ಮುಲ್ಲನಪುರ: ಅಪ್ರತಿಮ ಆಟವಾಡುತ್ತಿರುವ ಪಂಜಾಬ್ ಕಿಂಗ್ಸ್ ತಂಡವು ಮಂಗಳವಾರ ನಡೆಯುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಸತತವಾಗಿ ವಿಫಲರಾಗಿರುವ ನಾಯಕ ರಿಯಾನ್ ಪರಾಗ್ ಲಯಕ್ಕೆ ಮರಳಿ ಪ್ರಬಲ ಎದುರಾಳಿಗೆ ಸವಾಲೊಡ್ಡಲು ಸ್ಫೂರ್ತಿ ತುಂಬಬೇಕಾಗಿದೆ.

ಹೋದ ವರ್ಷ ಪಂಜಾಬ್ ಕಿಂಗ್ಸ್ನಲ್ಲಿ ಶ್ರೇಯಸ್ ಅಯ್ಯರ್ – ಕೋಚ್ ರಿಕಿ ಪಾಂಟಿಂಗ್ ಯುಗ ಆರಂಭವಾದ ನಂತರ ಈ ತಂಡ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ.

ಮೊತ್ತ ಬೆನ್ನಟ್ಟುವಲ್ಲಿ ಸ್ಥಿರತೆ ಸಾಧಿಸುತ್ತಿದ್ದ ವಿರಾಟ್ ಕೊಹ್ಲಿ ಅವರಿಗೆ ‘ಚೇಸ್ ಮಾಸ್ಟರ್’ ಎಂಬ ಖ್ಯಾತಿ ಇದೆ. ಈಗ ಶ್ರೇಯಸ್ ಅಯ್ಯರ್ ಸಹ ಅದೇ ಹಾದಿಯಲ್ಲಿದ್ದಾರೆ. ನಾಯಕ ಮತ್ತು ಬ್ಯಾಟರ್ ಆಗಿ ಅವರು ಒತ್ತಡದ ಸನ್ನಿವೇಶದಲ್ಲೂ ಸಂಯಮ ವಹಿಸಿ ಆಡುತ್ತಿರುವುದು ತಂಡದ ಬಲ ಹೆಚ್ಚಿಸಿದೆ. ಪಂಜಾಬ್ ಕಿಂಗ್ಸ್ ಈ ಋತುವಿನ ಐಪಿಎಲ್ನಲ್ಲಿ ಏಕೈಕ ಅಜೇಯ ತಂಡವಾಗಿದೆ.

ಅಯ್ಯರ್ ತಂಡವನ್ನು ಅಮೋಘವಾಗಿ ಮುನ್ನಡೆಸಿದ್ದಾರೆ. ತಂಡವೂ ಸಾಂಘಿಕವಾಗಿ ಪ್ರದರ್ಶನ ನೀಡುತ್ತಿದೆ. ಕಳೆದ ಋತುವಿನಲ್ಲಿ ಅತಿ ಕಡಿಮೆ ಮೊತ್ತ (111) ರಕ್ಷಿಸಿಕೊಂಡರೆ, ಈ ಬಾರಿ ನವದೆಹಲಿಯ ಉರಿಸೆಕೆಯಲ್ಲಿ ಅತಿ ದೊಡ್ಡ ಮೊತ್ತವನ್ನು (265) ಯಶಸ್ವಿಯಾಗಿ ಬೆನ್ನಟ್ಟಿದೆ.

ಏಳು ಪಂದ್ಯಗಳಲ್ಲಿ ಆರರಲ್ಲಿ ತಂಡ ಗೆದ್ದಿದ್ದು, ಒಂದು ಮಳೆಯ ಪಾಲಾಗಿದೆ. ಆರಂಭ ಆಟಗಾರರಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭಸಿಮ್ರನ್ ಸಿಂಗ್ ಅವರು ಎದುರಾಳಿ ದಾಳಿಯನ್ನು ಪುಡಿಗಟ್ಟುವ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕೋಟ್ಲಾದ ಪಂದ್ಯದಲ್ಲಿ ಪವರ್ಪ್ಲೇ ಅವಧಿಯಲ್ಲೇ 116 ರನ್ ಚಚ್ಚಿದ್ದಾರೆ.

ಬ್ಯಾಟಿಂಗ್ ಪಿಚ್ನಲ್ಲಿ ಕಿಂಗ್ಸ್ ಬೌಲರ್ಗಳೂ ಸಖತ್ತಾಗಿ ದಂಡಿಸಿಕೊಂಡಿದ್ದರು. ತಂಡ ಈ ಬಾರಿಯ ಋತುವಿನಲ್ಲಿ ಮುಲ್ಲನಪುರದಲ್ಲಿ ಕೊನೆಯ ಪಂದ್ಯ ಆಡುತ್ತಿದೆ. ತಂಡವು ತವರಿನ ಇತರ ಮೂರು ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲಿದೆ.

ಹಾಲಿ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಆರಂಭ ಮಾಡಿತ್ತು. ಆದರೆ ಮಧ್ಯಮ ಹಂತದಲ್ಲಿ ಎಡವುತ್ತಿದೆ. ಹದಿಹರೆಯದ ವೈಭವ್ ಸೂರ್ಯವಂಶಿ ಮೈನವಿರೇಳಿಸುವಂಥ ಇನಿಂಗ್ಸ್ ಆಡಿದ್ದಾರೆ. ಆದರೆ ಹಿಂದಿನ ಕೆಲವು ಪಂದ್ಯಗಳಲ್ಲಿ ತಂಡದಿಂದ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ.

ಪರಾಗ್ ಎಂಟು ಪಂದ್ಯಗಳಲ್ಲಿ ಕೇವಲ 88 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ ಸಹ 113 ದಾಟಿಲ್ಲ. ಹೀಗಾಗಿ ಪ್ರತಿ ಪಂದ್ಯಕ್ಕೆ ಅವರ ಮೇಲಿನ ಒತ್ತಡ ಏರುತ್ತಿದೆ. ಸನ್ರೈಸರ್ಸ್ ಹೈದರಾಬಾದ್ ತಂಡವು ಶನಿವಾರ 229 ರನ್ಗಳ ಗುರಿ ಆರಾಮವಾಗಿ ಬೆಂಬತಿತ್ತು. ರಾಯಲ್ಸ್ ತಂಡದ ಫೀಲ್ಡಿಂಗ್ ಸಹ ಸುಧಾರಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.