ರಾಯಪುರ: ಛತ್ತೀಸಗಢ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ವೀರ ನಾರಾಯಣ ಸಿಂಗ್ ಅವರ ಹೆಸರಿನಲ್ಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದೆ. ಇದರೊಂದಿಗೆ ‘ಹಾಲಿ ಚಾಂಪಿಯನ್’ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ‘ಎರಡನೇ ತವರು’ ಕ್ರೀಡಾಂಗಣ ಇದಾಗಲಿದೆ.

ಸ್ಥಳೀಯ ಅಭಿಮಾನಿಗಳಷ್ಟೇ ಅಲ್ಲ, ಬೆಂಗಳೂರಿನಿಂದಲೂ ‘ರೆಡ್ ಆರ್ಮಿ’ ಸದಸ್ಯರೂ ಇಲ್ಲಿಗೆ ಲಗ್ಗೆ ಹಾಕಿದ್ದಾರೆ. ಇಲ್ಲಿಯ ಬಿಸಿಲಿನ ತಾಪಕ್ಕೆ ಕ್ರಿಕೆಟ್ ಕಾವು ಕೂಡ ಸೇರಿಕೊಂಡಿದೆ. ಭಾನುವಾರ ಇಲ್ಲಿ ನಡೆಯುವ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ‘ಐದು ಬಾರಿಯ ಚಾಂಪಿಯನ್’ ಮುಂಬೈ ತಂಡವನ್ನು ಎದುರಿಸಲಿದೆ.

ಈ ಕಾಲಘಟ್ಟದ ಇಬ್ಬರೂ ‘ದಿಗ್ಗಜ’ರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಮುಖಾಮುಖಿಯಾಗುವುದನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ಪ್ಲೇ ಆಫ್ ಸ್ಥಾನಕ್ಕಾಗಿ ತುರುಸಿನ ಜಿದ್ದಾಜಿದ್ದಿ ಏರ್ಪಟ್ಟಿರುವ ಈ ಹಂತದಲ್ಲಿ ಬೆಂಗಳೂರು –ಮುಂಬೈ ಹಣಾಹಣಿಯು ರೋಚಕವಾಗುವ ಎಲ್ಲ ಸಾಧ್ಯತೆಗಳೂ ಇವೆ.

ಅಂಕಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಕುತೂಹಲ ಮೂಡುವುದು ಸಹಜ. ಮೊದಲ ಆರು ಸ್ಥಾನಗಳಲ್ಲಿರುವ ತಂಡಗಳು ಪ್ಲೇಆಫ್ ಪ್ರವೇಶದ ಸ್ಪರ್ಧೆಯಲ್ಲಿ ಇನ್ನೂ ಇವೆ. ನಿಕಟ ಪೈಪೋಟಿ ನಡೆಸುತ್ತಿವೆ. ಇನ್ನುಳಿದ ನಾಲ್ಕು ತಂಡಗಳಿಗೆ ಅವಕಾಶದ ಬಾಗಿಲು ಮುಚ್ಚಿದೆ. ಆದರೆ ಅವು ಈ ಹಂತದಲ್ಲಿ ಉಳಿದ ತಂಡಗಳ ಗೆಲುವಿಗೆ ಅಡ್ಡಿಯಾಗುವ ಸವಾಲೊಡ್ಡುತ್ತಿವೆ. ಅಂತಹ ತಂಡಗಳಲ್ಲಿ ಮುಂಬೈ ಕೂಡ ಇದೆ. 9ನೇ ಸ್ಥಾನದಲ್ಲಿರುವ ಈ ತಂಡವನ್ನು ಮೊದಲ ಸುತ್ತಿನ ಪಂದ್ಯದಲ್ಲಿ ಆರ್ಸಿಬಿಯು ವಾಂಖೆಡೆ ಕ್ರೀಡಾಂಗಣದಲ್ಲಿಯೇ ಸೋಲಿಸಿತ್ತು. ಈಗ ಮತ್ತೊಮ್ಮೆ ಗೆಲ್ಲುವತ್ತ ರಜತ್ ಪಾಟೀದಾರ್ ಬಳಗ ಚಿತ್ತ ನೆಟ್ಟಿದೆ.

ಆದರೆ; ತಂಡದ ಬ್ಯಾಟಿಂಗ್ ಪಡೆ ಅಸ್ಥಿರ ಆಟವಾಡುತ್ತಿರುವುದು ಚಿಂತೆಯ ವಿಷಯವಾಗಿದೆ. ಕಳೆದ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋಲಿನ ಕಹಿ ಅನುಭವಿಸಿದೆ. ಅಹಮದಾಬಾದಿನಲ್ಲಿ ಗುಜರಾತ್ ಟೈಟನ್ಸ್ ತಂಡದ ಎದುರು ಕೇವಲ 155 ರನ್ನಿಗೆ ಕುಸಿದಿತ್ತು. ಲಖನೌ ಸೂಪರ್ ಜೈಂಟ್ಸ್ ಎದುರು ಏಕನಾ ಕ್ರೀಡಾಂಗಣದಲ್ಲಿ ನಾಯಕ ರಜತ್ ಅವರೇ ಹೇಳಿದಂತೆ ‘ಬ್ಯಾಟಿಂಗ್ ಸ್ನೇಹಿ’ ಪಿಚ್ನಲ್ಲಿ 213 ರನ್ ಗುರಿಯನ್ನು ಸಾಧಿಸುವಲ್ಲಿ ಎಡವಿತ್ತು.

ಅನುಭವಿ ವಿರಾಟ್, ಕನ್ನಡಿಗ ದೇವದತ್ತ ಪಡಿಕ್ಕಲ್ ಮತ್ತು ರಜತ್ ಅವರು ತಮ್ಮ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಆದರೆ ಫಿಲ್ ಸಾಲ್ಟ್ ಗೈರುಹಾಜರಿಯಲ್ಲಿ ಇನಿಂಗ್ಸ್ ಆರಂಭಿಸುತ್ತಿರುವ ಜೇಕಬ್ ಬೆಥೆಲ್ ಅವರ ವೈಫಲ್ಯ ತಂಡಕ್ಕೆ ಕಳವಳ ಮೂಡಿಸಿದೆ. ಅವರು ನಾಲ್ಕು ಇನಿಂಗ್ಸ್ಗಳಲ್ಲಿ ಒಟ್ಟು 43 ರನ್ ಮಾತ್ರ ಗಳಿಸಿದ್ದಾರೆ. ಹೀಗಾಗಿ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಕೊಹ್ಲಿ ಅವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಬೆಂಚ್ ಕಾಯಿಸುತ್ತಿರುವ ವೆಂಕಟೇಶ್ ಅಯ್ಯರ್ ಅವರನ್ನು ಜೇಕಬ್ ಬದಲಿಗೆ ಇನಿಂಗ್ಸ್ ಆರಂಭಿಸಲು ಕಳಿಸುವ ಬಗ್ಗೆ ತಂಡದ ಚಿಂತಕರ ಚಾವಡಿ ಯೋಚಿಸಬಹುದು. ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಕೂಡ ಲಯದಲ್ಲಿಲ್ಲ. ಈ ಟೂರ್ನಿಯಲ್ಲಿ ಅವರು 64 ರನ್ ಮಾತ್ರ ಗಳಿಸಿದ್ದಾರೆ. ಟಿಮ್ ಡೇವಿಡ್ ಮತ್ತು ರೊಮೇರಿಯೊ ಶೆಫರ್ಡ್ ಅವರು ಕೊನೆಯ ಹಂತದ ಓವರ್ಗಳಲ್ಲಿ ಬೀಸಾಟಕ್ಕಿಳಿಯಲು ಮೇಲಿನ ಕ್ರಮಾಂಕದ ಬ್ಯಾಟರ್ಗಳು ಉತ್ತಮ ಅಡಿಪಾಯ ಹಾಕುವ ಅಗತ್ಯವಿದೆ.

ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಝಲ್ವುಡ್ ಅವರೇ ತಂಡದ ಶಕ್ತಿಯಾಗಿದ್ದಾರೆ. ಕೃಣಾಲ್ ಪಾಂಡ್ಯ ಹಾಗೂ ಸುಯಶ್ ಶರ್ಮಾ ಅವರ ಸ್ಪಿನ್ ಬೌಲಿಂಗ್ ಕೂಡ ನಿರ್ಣಾಯಕವಾಗಲಿದೆ.

ಹಾರ್ದಿಕ್ ಪಾಂಡ್ಯ ಅವರು ತಂಡದೊಂದಿಗೆ ಇಲ್ಲಿಗೆ ಬಂದಿದ್ದಾರೆ. ಆದರೆ ಕಣಕ್ಕಿಳಿಯವುದು ಖಚಿತವಿಲ್ಲ. ಮುಂಬೈ ತಂಡದ ಸ್ಫೋಟಕ ಶೈಲಿಯ ಬ್ಯಾಟರ್ ರೋಹಿತ್ ಶರ್ಮಾ, ರಿಯಾನ್ ರಿಕೆಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್ ಮತ್ತು ರುದರ್ಫೋರ್ಡ್ ಅವರ ಮುಂದೆ ಆರ್ಸಿಬಿ ದಾಳಿಯನ್ನು ಎದುರಿಸಿ ನಿಲ್ಲುವ ಸವಾಲು ಇದೆ. ಮುಂಬೈ ವೇಗಿ ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಅವರಿಗೂ ತಮ್ಮ ನೈಜ ಸಾಮರ್ಥ್ಯ ಮೆರೆದು ಆರ್ಸಿಬಿ ಬ್ಯಾಟಿಂಗ್ ಬಲಕ್ಕೆ ಸವಾಲೊಡ್ಡಬೇಕಿದೆ.

ರಾಯಪುರ ‘ಎರಡನೇ ತವರು’

ಹೋದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 11 ಅಭಿಮಾನಿಗಳು ಅಸುನೀಗಿದ್ದರು. ಅದರಿಂದಾಗಿ ಈ ವರ್ಷ ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯಗಳಿಗೆ ಅನುಮತಿ ಸಿಗುವುದು ಅನುಮಾನವಾಗಿತ್ತು.

ಸರ್ಕಾರದ ನಿಯೋಗದ ಶಿಫಾರಸುಗಳಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿಗಳನ್ನು ಮಾಡಲಾಯಿತು. ಅದರ ನಂತರವಷ್ಟೇ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲಾಗಿತ್ತು. ಆದರೆ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ಎರಡು ತಿಂಗಳು ಇರುವಾಗಲೇ ಆರ್ಸಿಬಿ ಫ್ರ್ಯಾಂಚೈಸಿಯು ರಾಯಪುರ, ಪುಣೆ ಮತ್ತು ನವಿ ಮುಂಬೈ ಕ್ರೀಡಾಂಗಣಗಳಲ್ಲಿ ತನ್ನ ತವರು ಪಂದ್ಯಗಳನ್ನು ಆಡುವ ಲೆಕ್ಕಾಚಾರ ಹಾಕಿತ್ತು. ಅದಕ್ಕಾಗಿ ಛತ್ತೀಸಗಢ ಸರ್ಕಾರದೊಂದಿಗೆ ಎರಡು ಪಂದ್ಯಗಳ ಆಯೋಜನೆಗಾಗಿ ಅನುಮತಿ ಪಡೆದಿತ್ತು.

ಅದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳನ್ನು ಮಾತ್ರ ಆಡಿಸಲಾಯಿತು. ರಾಯಪುರದಲ್ಲಿ ಮುಂಬೈ (ಮೇ 10) ಮತ್ತು ಕೆಕೆಆರ್ (ಮೇ 13) ಎದುರಿನ ಪಂದ್ಯಗಳನ್ನು ಆರ್ಸಿಬಿ ಆಡಲಿದೆ. ಈ ಕ್ರೀಡಾಂಗಣದಲ್ಲಿ 60 ಸಾವಿರ ಪ್ರೇಕ್ಷಕರಿಗೆ ಆಸನಗಳ ವ್ಯವಸ್ಥೆ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1748287754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.