ಮುಲ್ಲನಪುರ (ಪಿಟಿಐ): ಒಂದು ಡಜನ್ ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ ಕೇವಲ ಮೂರು ರನ್ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಆದರೆ ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫಯರ್ –2 ಪ್ರವೇಶಿಸಲು ಅವರ ಆಟ ನೆರವಾಯಿತು.

ಮಹಾರಾಜ ಯಾದವೀಂದ್ರಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಎದುರು ರಾಜಸ್ಥಾನ ತಂಡವು 47 ರನ್ಗಳಿಂದ ಜಯಿಸಿತು. ಸನ್ರೈಸರ್ಸ್ ಅಭಿಯಾನಕ್ಕೆ ತೆರೆಬಿತ್ತು.

ರಿಯಾನ್ ಪರಾಗ್ ಪಡೆ, ಇದೇ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಎರಡನೇ ಕ್ವಾಲಿಫಯರ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಸನ್ರೈಸರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಭವ್ ಕೇವಲ 29 ಎಸೆತಗಳಲ್ಲಿ 97 ರನ್ಗಳನ್ನು ಸೂರೆ ಮಾಡಿದರು. ಅದರಲ್ಲಿ ಚೆಂಡು ಐದು ಸಲ ಬೌಂಡರಿಗೆರೆಗೆ ಮುತ್ತಿಕ್ಕಿದರೆ, 12 ಸಲ ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿತ್ತು. ಧ್ರುವ ಜುರೇಲ್ (50; 21ಎ, 4x5, 6x3) ಬಿರುಸಿನ ಅರ್ಧಶತಕ ಗಳಿಸಿದರು. ಇದರಿಂದಾಗಿ ರಾಯಲ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 243 ರನ್ ಗಳಿಸಿತು. ಅದಕ್ಕುತ್ತರವಾಗಿ ಸನ್ರೈಸರ್ಸ್ ತಂಡವು 19.2 ಓವರ್ಗಳಲ್ಲಿ 196 ರನ್ಗಳಿಗೆ ಹೋರಾಟ ಮುಗಿಸಿತು.

ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡಕ್ಕೆ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ (58ಕ್ಕೆ3) ಅಡ್ಡಿಯಾದರು. ಅಭಿಷೇಕ್ ಶರ್ಮಾ ಅವರನ್ನು ಖಾತೆ ತೆರೆಯಲು ಜೋಫ್ರಾ ಅವಕಾಶ ಕೊಡಲಿಲ್ಲ. ಟ್ರಾವಿಸ್ ಹೆಡ್ (17 ರನ್) ಮತ್ತು ಇಶಾನ್ ಕಿಶನ್ (33 ರನ್) ಅವರಿಬ್ಬರಿಗೂ ಡಗ್ಔಟ್ ದಾರಿ ತೋರಿಸಿದರು.

ಕೊನೆಯ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ (38; 20ಎ) ಮತ್ತು ಸಲೀಲ್ ಅರೋರಾ (35; 21ಎ) ತೋರಿದ ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ವೇಗಿಗಳಾದ ನಾಂದ್ರೆ ಬರ್ಗರ್, ಸುಶಾಂತ್ ಮಿಶ್ರಾ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಗಳಿಸಿ, ಸನ್ರೈಸರ್ಸ್ ತಂಡದ ಪತನಕ್ಕೆ ಕಾರಣರಾದರು.

ಕಮಿನ್ಸ್ಗೆ ವೈಭವ್ ಬಿಸಿ: ಪ್ಯಾಟ್ ಕಮಿನ್ಸ್ ಅವರಂತಹ ನುರಿತ ವೇಗಿಗೂ ಸಿಕ್ಸರ್ಗಳನ್ನು ಸಿಡಿಸಿದ 15 ವರ್ಷ ವಯಸ್ಸಿನ ವೈಭವ್ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇನ್ನೊಂದು ಬದಿಯಲ್ಲಿದ್ದ ಯಶಸ್ವಿ ಜೈಸ್ವಾಲ್ (29; 29ಎ, 4x4) ಯಾವುದೇ ಧಾವಂತ ಮಾಡದೇ ವೈಭವ್ ಆಟಕ್ಕೆ ಬೆಂಬಲವಾಗಿ ನಿಂತರು.

ಕಮಿನ್ಸ್ ಅವರ ಬೌಲಿಂಗ್ನಲ್ಲಿ ವೈಭವ್ ನಾಲ್ಕು ಸಿಕ್ಸರ್ ಹೊಡೆದರು. ಎಂಟನೇ ಓವರ್ನ ಕೊನೆಯ ಎಸೆತದಲ್ಲಿ ಪ್ರಫುಲ್ ಹಿಂಗೆ ಅವರ ಎಸೆತವನ್ನು ಅಪ್ಪರ್ ಕಟ್ ಮಾಡಿದರು. ಥರ್ಡ್ಮ್ಯಾನ್ ಬೌಂಡರಿಯಲ್ಲಿದ್ದ ಆರ್. ಸ್ಮರಣ್ ಅವರು ಜಿಗಿದು ಕ್ಯಾಚ್ ಪಡೆದರು. ವೈಭವ್ ತೀವ್ರ ಬೇಸರದಿಂದ ಡಗ್ಔಟ್ನತ್ತ ಹೆಜ್ಜೆ ಹಾಕಿದರು. ಎದುರಾಳಿ ತಂಡದ ಫೀಲ್ಡರ್ಗಳೂ ವೈಭವ್ ಬೆನ್ನು ತಟ್ಟಿ ಅಭಿನಂದಿಸಿದರು. ಈ ಓವರ್ನ ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿದ್ದರು. ಕ್ರಿಸ್ ಗೇಲ್ ಅವರು ಈ ಹಿಂದೆ 30 ಎಸೆತಗಳಲ್ಲಿ ಶತಕ ಹೊಡೆದಿದ್ದರು. ಆ ದಾಖಲೆ ಮುರಿಯುವ ಅವಕಾಶ ವೈಭವ್ ಕೈತಪ್ಪಿತು. ಆದರೆ ಗೇಲ್ ಅವರು ಒಂದೇ ಟೂರ್ನಿಯಲ್ಲಿ ಹೊಡೆದ 59 ಸಿಕ್ಸರ್ಗಳ ದಾಖಲೆಯನ್ನು ಬಿಹಾರಿ ಹುಡುಗ ನುಚ್ಚುನೂರು ಮಾಡಿದರು.

ಬ್ಯಾಟರ್ಗಳ ಸ್ವರ್ಗದಂತಿದ್ದ ಪಿಚ್ನಲ್ಲಿ ಮೊದಲ ವಿಕೆಟ್ ಜತೆಯಾಟದಲ್ಲಿ 8 ಓವರ್ಗಳಲ್ಲಿ 125 ರನ್ ಸೇರಿದವು.

ಕ್ರೀಸ್ಗೆ ಬಂದ ಜುರೇಲ್ ಅವರೂ ಚುರುಕಾಗಿ ಬ್ಯಾಟಿಂಗ್ ಮಾಡಿದರು. ಅವರ ಆಟದ ವೈಖರಿ ನೋಡಿದರೆ ತಂಡವು 280 ರನ್ ಗಳಿಸುವ ಭರವಸೆ ಮೂಡಿತ್ತು. ಆದರೆ ಯಶಸ್ವಿ ಜೈಸ್ವಾಲ್ ವಿಕೆಟ್ ಗಳಿಸಿದ ಶಿವಾಂಗ್ ಕುಮಾರ್ ಮಿಂಚಿದರು. ಇನ್ನೊಂದೆಡೆ ರಿಯಾನ್ ಪರಾಗ್ ಅವರು ಅಟಕ್ಕೆ ಕುದುರುವ ಹೊತ್ತಿನಲ್ಲಿಯೇ ಪ್ರಫುಲ್ ಅವರು ವಿಕೆಟ್ ಗಳಿಸಿದರು. ಅವರೇ ಜುರೇಲ್ಗೂ ಪೆವಿಲಿಯನ್ ದಾರಿ ತೋರಿಸಿದರು.

ನಂತರ ಬಂದ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸದಂತೆ ಬೌಲರ್ಗಳು ಬಿಗಿ ಹಿಡಿತ ಸಾಧಿಸಿದರು. ಇದರಿಂದಾಗಿ ಕೊನೆಯ ಹಂತದ ಓವರ್ಗಳಲ್ಲಿ ಹೆಚ್ಚು ರನ್ಗಳು ಸೇರಲಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-4-121848514

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.