ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಈ ಸಲದ ಐಪಿಎಲ್ ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಮುಖಾಮುಖಿಯಾಗಿ ದ್ದವು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ಪಂದ್ಯ ನಡೆದು ಈಗ 55 ದಿನಗಳು ಸರಿದುಹೋಗಿವೆ. ಈ ಅವಧಿಯಲ್ಲಿ ಏಳು, ಬೀಳುಗಳನ್ನು ಕಾಣುತ್ತ ಪ್ಲೇ ಆಫ್ ಪ್ರವೇಶಿಸಿರುವ ಉಭಯ ತಂಡಗಳು ಈಗ ಮತ್ತೆ ಹಣಾಹಣಿಗೆ ಸಿದ್ಧವಾಗಿವೆ.

ಈ ಬಾರಿ ಸನ್ರೈಸರ್ಸ್ ತಂಡದ ತವರು ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಆಡಲಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್ಸಿಬಿ (18 ಅಂಕ) ಮತ್ತು ಮೂರನೇ ಸ್ಥಾನದಲ್ಲಿರುವ ಸನ್ರೈಸರ್ಸ್ (16 ಅಂಕ) ತಂಡಗಳಿಗೆ ಮೊದಲ ಸ್ಥಾನ ಪಡೆಯುವ ಪೈಪೋಟಿ ಇದೆ. ಆರ್ಸಿಬಿಯು ಉತ್ತಮ ನೆಟ್ ರನ್ರೇಟ್ (1.065) ಗಳಿಸಿರುವುದ ರಿಂದ ಅಗ್ರಸ್ಥಾನದಲ್ಲಿಯೇ ಉಳಿಯುವ ಅವಕಾಶಗಳು ಹೆಚ್ಚು.

ರಜತ್ ಪಾಟೀದಾರ್ ನಾಯಕತ್ವದ ಬೆಂಗಳೂರು ತಂಡವು ಎಲ್ಲ ವಿಭಾಗಗಳಲ್ಲಿಯೂ ಸಮತೋಲನದಿಂದ ಕೂಡಿದೆ. ಸ್ಫೋಟಕ ಶೈಲಿಯ ಬ್ಯಾಟರ್ಗಳು, ಪರಿಣಾಮಕಾರಿ ದಾಳಿ ಮಾಡುವ ಬೌಲರ್ಗಳು ಮತ್ತು ಫೀಲ್ಡಿಂಗ್ನಲ್ಲಿಯೂ ಉಳಿದೆಲ್ಲ ತಂಡಗಳಿಗಿಂತ ಹೆಚ್ಚು ಶಿಸ್ತುಬದ್ಧತೆಯ ಆಟಗಾರರು ತಂಡದಲ್ಲಿದ್ದಾರೆ.

‘ದಿಗ್ಗಜ’ ಆಟಗಾರ ವಿರಾಟ್ ಕೊಹ್ಲಿ ಅಮೋಘ ಲಯದಲ್ಲಿದ್ದಾರೆ. 13 ಪಂದ್ಯಗಳಿಂದ 542 ರನ್ ಗಳಿಸಿದ್ದಾರೆ. ದೇವದತ್ತ ಪಡಿಕ್ಕಲ್ ಅವರೂ ಅಮೋಘ ಲಯದಲ್ಲಿದ್ದಾರೆ. ಆರಂಭಿಕ ಜೇಕಬ್ ಬೆಥೆಲ್ ಅವರು ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರು ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚಲಿದೆ. ಕಳೆದ ಪಂದ್ಯದಲ್ಲಿ ರಜತ್ ಆಡಿರಲಿಲ್ಲ. ಅವರ ಬದಲಿಗೆ ಸ್ಥಾನ ಪಡೆದಿದ್ದ ವೆಂಕಟೇಶ್ ಅಯ್ಯರ್ ಮಿಂಚಿದ್ದರು. ಪಂದ್ಯದ ಆಟಗಾರ ಗೌರವ ಗಳಿಸಿದ್ದರು.

ಆಲ್ರೌಂಡರ್ ಕೃಣಾಲ್ ಪಾಂಡ್ಯ, ಟಿಮ್ ಡೇವಿಡ್ ಅವರು ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಜಿತೇಶ್ ಶರ್ಮಾ ಅವರು ತಮ್ಮ ನೈಜ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ. ಸುಯಶ್ ಶರ್ಮಾ ಮತ್ತು ರೊಮೆರಿಯೊ ಶೆಫರ್ಡ್ ಕೂಡ ಇದುವರೆಗೆ ಹೆಚ್ಚು ಪರಿಣಾಮ ಬೀರಿಲ್ಲ.

ಆದರೆ; ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ವುಡ್ ಮತ್ತು ರಸಿಕ್ ಸಲಾಮ್ ದಾರ್ ಅವರ ವೇಗದ ದಾಳಿಯು ಪರಿಣಾಮಕಾರಿಯಾಗಿದೆ. ಸನ್ರೈಸರ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಗೆ ಆರ್ಸಿಬಿ ಬೌಲಿಂಗ್ ವಿಭಾಗವು ಕಠಿಣ ಸವಾಲೊಡ್ಡುವ ಸಾಧ್ಯತೆಗಳು ಹೆಚ್ಚು. ಆತಿಥೇಯ ತಂಡದ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಕಟ್ಟಿಹಾಕುವುದು ಬೌಲರ್ಗಳ ಮುಂದಿರುವ ಪ್ರಮುಖ ಸವಾಲುಗಳು. ಮೊದಲಾರ್ಧದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿಯ ಜೇಕಬ್ ಡಫಿ ಅವರು ಸನ್ರೈಸರ್ಸ್ ತಂಡವನ್ನು ಕಟ್ಟಿಹಾಕಿದ್ದರು.

ಆದರೆ ಆಗ ಪ್ಯಾಟ್ ಕಮಿನ್ಸ್ ಇರಲಿಲ್ಲ. ಅವರು ಗಾಯದಿಂದ ಚೇತರಿಸಿಕೊಂಡು ಬಂದ ನಂತರ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರಿಂದಾಗಿ ತಂಡದ ಬೌಲಿಂಗ್ ಬಲವೂ ಹೆಚ್ಚಾಗಿದೆ. ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಅವರ ತಂತ್ರಗಾರಿಕೆ ಈ ಪಂದ್ಯದಲ್ಲಿ ಪ್ರಮುಖವಾಗಲಿದೆ.

‘ಈ ಪಂದ್ಯದಲ್ಲಿ ರಜತ್ ಕಣಕ್ಕೆ ಇಳಿಯಲಿದ್ದಾರೆ’ ಎಂದು ಆರ್ಸಿಬಿ ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-44-1489609298

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.