ನಾಗೇಶ್ ಶೆಣೈ

ಬೆಂಗಳೂರು: ವಾರದ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಎದುರು ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಋತುವಿನ ಮೊದಲ ಪಂದ್ಯ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಕ್ರವಾರ ಇಲ್ಲಿಯೇ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಲೀಗ್ನ ಉಳಿದ ಎಲ್ಲಾ ಪಂದ್ಯಗಳನ್ನು ಬೆಂಗಳೂರಿನಿಂದ ಆಚೆ ಆಡಲಿರುವ ಆರ್ಸಿಬಿ ತಂಡಕ್ಕೆ ಈ ಪಂದ್ಯದ ಗೆಲುವು, ಮುಂದಿನ ಸವಾಲುಗಳಿಗೆ ಸಜ್ಜಾಗಲು ಆತ್ಮವಿಶ್ವಾಸ ತುಂಬಲಿದೆ.

ಪೂರ್ವ ನಿರ್ಧಾರಿತವಾಗಿರುವಂತೆ ಆರ್ಸಿಬಿ ತನ್ನ ಉಳಿದ ಎರಡು ತವರು ಪಂದ್ಯಗಳನ್ನು ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿ (ಶಹೀದ್ ವೀರನಾರಾಯಣ ಸಿಂಗ್ ಅಂತರ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ) ಆಡಲಿದೆ. ಇತರ ಐದು ಪಂದ್ಯಗಳನ್ನೂ ತವರಿನಿಂದಾಚೆ ಆಡಬೇಕಾಗಿದೆ. ಹೀಗಾಗಿ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ಸವಾಲು ಇದೆ. ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಲು ಹಾಲಿ ಚಾಂಪಿಯನ್ ತಂಡಕ್ಕೆ ಇದೊಂದು ಅವಕಾಶ.

ಡೆಲ್ಲಿ ವಿರುದ್ಧ ಆಡಿದ್ದ ಪಿಚ್ ನಿಧಾನ ಗತಿಯಿಂದ ಕೂಡಿದ್ದು, ಬ್ಯಾಟರ್ಗಳಿಗೆ ‘ಸ್ಟ್ರೋಕ್ ಮೇಕಿಂಗ್’ ಸುಲಭವಾಗಿರಲಿಲ್ಲ. ಹೀಗಾಗಿ ಆರ್ಸಿಬಿ ಮತ್ತು ಡೆಲ್ಲಿ ಬ್ಯಾಟರ್ಗಳು ಪರದಾಡಿದ್ದರು. ಈಗ ಬ್ಯಾಟರ್ಗಳಿಗೆ ಮತ್ತೆ ಲಯಕ್ಕೆ ಮರಳಬೇಕಾದ ಸವಾಲು ಇದೆ.

ತಂಡದ ಪ್ರಮುಖ ಬ್ಯಾಟರ್ಗಳು ಈ ಋತುವಿನಲ್ಲಿ ಯಶಸ್ಸು ಗಳಿಸಿದ್ದಾರೆ. ಆರಂಭ ಆಟಗಾರ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮೂರನೇ ಕ್ರಮಾಂಕದಲ್ಲಿ ಸ್ಥಳೀಯರೇ ಆದ ದೇವದತ್ತ ಪಡಿಕ್ಕಲ್, ನಾಯಕ ರಜತ್ ಪಾಟೀದಾರ್, ಟಿಮ್ ಡೇವಿಡ್ ಸಾಕಷ್ಟು ರನ್ ಗಳಿಸಿದ್ದಾರೆ.

ಪಾಟೀದಾರ್ ಆಕ್ರಮಣಕಾರಿಯಾಗಿ ಆಡಿದ್ದು, ಈ ಋತುವಿನಲ್ಲಿ ತಮ್ಮ ಆಟಕ್ಕೆ ಹೊಸ ಆಯಾಮ ನೀಡಿದ್ದಾರೆ. 230 ರನ್ ಕಲೆಹಾಕಿರುವ ಅವರು ಕೊಹ್ಲಿ ಅವರಿಗಿಂತ 17 ರನ್ಗಳಷ್ಟೇ ಹಿಂದೆಯಿದ್ದಾರೆ. ಸ್ಟ್ರೈಕ್ರೇಟ್ ಸಹ 213ರ ಹತ್ತಿರವಿದೆ. 22 ಸಿಕ್ಸರ್ ಬಾರಿಸಿರುವ ಅವರು ಸನ್ರೈಸರ್ಸ್ನ ಅಭಿಷೇಕ್ ಶರ್ಮಾ (27 ಸಿಕ್ಸರ್) ನಂತರದ ಸ್ಥಾನದಲ್ಲಿದ್ದಾರೆ.

ತಂಡವು ವಿಂಡೀಸ್ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಬದಲು ಜೇಕಬ್ ಡಫಿ ಅವರಿಗೆ ಅವಕಾಶ ನೀಡಬಹುದೇ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.

‘ತವರು ಮೈದಾನ, ಪ್ರೇಕ್ಷಕರ ಬೆಂಬಲ ಇವೆರಡು ನಮಗೆ ಸಿಗಲಿದೆ. ಪಿಚ್ ಬಿಸಿಸಿಐ ಕ್ಯುರೇಟರ್ ಉಸ್ತುವಾರಿ ಯಲ್ಲಿರುವುದರಿಂದ ನಮ್ಮದೇನೂ ಪ್ರಭಾವ ಇರುವುದಿಲ್ಲ’ ಎಂದು ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ಪಂದ್ಯಪೂರ್ವ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ್ದಾರೆ.

ಟೈಟನ್ಸ್ಗೆ ಒತ್ತಡ: ಗುಜರಾತ್ ಟೈಟನ್ಸ್ ತಂಡವು ತವರಿನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 99 ರನ್ಗಳ ಭಾರಿ ಸೋಲು ಅನುಭವಿಸಿತು. ಈ ದೊಡ್ಡ ಅಂತರದ ಸೋಲು ತಂಡದ ಮೇಲೆ ಒತ್ತಡ ಹೇರಿದೆ. ಪ್ರಬಲ ಬೌಲಿಂಗ್ ಪಡೆ, ತಿಲಕ್ ವರ್ಮಾ ಅವರನ್ನು ಕಟ್ಟಿಹಾಕಲು ವಿಫಲವಾಯಿತು. ನಂತರ ಬ್ಯಾಟಿಂಗ್ ಕುಸಿತ ಕಂಡು 100 ರನ್ಗಳಿಗೆ ಉರುಳಿತು.

ವೇಗಿಗಳಾದ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಕಗಿಸೊ ರಬಾಡ, ಸ್ಪಿನ್ನರ್ ರಶೀದ್ ಖಾನ್ ಅವರನ್ನು ಒಳಗೊಂಡ ಬೌಲಿಂಗ್ ಪಡೆ ಪ್ರಬಲವಾಗಿಯೇ ಇದೆ. ಆದರೆ ಬ್ಯಾಟರ್ಗಳ ವೈಫಲ್ಯವು ತಂಡಕ್ಕೆ ಮುಳುವಾಗುತ್ತಿದೆ.

ನಾಯಕ ಶುಭಮನ್ ಗಿಲ್ (5 ಪಂದ್ಯಗಳಿಂದ 265) ಮಾತ್ರ ಯಶಸ್ಸು ಗಳಿಸಿದ್ದಾರೆ. ಕೆಲಮಟ್ಟಿಗೆ ಬಟ್ಲರ್ ಸ್ಥಿರ ಪ್ರದರ್ಶನ ನೀಡಿದ್ದಾರೆ. ಆದರೆ ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ ಅವರು ಉಪಯುಕ್ತ ಆಟವಾಡುತ್ತಿಲ್ಲ. ಇದು ತಂಡದ ಮೇಲಿನ ಒತ್ತಡ ಹೆಚ್ಚಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1117879979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.