ಇಂದು ಕ್ರಿಕೆಟ್ ಕೇವಲ ಆಟವಾಗಿಲ್ಲ, ಉದ್ಯಮದ ಭಾಗವೂ ಆಗಿದೆ. ಹಲವು ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತವೆ. ಅದರಲ್ಲೂ ವಿಶೇಷವಾಗಿ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನಲ್ಲಿ ಜಾಹೀರಾತು ನೀಡಲು ಕಂಪನಿಗಳು ಸಾಲುಗಟ್ಟಿರುತ್ತವೆ.

ಸದ್ಯ, ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆ.ಎಂ.ಎಫ್ ನಂದಿನಿ ಉತ್ಪನ್ನಗಳ ಪ್ರಾಯೋಜಕತ್ವವನ್ನು ನೀಡಲು ನಿರ್ಧರಿಸಿದೆ.

ಇದೇ ಮಾರ್ಚ್ 28ರಿಂದ ಐಪಿಎಲ್ ಪಂದ್ಯಗಳು ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಹಾಗೂ ಸನ್ ರೈಸರ್ಸ್ ತಂಡಗಳು ಸೆಣೆಸಲಿವೆ. ನಂದಿನಿ ಈವರೆಗೆ ಆರ್ಸಿಬಿ ಸೇರಿದಂತೆ ಒಟ್ಟು ಮೂರು ಕ್ರಿಕೆಟ್ ತಂಡಗಳಿಗೆ ಪ್ರಯೋಜಕತ್ವವನ್ನು ನೀಡಿದೆ. ಆ ತಂಡಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

2024ರ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ತಂಡಗಳಿಗೆ ನಂದಿನಿ ತನ್ನ ಪ್ರಯೋಜಕತ್ವವನ್ನು ನೀಡಿತ್ತು. ಭಾರತ ತಂಡಕ್ಕೆ ಪ್ರಯೋಜಕತ್ವ ನೀಡಲು ಬಿಸಿಸಿಐ ₹350 ಕೋಟಿಯನ್ನು ನಿಗದಿಪಡಿಸಿತ್ತು. ಹಾಗಾಗಿ ವಿದೇಶ ತಂಡಗಳಿಗೆ ಕೆ.ಎಂ.ಎಫ್. ₹2.5 ಕೋಟಿಗೆ ಪ್ರಾಯೋಜಕತ್ವ ನೀಡಿತ್ತು.

ಇದೀಗ 2026ರ ಐಪಿಎಲ್ ಪಂದ್ಯದಲ್ಲಿ ತವರಿನ ತಂಡವಾದ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆ.ಎಂ.ಎಫ್ ಪ್ರಾಯೋಜಕತ್ವ ನೀಡುವುದಾಗಿ ಘೋಷಿಸಿದೆ.

ಪ್ರಾಯೋಜಕತ್ವಕ್ಕಾಗಿ ಕೆ.ಎಂ.ಎಫ್ ₹4.80 ಕೋಟಿ ವಿನಿಯೋಗ ಮಾಡಲಿದೆ. ಆಟಗಾರರ ಜರ್ಸಿಗಳ ಮೇಲೆ ಅಥವಾ ಕ್ರೀಡಾಂಗಣದ್ಲಲಿ ಯಾವುದೇ ಜಾಹೀರಾತು ಇರುವುದಿಲ್ಲ. ಬದಲಾಗಿ ತಂಡದ ಆಟಗಾರರ ಚಿತ್ರಗಳನ್ನು ಹೊರಾಂಗಣ ಜಾಹೀರಾತಿನಲ್ಲಿ ಬಳಸಿಕೊಳ್ಳಲಾಗುವುದು ಎಂದು ಕೆ.ಎಂ.ಎಫ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.