ತಂಡಗಳು ನಿಧಾನವಾಗಿ ಮೇಲೇರುತ್ತಿದೆ. ಮಾತ್ರವಲ್ಲದೆ ಕೆಲ ತಂಡಗಳಿಗೆ ಮುಂದಿನ ಪ್ರತಿ ಪಂದ್ಯವೂ ಮಾಡು ಇಲ್ಲವೇ ಮಡಿ ಪಂದ್ಯವಾಗಿರುತ್ತದೆ.

ಹಾಗಾದರೆ ಉಳಿದಿರುವ 4 ಪಂದ್ಯಗಳಲ್ಲಿ ಪ್ಲೇ-ಆಫ್ಗೆ ತೇರ್ಗಡೆ ಹೊಂದಲು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ಯ ಟಾಪ್ 4 ತಂಡಗಳು

ಸನ್ ರೈಸರ್ಸ್ ಹೈದರಾಬಾದ್ – ಆಡಿರುವ 11 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು, 4 ರಲ್ಲಿ ಸೋತಿದೆ. +0.737 ರನ್ ರೇಟ್ನೊಂದಿಗೆ 14 ಅಂಕ ಪಡೆದಿದೆ.

ಪಂಜಾಬ್ ಕಿಂಗ್ಸ್ – ಆಡಿರುವ 10 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು, 3 ರಲ್ಲಿ ಸೋತಿದೆ. +0.571 ರನ್ ರೇಟ್ನೊಂದಿಗೆ 13 ಅಂಕ ಪಡೆದಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು – ಆಡಿರುವ 9 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು, 3 ರಲ್ಲಿ ಸೋತಿದೆ. +1.420 ರನ್ ರೇಟ್ನೊಂದಿಗೆ 12 ಅಂಕ ಪಡೆದಿದೆ

ರಾಜಸ್ಥಾನ್ ರಾಯಲ್ಸ್ – ಆಡಿರುವ 10 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು, 4 ರಲ್ಲಿ ಸೋತಿದೆ. +0.510 ರನ್ ರೇಟ್ನೊಂದಿಗೆ 12 ಅಂಕ ಪಡೆದುಕೊಂಡಿದೆ.

ಪ್ಲೇ–ಆಫ್ಗೆ ಪ್ರವೇಶಕ್ಕೆ ಎಷ್ಟು ಪಂದ್ಯ ಗೆಲ್ಲಬೇಕು?

ಸನ್ ರೈಸರ್ಸ್ ಹೈದರಾಬಾದ್ – ಉಳಿದ 3 ಪಂದ್ಯಗಳಲ್ಲಿ, 1 ಪಂದ್ಯ ಗೆದ್ದರೆ ಪ್ಲೇ–ಆಫ್ ಪ್ರವೇಶಿಸಬಹುದು.

ಪಂಜಾಬ್ ಕಿಂಗ್ಸ್– ಉಳಿದ 4 ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲಬೇಕು.

ರಾಯಲ್ ಚಾಲೆಂಜರ್ಸ್ ಬೆಂಗಳೂರು – ಉಳಿದಿರುವ 5 ಪಂದ್ಯದಲ್ಲಿ 2 ರಲ್ಲಿ ಗೆಲುವು ಸಾಧಿಸಿದರೆ ಪ್ಲೇ–ಆಫ್ ಪ್ರವೇಶಿಸಬಹುದು.

ರಾಜಸ್ಥಾನ್ ರಾಯಲ್ಸ್ – ಉಳಿದಿರುವ 4 ಪಂದ್ಯದಲ್ಲಿ 2 ರಲ್ಲಿ ಗೆಲ್ಲಬೇಕು.

ಗುಜರಾತ್ ಟೈಟನ್ಸ್ – 4 ಪಂದ್ಯಗಳಲ್ಲಿ 2ರಲ್ಲಿ ಗೆಲುವ ಮೂಲಕ ಪ್ಲೇ–ಆಫ್ ಪ್ರವೇಶಿಸಬಹುದು.

ಚೆನ್ನೈ ಸೂಪರ್ ಕಿಂಗ್ಸ್– ಉಳಿದ 4 ಪಂದ್ಯಗಳಲ್ಲಿ 3 ಪಂದ್ಯ ಗೆಲ್ಲಬೇಕು.

ಡೆಲ್ಲಿ ಕ್ಯಾಪಿಟಲ್ಸ್ – ಉಳಿದಿರುವ 4 ಪಂದ್ಯದಲ್ಲಿ 4 ರಲ್ಲಿಯೂ ಗೆದ್ದರೆ ಮಾತ್ರ ಪ್ಲೇ–ಆಫ್ ಪ್ರವೇಶಿಸಬಹುದು.

ಕೋಲ್ಕತ್ತ ನೈಟ್ ರೈಡರ್ಸ್– ಬಾಕಿ ಇರುವ 5 ಕ್ಕೆ 5 ಪಂದ್ಯವನ್ನು ಉತ್ತಮ ರನ್ ರೇಟ್ ಮೂಲಕ ಗೆಲ್ಲುವುದು ಅನಿವಾರ್ಯವಾಗಿದೆ.

ಮುಂಬೈ ಇಂಡಿಯನ್ಸ್ – ಉಳಿದ 4 ಪಂದ್ಯ ಗೆಲ್ಲುವುದರ ಜೊತೆಗೆ ಬೇರೆ ತಂಡದ ಫಲಿತಾಂಶದ ಮೇಲೆ ಪ್ಲೇ–ಆಫ್ ನಿರ್ಧಾರವಾಗುತ್ತದೆ.

ಲಖನೌ ಸೂಪರ್ ಜೈಂಟ್ಸ್ – ಉಳಿದಿರುವ 5 ಪಂದ್ಯಗಳನ್ನು ಗೆಲ್ಲಲೇ ಬೇಕು. ಮಾತ್ರವಲ್ಲದೆ, ಬೇರೆ ತಂಡದ ಫಲಿತಾಂಶದ ಮೇಲೆ ಪ್ಲೇ–ಆಫ್ ನಿರ್ಧಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.