ಹೈದರಾಬಾದ್ (ಪಿಟಿಐ): ಯಾರ್ಕರ್ಗಳು ತಮ್ಮ ಪ್ರಮುಖ ಅಸ್ತ್ರ. ಈ ಕಲೆಯನ್ನು ಕರಗತಮಾಡಿಕೊಳ್ಳಲು ಸಾಕಷ್ಟು ಶ್ರಮ ಹಾಕಿರುವುದಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ಹೊಸ ಬೌಲಿಂಗ್ ತಾರೆ ಪ್ರಫುಲ್ ಹಿಂಗೆ ಹೇಳಿದ್ದಾರೆ.

ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪ್ರೋತ್ಸಾಹದ ಮಾತುಗಳು ಆತ್ಮವಿಶ್ವಾಸ ಮೂಡಿಸಿದವು ಎಂದೂ ಹೇಳಿದ್ದಾರೆ. ಸೋಮವಾರ ಐಪಿಎಲ್ನ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅವರು ಮೊದಲ ಎರಡು ಓವರುಗಳಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಬಲವನ್ನು ಧ್ವಂಸ ಮಾಡಿದ್ದರು.

ವಿದರ್ಭದ ಪ್ರಫುಲ್ ಮತ್ತು ಬಿಹಾರದ ವೇಗದ ಬೌಲರ್ ಸಾಕಿಬ್ ಹಸನ್ ತಲಾ 4 ವಿಕೆಟ್ ಪಡೆದಿದ್ದರು. ಸನ್ರೈಸರ್ಸ್ ತಂಡ 57 ರನ್ಗಳ ಸುಲಭ ಜಯಗಳಿಸಿತ್ತು.

ಪ್ರಫುಲ್ ಮೊದಲ ಓವರಿನಲ್ಲೇ ಪ್ರಮುಖ ಆಟಗಾರರಾದ ವೈಭವ್ ಸೂರ್ಯವಂಶಿ, ಧ್ರುವ್ ಜುರೇಲ್ ಮತ್ತು ಡ್ವೇನ್ ಡಿಪ್ರಿಟೋರಿಯಸ್ ಮತ್ತು ಎರಡನೇ ಓವರಿನಲ್ಲಿ ನಾಯಕ ರಿಯಾನ್ ಪರಾಗ್ ಅವರ ವಿಕೆಟ್ಗಳನ್ನು ಕಬಳಿಸಿದ್ದರು.

‘ನಾನು ಮೊದಲ ಬಾರಿ ಹಾರ್ದಿಕ್ ಅವರಿಗೆ ಬೌಲಿಂಗ್ ಮಾಡುವಾಗ ನರ್ವಸ್ ಆಗಿದ್ದೆ. ಅವರೆಂತಹ ಆಟಗಾರ. ಅವರ ತಾಕತ್ತು ಎಂತಹದ್ದು ಎಂಬುದು ಗೊತ್ತೇ ಇರುವ ವಿಷಯ’ ಎಂದು ಹಿಂಗೆ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರಿಗೆ ಬೌಲಿಂಗ್ ಮಾಡಿದ ಕ್ಷಣಗಳನ್ನು ಜಿಯೊಸ್ಟಾರ್ ಜೊತೆ ಹಂಚಿಕೊಂಡರು.

‘ಮೊದಲ ಎಸೆತ ಪ್ರಯೋಗಿಸಿದ ನಂತರ ಧೈರ್ಯಬಂತು. ಒತ್ತಡವಿಲ್ಲದೇ ಬೌಲಿಂಗ್ ಮಾಡು ಎಂದು ನನ್ನಷ್ಟಕ್ಕೇ ಹೇಳಿಕೊಂಡೆ. ಪ್ರತಿಯೊಂದು ಎಸೆತವನ್ನು ಉತ್ತಮವಾಗಿ ಮಾಡಬೇಕೆಂದು ಯೋಚಿಸುತ್ತಿದ್ದೆ. ಯಾರ್ಕರ್ಗಳು ನನ್ನ ಅಸ್ತ್ರ. ಅದಕ್ಕೆ ಸಾಕಷ್ಟು ಅಭ್ಯಾಸ ಮಾಡಿದ್ದೇನೆ’ ಎಂದು 24 ವರ್ಷದ ಬೌಲರ್ ಹೇಳಿದರು.

‘ನಾನು ಅವರಿಗೆ ಉತ್ತಮವಾಗಿ ಯಾರ್ಕರ್ಗಳನ್ನುಹಾಕಿದೆ. ಒಂದು ರನ್ ತೆಗೆದು ಬೌಲರ್ ಎಂಡ್ಗೆ ಬಂದರು. ನಂತರ ನನ್ನ ಬಳಿ ಬಂದು ‘ಪ್ರಫುಲ್ ಭಾಯ್ ಚೆನ್ನಾಗಿ ಬೌಲ್ ಮಾಡಿದ್ದಿ’ ಎಂದು ಮೆಚ್ಚುಗೆ ಸೂಚಿಸಿದರು. ಇದು ನನ್ನಲ್ಲಿ ಸಾಕಷ್ಟು ವಿಶ್ವಾಸ ಮೂಡಿಸಿತು. ಪಂದ್ಯದ ನಂತರ ಅವರನ್ನು ಮತ್ತೊಮ್ಮೆ ಭೇಟಿಯಾದೆ. ‘ಬೌಲಿಂಗ್ ಚೆನ್ನಾಗಿದೆ. ಹಾಗೆಯೇ ಮುಂದುವರಿಸು. ಐಪಿಎಲ್ನಲ್ಲಿ ನೋಡುವೆ ಎಂದು ಹೇಳಿದ್ದರು’ ಎಂದು ಪ್ರಫುಲ್ ನೆನಪಿಸಿಕೊಂಡರು.

ಎಂಆರ್ಎಫ್ ಪೇಸ್ ಅಕಾಡೆಮಿಯಲ್ಲಿ ಫಿಸಿಯೊ ನವೀನ್ ಬಾಬು ಅವರು ಪ್ರಫುಲ್ ಅವರಿಗೆ ಆಗಿದ್ದ ಗಂಭೀರ ಗಾಯವನ್ನು ಗಮನಿಸಿದ್ದರು. ಆರೈಕೆಯ ವೇಳೆಯೂ ಪ್ರಮುಖ ಪಾತ್ರ ವಹಿಸಿದ್ದರು.

‘ಎರಡು ವರ್ಷಗಳಿಂದ ನನಗೆ ಅಕಾಡೆಮಿಯಿಂದ ಕರೆಗಳು ಬರುತ್ತಿದ್ದವು. ಆಗ ಹೋಗಲಾಗಲಿಲ್ಲ. ಮೂರನೇ ವರ್ಷ ಹೋದಾಗ ಗಾಯಾಳಾಗಿದ್ದೆ. ಫಿಸಿಯೊ ನನ್ನ ಆರೋಗ್ಯ ತಪಾಸಣೆ ಮಾಡಿ ಬೆನ್ನಿನ ಭಾಗದ ಮೂಳೆ ಮುರಿತವಾಗಿದೆ ಎಂದಿದ್ದರು. ನಾನು ಗುಣಮುಖರಾಗುವಾಗ ವೇಳೆಯೂ ಅವರು ನಿಗಾ ವಹಿಸಿದ್ದರು’ ಎಂದರು.

‘ಅಕಾಡೆಮಿಯಲ್ಲಿದ್ದ ವೇಳೆ ಆಸ್ಟ್ರೇಲಿಯಾದ ವೇಗಿಗಳಾದ ಜೋಶ್ ಹ್ಯಾಜಲ್ವುಡ್ ಮತ್ತು ಜೇ ರಿಚರ್ಡ್ಸನ್ ಅವರನ್ನು ಭೇಟಿಯಾಗುವ ಅವಕಾಶ ದೊರಕಿತು. ನಾನು ಹ್ಯಾಜಲ್ವುಡ್ ಅವರ ದೊಡ್ಡ ಅಭಿಮಾನಿ. ಅವರನ್ನು ಭೇಟಿಯಾಗಲು ಸಿಕ್ಕಿದ್ದು ವಿಶೇಷ ಅನುಭವ. ರಿಚರ್ಡ್ಸನ್ ಜೊತೆ ಫಿಟ್ನೆಸ್, ತರಬೇತಿ ಮಾದರಿ, ಡಯಟ್ ಬಗ್ಗೆ ಮಾಹಿತಿ ಪಡೆದೆ. ಇವೆಲ್ಲ ಕಲಿಕೆಯ ಭಾಗವಾದವು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-51-1718311272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.