ಧರ್ಮಶಾಲಾ: ಸತತ ಸೋಲುಗಳ ಸುಳಿಯಲ್ಲಿ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡದ ಗಾಯದ ಮೇಲೆ ಬರೆ ಎಳೆಯಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿದ್ಧವಾಗಿದೆ.

ಭಾನುವಾರ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯ ಲಿರುವ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗ ಲಿವೆ. ರಾಯಪುರದಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ದೌಲ್ಧಾರಾ ವಲಯದ ಪರ್ವತಶ್ರೇಣಿಗಳ ಮಧ್ಯೆ ಇರುವ ಈ ಕ್ರೀಡಾಂಗಣದಲ್ಲಿ ಕೊಹ್ಲಿ ಬ್ಯಾಟಿಂಗ್ ರಂಗೇರುವ ನಿರೀಕ್ಷೆ ಇದೆ.

ಹಾಲಿ ಚಾಂಪಿಯನ್ ಆರ್ಸಿಬಿ ಈ ಪಂದ್ಯದಲ್ಲಿ ಕಿಂಗ್ಸ್ ಎದುರು ಗೆಲುವಿನ ನೆಚ್ಚಿನ ತಂಡವಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು ಮೊದಲ ಏಳು ಪಂದ್ಯಗಳಲ್ಲಿ ಅಜೇಯವಾಗಿತ್ತು. ಆದರೆ ನಂತರದ ಐದು ಪಂದ್ಯಗಳಲ್ಲಿ ಸತತ ಸೋಲಿನ ಕಹಿಯುಂಡಿದೆ. ಆರನೇ ಸೋಲು ತಂಡದ ಪ್ಲೇಆಫ್ ಹಾದಿಯನ್ನು ಮುಚ್ಚಿಬಿಡುವ ಸಾಧ್ಯತೆ ಇದೆ.

200ಕ್ಕಿಂತ ಹೆಚ್ಚು ರನ್ಗಳ ಮೊತ್ತಗಳನ್ನು ರಕ್ಷಿಸಿಕೊಳ್ಳುವಲ್ಲಿ ಕಿಂಗ್ಸ್ ವಿಫಲವಾಗಿದೆ. ಅದರಿಂದಾಗಿ ಬೌಲಿಂಗ್ ವಿಭಾಗದಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು 10ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರು. ಝೇವಿಯರ್ ಬಾರ್ಟ್ಲೆಟ್ ಮತ್ತು ಮಾರ್ಕೊ ಯಾನ್ಸೆನ್ ಅವರೂ ದುಬಾರಿ ಯಾಗುತ್ತಿದ್ದಾರೆ. ಅಝ್ಮತ್ವುಲ್ಲಾ ಒಮರ್ಝೈ ಅವರು ಆಲ್ರೌಂಡ್ ಆಟ ಪ್ರದರ್ಶಿಸಿದ್ದಾರೆ. ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡ ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಅದರೆ ಅವರಿಗೆ ಫೀಲ್ಡರ್ಗಳು ಕ್ಯಾಚ್ ಪಡೆದು ಸಹಕರಿಸಿದರೆ ತಂಡಕ್ಕೆ ಲಾಭವಾಗಬಹುದು.

ಆರ್ಸಿಬಿಯ ಆರಂಭಿಕ ಬ್ಯಾಟರ್ ಜೇಕಬ್ ಬೆಥೆಲ್ ಅವರು ಯಶಸ್ವಿಆಗಿಲ್ಲ. ಆದರೆ ವಿರಾಟ್ ಮತ್ತು ದೇವದತ್ತ ಪಡಿಕ್ಕಲ್ ಅವರು ಆ ಕೊರತೆಯನ್ನು ತುಂಬುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟೀದಾರ್, ಟಿಮ್ ಡೇವಿಡ್, ಜಿತೇಶ್ ಶರ್ಮಾ ಅವರು ಲಯಕ್ಕೆ ಮರಳಬೇಕಿದೆ. ಕೃಣಾಲ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ.

ಆದರೆ ಇಲ್ಲಿ ಪಂಜಾಬ್ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯು, ಆರ್ಸಿಬಿಯ ಶ್ರೇಷ್ಠ ದರ್ಜೆಯ ಬೌಲರ್ಗಳನ್ನು ಹೇಗೆ ಎದುರಿಸು ತ್ತಾರೆಂಬ ಕುತೂಹಲ ಗರಿಗೆದರಿದೆ. 22 ವಿಕೆಟ್ ಗಳಿಸಿರುವ ಭುವನೇಶ್ವರ್ ಕುಮಾರ್, ಆಸ್ಟ್ರೇಲಿಯಾ ತಾರೆ ಜೋಶ್ ಹೇಝಲ್ವುಡ್ ಅವರನ್ನು ಪವರ್ಪ್ಲೇಯಲ್ಲಿ ಎದುರಿಸುವ ಸವಾಲು ದೊಡ್ಡದಾಗಲಿದೆ. ಅಲ್ಲದೇ ಜೇಕಬ್ ಡಫಿ, ರಸಿಕ್ ಸಲಾಂ ದಾರ್, ಸ್ಪಿನ್ನರ್ ಸುಯಶ್ ಶರ್ಮಾ ಅವರು ಮಧ್ಯಮ ಹಂತದ ಓವರ್ಗಳಲ್ಲಿ ಬ್ಯಾಟರ್ಗಳ ನಿಯಂತ್ರಣ ಮಾಡಬಲ್ಲ ಸಮರ್ಥರು.

ಅದರಿಂದಾಗಿ ಪಂಜಾಬ್ ತಂಡದ ಬ್ಯಾಟರ್ ಪ್ರಭಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೊಯಿನಿಸ್, ಕೂಪರ್ ಕೊನೊಲಿ ಅವರ ಮುಂದೆ ಆರ್ಸಿಬಿ ಬೌಲರ್ಗಳನ್ನು ಎದುರಿಸುವ ಕಠಿಣ ಸವಾಲಿದೆ.

ಮಳೆ ಬರದಿದ್ದರೆ, ರೋಚಕ ಹಣಾಹಣಿ ಗರಿಗೆದರುವ ನಿರೀಕ್ಷೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.