ಮುಲ್ಲನಪುರ: ಪಂಜಾಬ್ ಕಿಂಗ್ಸ್ ತಂಡದ ಅಜೇಯ ಓಟಕ್ಕೆ ಮಂಗಳವಾರ ರಾಜಸ್ಥಾನ ರಾಯಲ್ಸ್ ತಡೆಯೊಡ್ಡಿತು. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಸೋಲು ಅನುಭವಿಸಿತು.

ಡೊನೊವನ್ ಫೆರೀರಾ (ಔಟಾಗದೇ 52; 26ಎ, 4x6, 6x3) ಮತ್ತು ಇಂಪ್ಯಾಕ್ಟ್ ಪ್ಲೇಯರ್ ಶುಭಂ ದುಬೆ (ಔಟಾಗದೇ 31; 12ಎ, 4x3, 6x2) ಅವರ ಅಮೋಘ ಜೊತೆಯಾಟದ ಬಲದಿಂದ ರಿಯಾನ್ ಪರಾಗ್ ಪಡೆ ಆರು ವಿಕೆಟ್ಗಳ ಜಯ ಸಾಧಿಸಿತು.

ಮಹಾರಾಜ ಯಾದವೀಂದ್ರ ಸಿಂಗ್ ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ಸ್ ಬೌಲಿಂಗ್ ಆಯ್ದುಕೊಂಡಿತು. ಪ್ರಭಸಿಮ್ರನ್ ಸಿಂಗ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಪಂಜಾಬ್ 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 222 ರನ್ ಗಳಿಸಿತು.

ದೊಡ್ಡ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಯುವ ತಾರೆ ವೈಭವ್ ಸೂರ್ಯವಂಶಿ (43; 16ಎ, 4x3, 6x5) ಹಾಗೂ ಯಶಸ್ವಿ ಜೈಸ್ವಾಲ್ (51; 27ಎ, 4x7, 6x1) ಅವರು ಬಿರುಸಿನ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 3.2 ಓವರ್ಗಳಲ್ಲಿ 51 ರನ್ ಸೇರಿಸಿತು. ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ವೈಭವ್, ಅರ್ಷದೀಪ್ ಸಿಂಗ್ ಎಸೆದ ನಾಲ್ಕನೇ ಓವರ್ನಲ್ಲಿ ಶ್ರೇಯಸ್ಗೆ ಕ್ಯಾಚಿತ್ತರು.

ವೈಭವ್ ನಿರ್ಗಮನದ ನಂತರ ಜೈಸ್ವಾಲ್ ರನ್ ಗಳಿಕೆಗೆ ವೇಗ ನೀಡಿದರು. ಟೂರ್ನಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು. ಪಂಜಾಬ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಜೈಸ್ವಾಲ್, ಧ್ರುವ ಜುರೇಲ್ (16;20ಎ) ಹಾಗೂ ನಾಯಕ ರಿಯಾನ್ ಪರಾಗ್ಗೆ (29; 16ಎ) ಪೆವಿಲಿಯನ್ ಹಾದಿ ತೋರಿದರು.

ರಾಯಲ್ಸ್ ಗೆಲುವಿಗೆ ಕೊನೆಯ ಆರು ಓವರ್ಗಳಲ್ಲಿ 72 ರನ್ ಬೇಕಿತ್ತು. ಆಗ ಜೊತೆಗೂಡಿದ ಡೊನೊವನ್– ಶುಭಂ ಅವರು 32 ಎಸೆತಗಳಲ್ಲಿ 77 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಯಲ್ಸ್ ಇನ್ನೂ ನಾಲ್ಕು ಎಸೆತಗಳಿರುವಂತೆ 4 ವಿಕೆಟ್ ಕಳೆದುಕೊಂಡು ಸಂಭ್ರಮಿಸಿತು. ಗೆಲುವಿನ ಸಿಕ್ಸರ್ ಹೊಡೆದ ಡೊನೊವನ್, ಅರ್ಧಶತಕವನ್ನೂ ಪೂರ್ಣಗೊಳಿಸಿಕೊಂಡರು.

ಪಂಜಾಬ್ ತಂಡದ ವೇಗಿಗಳಾದ ಅರ್ಷದೀಪ್ (4–0–68–1) ಹಾಗೂ ಲಾಕಿ ಫರ್ಗ್ಯೂಸನ್ (4–0–57–0) ದುಬಾರಿಯಾದರು.

ಇದಕ್ಕೆ ಮೊದಲು, ಲಯದಲ್ಲಿರುವ ಪ್ರಭಸಿಮ್ರನ್ ಸಿಂಗ್ (59; 44ಎ) ಹಾಗೂ ಪ್ರಿಯಾಂಶ್ ಆರ್ಯ (29; 11ಎ) ಅವರು ಎಂದಿನಂತೆ ಪಂಜಾಬ್ ತಂಡಕ್ಕೆ ಅಮೋಘ ಆರಂಭ ನೀಡಿದರು. ಇದರಿಂದಾಗಿ ಪವರ್ಪ್ಲೇನಲ್ಲಿ ಒಟ್ಟು 65 ರನ್ಗಳು ಸೇರಿದವು.

ಕೊನೆಯ ಹಂತದ ಓವರ್ಗಳಲ್ಲಿ ಸ್ಟೊಯಿನಿಸ್ (ಔಟಾಗದೇ 62; 22ಎ, 4x4, 6x6) ಬೀಸಾಟವಾಡಿದ್ದರಿಂದ ತಂಡವು ‘ದ್ವಿಶತಕ’ದ ಗಡಿ ದಾಟಿತು. ಎದುರಾಳಿಗೆ ಕಠಿಣ ಗುರಿಯೊಡ್ಡಿತು. ಸ್ಟೊಯಿನಿಸ್, ಈ ಆವೃತ್ತಿಯಲ್ಲಿ ಹೆಚ್ಚು ವೈಫಲ್ಯ ಅನುಭವಿಸಿದ್ದರು. ಆದರೆ ಇಲ್ಲಿ ರಾಯಲ್ಸ್ ಬೌಲರ್ಗಳ ಚಳಿ ಬಿಡಿಸಿದರು. ಕೊನೆಯ ನಾಲ್ಕು ಓವರ್ಗಳಲ್ಲಿ 62 ರನ್ಗಳು ಹರಿದು ಬಂದವು.

ರಾಯಲ್ಸ್ ತಂಡದ ‘ಕನ್ನಡಿಗ’ ಯಶ್ ರಾಜ್ ಪೂಂಜ (4–0–41–2) ಯಶಸ್ಸು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.