ಲಖನೌ (ಪಿಟಿಐ): ಪಂಜಾಬ್ ಕಿಂಗ್ಸ್ ತಂಡವು ಶನಿವಾರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಭಾರಿ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸೋಲಿನ ಸರಪಳಿ ಕಿತ್ತೊಗೆಯಬೇಕಿದೆ.

ಪಂಜಾಬ್ ತಂಡವು ಟೂರ್ನಿಯ ಆರಂಭದ ಏಳು ಪಂದ್ಯಗಳಲ್ಲಿ ಸೋಲನ್ನೇ ಕಂಡಿರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎದುರು 265 ರನ್ ಗುರಿಯನ್ನೂ ಯಶಸ್ವಿಯಾಗಿ ಮೀರಿ ನಿಂತು ಗೆದ್ದಿತ್ತು. ಆದರೆ ನಂತರದ ನಾಟಕೀಯ ಬೆಳವಣಿಗೆ ಯಲ್ಲಿ ಸತತ ಅರ್ಧ ಡಜನ್ ಸೋಲುಗಳ ಕಹಿಯುಂಡಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದ ತಂಡವು 13 ಅಂಕಗಳನ್ನು ಗಳಿಸಿ, ಐದನೇ ಸ್ಥಾನದಲ್ಲಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಗೆದ್ದರೂ ಭಾನುವಾರದ ಎರಡು ಪಂದ್ಯಗಳ ಫಲಿತಾಂಶದ ಮೇಲೆ ಪಂಜಾಬ್ ಭವಿಷ್ಯ ನಿರ್ಧಾರವಾಗಲಿದೆ.

ಈ ಪಂದ್ಯದಲ್ಲಿ ಜಯಿಸಲು ಪಂಜಾಬ್ ಬ್ಯಾಟರ್ಗಳು ತಮ್ಮ ನೈಜ ಲಯಕ್ಕೆ ಮರಳಬೇಕಿದೆ. ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ.ಪ್ರಭಸಿಮ್ರನ್ ಕಳೆದ ಐದು ಇನಿಂಗ್ಸ್ ಗಳಲ್ಲಿ ಕೇವಲ ಒಂದು ಅರ್ಧಶತಕ ಹೊಡೆದಿದ್ದಾರೆ. ಮಧ್ಯ ಕ್ರಮಾಂಕದಲ್ಲಿ ಕೂಪರ್ ಕೊನೊಲಿ ಬಿಟ್ಟರೆ ಉಳಿದವ ರಿಂದ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ.

ಶ್ರೇಯಸ್ ಅಯ್ಯರ್ ಕೂಡ ಆರು ಪಂದ್ಯಗಳಲ್ಲಿ ಕೇವಲ ಒಂದು ಬಾರಿ ಅರ್ಧಶತಕ ಗಳಿಸಿದ್ದಾರೆ. ಬೌಲಿಂಗ್ನಲ್ಲಿಯೂ ಅರ್ಷದೀಪ್ ಸಿಂಗ್, ಮಾರ್ಕೊ ಯಾನ್ಸೆನ್, ಝೇವಿಯರ್ ಬಾರ್ಟ್ಲೆಟ್ ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಶಿಸ್ತಿನ ದಾಳಿ ನಡೆಸಿ ಬಿಗಿಹಿಡಿತ ಸಾಧಿಸಬೇಕಿದೆ.

ಏಕೆಂದರೆ; ಲಖನೌ ತಂಡವು ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿದೆ. ಆ ತಂಡಕ್ಕೆ ಇದು ಔಪಚಾರಿಕ ಪಂದ್ಯವಷ್ಟೇ. ಆದ್ದರಿಂದ ಒತ್ತಡವಿಲ್ಲದೇ ಆಡುವುದು ಖಚಿತ. ಆದ್ದರಿಂದ ಒತ್ತಡದಲ್ಲಿರುವ ಪಂಜಾಬ್ ತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಬಹುದು. ಈಚೆಗೆ ಲಖನೌ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಅದರಿಂದಾಗಿ ಚೆನ್ನೈ ತಂಡದ ಸಣ್ಣದೊಂದು ಅವಕಾಶವೂ ಕೈತಪ್ಪಿತ್ತು. ತವರಿನಂಗಳ ದಲ್ಲಿ ರಿಷಭ್ ಪಂತ್ ಬಳಗವು ತನ್ನ ಕೊನೆಯ ಪಂದ್ಯವನ್ನು ಜಯಿಸುವುದರೊಂದಿಗೆ ಅಭಿಯಾನಕ್ಕೆ ತೆರೆ ಎಳೆಯುವ ಛಲದಲ್ಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-555486967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.