ಮುಲ್ಲನಪುರ, ಚಂಡೀಗಡ : ಶ್ರೇಯಸ್ ಅಯ್ಯರ್ ಅವರು ಮತ್ತೊಮ್ಮೆ ತಮ್ಮ ನಾಯಕತ್ವ ಹಾಗೂ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಶನಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ತಮ್ಮ ತಂಡವನ್ನು ಸನ್ರೈಸರ್ಸ್ ಹೈದರಾಬಾದ್ ಎದುರು 6 ವಿಕೆಟ್ಗಳ ಅಂತರದ ಗೆಲುವಿನತ್ತ ಮುನ್ನಡೆಸಿದರು. 220 ರನ್ ಗುರಿಯನ್ನು ಪಂಜಾಬ್ ತಂಡವು ಬೆನ್ನಟ್ಟಿತ್ತು. ಶ್ರೇಯಸ್ 33 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದರು. ಆರಂಭಿಕ ಜೋಡಿ ಪ್ರಿಯಾಂಶ್ ಆರ್ಯ (57; 20ಎ) ಮತ್ತು ಪ್ರಭಸಿಮ್ರನ್ ಸಿಂಗ್ (51; 25ಎ) ಮೊದಲ ವಿಕೆಟ್ ಜತೆಯಾಟದಲ್ಲಿ 99 ರನ್ ಸೇರಿಸಿದರು. ಈ ರನ್ಗಳು ಕೇವಲ 37 ಎಸೆತಗಳಲ್ಲಿ ಸೇರಿದವು.

ಈ ಗಟ್ಟಿಯಾದ ಅಡಿಪಾಯದ ಮೇಲೆ ಶ್ರೇಯಸ್ ಗೆಲುವಿನ ಸೌಧ ನಿರ್ಮಿಸಿದರು. ಅವರ ಬ್ಯಾಟಿಂಗ್ನಲ್ಲಿ 5 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ಗಳು ಇದ್ದವು. ಅವರ ಆಟದ ಬಲದಿಂದ ತಂಡವು 18.5 ಓವರ್ಗಳಲ್ಲಿ 4 ವಿಕೆಟ್ಗಳಿಗೆ 223 ರನ್ ಗಳಿಸಿತು. ನಾಲ್ಕನೇ ಪಂದ್ಯವಾಡಿದ ಪಂಜಾಬ್ ತಂಡಕ್ಕೆ ಇದು ಮೂರನೇ ಜಯ. ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೇಯಸ್ ಅಯ್ಯರ್ ಯೋಜನೆಯನ್ನು ಹೈದರಾಬಾದ್ ತಂಡದ ‘ಸಿಡಿಲಮರಿ’ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ವಿಫಲಗೊಳಿಸಿದರು. ಅಭಿಷೇಕ್ ಅವರು ತಾವೆದುರಿಸಿದ ಮೊದಲ ಎಸೆತವನ್ನು ಸಿಕ್ಸರ್ಗೆ ಎತ್ತಲಿಲ್ಲ. ಆದರೆ ಆಟಕ್ಕೆ ಕುದುರಿಕೊಂಡ ನಂತರ ಎಂಟು ಸಿಕ್ಸರ್ ಹಾಗು ಐದು ಬೌಂಡರಿಗಳನ್ನು ಬಾರಿಸಿದರು. ಕೇವಲ 28 ಎಸೆತಗಳಲ್ಲಿ 74 ರನ್ ಸೂರೆ ಮಾಡಿದರು. ಅವರು ಅರ್ಷದೀಪ್ ಸಿಂಗ್ ಅವರ ಒಂದೇ ಓವರ್ನಲ್ಲಿ 24 ರನ್ ಗಳಿಸಿದರು. 18 ಎಸೆತಗಳಲ್ಲಿ ಅರ್ಧಶತಕ ದಾಟಿದರು.

ಇನ್ನೊಂದೆಡೆ ಹೆಡ್ 23 ಎಸೆತಗಳಲ್ಲಿ 38 ರನ್ ಹೊಡೆದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 120 ರನ್ ಕಲೆಹಾಕಿದರು. ಅದಕ್ಕಾಗಿ ಅವರಿಬ್ಬರೂ 8.1 ಓವರ್ಗಳನ್ನು ಆಡಿದರು.

ಕಡೆಗೂ ಪಂಜಾಬ್ ಬೌಲರ್ಗಳು ಸನ್ರೈಸರ್ಸ್ ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಶಶಾಂಕ್ ಸಿಂಗ್ (20ಕ್ಕೆ2) ಇನಿಂಗ್ಸ್ನ ಒಂಬತ್ತನೇ ಓವರ್ನಲ್ಲಿ ಅಭಿಷೇಕ್ ಮತ್ತು ಹೆಡ್ ವಿಕೆಟ್ ಕಬಳಿಸಿದರು. ಹೈದರಾಬಾದ್ ನಾಯಕ ಇಶಾನ್ ಕಿಶನ್ (27; 17ಎ) ಮತ್ತು ಹೆನ್ರಿಚ್ ಕ್ಲಾಸೆನ್ (39; 33ಎ) ಅವರು ತಂಡದ ಮೊತ್ತವು ಹೆಚ್ಚಲು ಕಾಣಿಕೆ ನೀಡಿದರು.

ಶಶಾಂಕ್ ಅವರನ್ನು ಬಿಟ್ಟರೆ ಉಳಿದೆಲ್ಲ ಬೌಲರ್ಗಳೂ ದುಬಾರಿಯಾದರು. ವೈಶಾಖ ವಿಜಯಕುಮಾರ್ ಅವರು 2 ಓವರ್ಗಳಲ್ಲಿ 33 ರನ್ ಕೊಟ್ಟರು. ಅನುಭವಿ ಯಜುವೇಂದ್ರ ಚಾಹಲ್ 3 ಓವರ್ಗಳಲ್ಲಿ 33 ರನ್ ಕೊಟ್ಟರು. ಇಬ್ಬರಿಗೂ ವಿಕೆಟ್ ಲಭಿಸಲಿಲ್ಲ.

ಹೈದರಾಬಾದ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 219 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡದ ಪ್ರಿಯಾಂಶ್ ಅವರು 16 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಅವರು ಹರ್ಷಲ್ ಪಟೇಲ್ ಅವರ ಒಂದೇ ಓವರ್ನಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಗಳಿಸಿದರು. ಬ್ಯಾಟಿಂಗ್ನಲ್ಲಿಯೂ ಮಿಂಚಿದ ಶಶಾಂಕ್ (ಅಜೇಯ 16; 9ಎ) ಅವರು ಶ್ರೇಯಸ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸನ್ರೈಸರ್ಸ್ ತಂಡದ ಎಡಗೈ ಸ್ಪಿನ್ನರ್ ಶಿವಾಂಗ್ ಕುಮಾರ್ (4–0–33–3) ಅವರನ್ನು ಬಿಟ್ಟರೆ ಉಳಿದವರೆಲ್ಲರೂ ದುಬಾರಿಯಾದರು. ಹರ್ಷದುಬೆ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು: ಸನ್ರೈಸರ್ಸ್ ಹೈದರಾಬಾದ್: 20 ಓವರ್ಗಳಲ್ಲಿ 6ಕ್ಕೆ 219 (ಅಭಿಷೇಕ್ ಶರ್ಮಾ 74, ಟ್ರಾವಿಸ್ ಹೆಡ್ 38, ಇಶಾನ್ ಕಿಶನ್ 27, ಹೆನ್ರಿಚ್ ಕ್ಲಾಸೆನ್ 39; ಅರ್ಷದೀಪ್ ಸಿಂಗ್ 50ಕ್ಕೆ2, ಶಶಾಂಕ್ ಸಿಂಗ್ 20ಕ್ಕೆ2); ಪಂಜಾಬ್ ಕಿಂಗ್ಸ್: 18.5 ಓವರ್ಗಳಲ್ಲಿ 4ಕ್ಕೆ 223 (ಪ್ರಿಯಾಂಶ್ ಆರ್ಯ 57, ಪ್ರಭಸಿಮ್ರನ್ ಸಿಂಗ್ 51, ಶ್ರೇಯಸ್ ಅಯ್ಯರ್ ಔಟಾಗದೇ 69; ಹರ್ಷ್ ದುಬೆ 38ಕ್ಕೆ1, ಶಿವಾಂಗ್ ಕುಮಾರ್ 33ಕ್ಕೆ3).

ಪಂದ್ಯದ ಆಟಗಾರ: ಶ್ರೇಯಸ್ ಅಯ್ಯರ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-51-1794862814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.