ನವದೆಹಲಿ: ಅಜೇಯ ಓಟವನ್ನು ಮುಂದುವರಿಸುವ ಛಲ ದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಶನಿವಾರ ಇಲ್ಲಿ ನಡೆಯಲಿರುವ ಪಂದ್ಯ ದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿಸಲಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯವು ಆತಿಥೇಯ ಡೆಲ್ಲಿಗೆ ಮಹತ್ವದ್ದಾಗಿದೆ. ಅಕ್ಷರ್ ಪಟೇಲ್ ನಾಯಕತ್ವದ ತಂಡವು ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಮೂರು ಗೆದ್ದು, ಮೂರರಲ್ಲಿ ಸೋತಿದೆ. ತನ್ನ ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಬ್ಯಾಟಿಂಗ್ ವೈಫಲ್ಯದಿಂದಾಗಿ ಅಕ್ಷರ್ ಬಳಗ ಪರಾಭವಗೊಂಡಿತ್ತು. ನಿತೀಶ್ ರಾಣಾ ಅರ್ಧಶತಕ ಮತ್ತು ಸಮೀರ್ ರಿಜ್ವಿಯ ಉತ್ತಮ ಬ್ಯಾಟಿಂಗ್ ಮಾತ್ರ ಗಮನ ಸೆಳೆದಿತ್ತು.

ಅನುಭವಿ ಕೆ.ಎಲ್. ರಾಹುಲ್ 37 ರನ್ ಗಳಿಸಿದ್ದರು. ಆದರೆ ಡೇವಿಡ್ ಮಿಲ್ಲರ್ ಅವರು ಸೊನ್ನೆ ಸುತ್ತಿದ್ದರು. ಇದು ತಂಡಕ್ಕೆ ದುಬಾರಿಯಾಗಿತ್ತು. ಆ ಪಂದ್ಯದಲ್ಲಿ ಬೌಲರ್ಗಳೂ ಕಳಪೆ ಆಟವಾಡಿದ್ದರು. ಅಭಿಷೇಕ್ ಶರ್ಮಾ ಅವರು 135 ರನ್ ಗಳಿಸಿದ್ದರು. ಅವರನ್ನು ತಡೆಯಲು ಯಾವ ಬೌಲರ್ಗೂ ಸಾಧ್ಯವಾಗಲಿಲ್ಲ. ಅದರಿಂದಾಗಿ ಹೈದರಾಬಾದ್ ತಂಡವು ಬೃಹತ್ ಮೊತ್ತ ದಾಖಲಿಸಿತ್ತು. ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ರುವ ಡೆಲ್ಲಿ ತಂಡವು ಪ್ಲೇ ಆಫ್ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ, ಇಲ್ಲಿಂದ ಮುಂದೆ ಆಡುವ ಪಂದ್ಯಗಳಲ್ಲಿ ಹೆಚ್ಚು ಗೆಲುವುಗಳನ್ನು ಸಾಧಿಸುವುದು ಮುಖ್ಯವಾಗಲಿದೆ.

ಆದರೆ ಪಂಜಾಬ್ ತಂಡವನ್ನು ಮಣಿಸುವುದು ಸುಲಭವಲ್ಲ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ತಂಡವು ಇದುವರೆಗೂ ಟೂರ್ನಿಯಲ್ಲಿ ಸೋಲಿಲ್ಲದೇ ಮುನ್ನುಗ್ಗುತ್ತಿದೆ. 11 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಬಿಟ್ಟರೆ ಉಳಿದದ್ದರಲ್ಲಿ ಜಯ ಸಾಧಿಸಿದೆ.

ತಂಡದ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಪ್ರಿಯಾಂಶ್ ಆರ್ಯ (211 ರನ್) ಮತ್ತು ಕೂಪರ್ ಕೊನೊಲಿ (223 ರನ್) ಅವರು ಅಮೋಘ ಲಯದಲ್ಲಿದ್ದಾರೆ. ನಾಯಕ ಶ್ರೇಯಸ್, ಪ್ರಭಸಿಮ್ರನ್ ಸಿಂಗ್, ಶಶಾಂಕ್ ಸಿಂಗ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.

ಆಲ್ರೌಂಡರ್ ಮಾರ್ಕೊ ಯಾನ್ಸೆನ್, ಎಡಗೈ ವೇಗಿ ಅರ್ಷದೀಪ್ ಸಿಂಗ್, ಕನ್ನಡಿಗ ವೈಶಾಖ ವಿಜಯ ಕುಮಾರ್, ಝೇವಿಯರ್ ಬಾರ್ಟಲೆಟ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಪಂದ್ಯದ ಫಲಿತಾಂಶವನ್ನು ತಮ್ಮ ತಂಡದತ್ತ ಸೆಳೆದೊಯ್ಯುವ ಸಮರ್ಥ ಬೌಲರ್ಗಳಾಗಿದ್ದಾರೆ. ಇವರ ಕಠಿಣ ಸವಾಲನ್ನು ಮೀರಿ ನಿಲ್ಲುವಲ್ಲಿ ಡೆಲ್ಲಿ ಬ್ಯಾಟರ್ಗಳು ಯಶಸ್ವಿಯಾದರೆ ಮಾತ್ರ ಪಂಜಾಬ್ ತಂಡಕ್ಕೆ ಮೊದಲ ಸೋಲಿನ ರುಚಿ ತೋರಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-4-1362471839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.