ಹೈದರಾಬಾದ್ (ಪಿಟಿಐ): ದೀರ್ಘ ಕಾಲದ ನಂತರ ರಿಷಭ್ ಪಂತ್ ಅವರು ಹೊಣೆಯಿಂದ ಆಡಿ ತಂಡದ ಗೆಲುವನ್ನು ಪೂರೈಸಿದರು. ಅವರ ಅಜೇಯ ಅರ್ಧ ಶತಕದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಮೇಲೆ 5 ವಿಕೆಟ್ಗಳ ರೋಚಕ ಜಯ ಪಡೆಯಿತು.

ಆದರೆ ಲಖನೌ ವಿಜಯದಲ್ಲಿ ಪಂತ್ ಅವರಷ್ಟೇ ಮಿಂಚಿದವರು ವೇಗದ ಬೌಲರ್ ಮೊಹಮ್ಮದ್ ಶಮಿ. ಪಂದ್ಯದ ಆರಂಭದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿ ಅವರು ಹೈದರಾಬಾದ್ ಬ್ಯಾಟರ್ಗಳನ್ನು ಕಂಗೆಡಿಸಿದರು; ಅಷ್ಟೇ ಅಲ್ಲ, ರಾಷ್ಟ್ರೀಯ ಆಯ್ಕೆಗಾರರಿಗೂ ತಮ್ಮ ಸಾಮರ್ಥ್ಯ ಕುಂದಿಲ್ಲ ಎಂಬ ಸಂದೇಶ ರವಾನಿಸಿದರು.

ಸಮಯೋಚಿತವಾಗಿ ಆಡಿದ ಪಂತ್ 50 ಎಸೆತಗಳಲ್ಲಿ 9 ಬೌಂಡರಿಗಳಿದ್ದ ಅಜೇಯ 68 ರನ್ ಹೊಡೆದರು. 157 ರನ್ಗಳ ಗುರಿ ಎದುರಿಸಿದ್ದ ಲಖನೌ ತಂಡ ಒಂದು ಎಸೆತ ಉಳಿದಿರುವಂತೆ 5 ವಿಕೆಟ್ಗೆ 160 ರನ್ ಹೊಡೆದು ಮೊದಲ ಗೆಲುವಿನ ಸಂಭ್ರಮ ಆಚರಿಸಿತು.

ಕೌಶಲ ಮತ್ತು ಗುಣಮಟ್ಟದ ದಾಳಿ ಪ್ರದರ್ಶಿಸಿದ ಶಮಿ (4–0–9–2) ಮೊದಲ ಓವರಿನಲ್ಲೇ ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ (0) ಮತ್ತು ಎರಡನೇ ಓವರಿನಲ್ಲಿ ಟ್ರಾವಿಸ್ ಹೆಡ್ (7) ಅವರ ವಿಕೆಟ್ಗಳನ್ನು ಪಡೆದರು. 18 ಡಾಟ್ಬಾಲ್ಗಳನ್ನು ಮಾಡಿದರು. ಸನ್ರೈಸರ್ಸ್ ಅಂತಿಮವಾಗಿ 9 ವಿಕೆಟ್ಗೆ 156 ರನ್ ಗಳಿಸಲಷ್ಟೇ ಶಕ್ತವಾಯಿತು.

ಲಖನೌ ತಂಡಕ್ಕೆ ಮರ್ಕರಂ (45, 27ಎ, 4x6, 6x2) ಮತ್ತು ರಿಷಭ್ ಪಂತ್ ಎರಡನೇ ವಿಕೆಟ್ಗೆ 40 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮರ್ಕರಂ ನಿರ್ಗಮಿಸಿದ ಮೇಲೆ ಒಂದು ಕಡೆ ನಿಯಮಿತವಾಗಿ ವಿಕೆಟ್ಗಳು ಉರುಳಿದವು. ಆದರೆ ಇನ್ನೊಂದು ಕಡೆ ಪಂತ್ ಹೊಣೆಯರಿತು ಆಟವಾಡಿದರು. ದೀರ್ಘಕಾಲದ ನಂತರ ತಂಡವನ್ನು ಗೆಲ್ಲಿಸಿದರು. ಜಯದೇವ್ ಉನದ್ಕತ್ ಮಾಡಿದ ಅಂತಿಮ ಓವರಿನಲ್ಲಿ ಲಖನೌ ಗೆಲುವಿಗೆ 9 ರನ್ಗಳು ಬೇಕಿದ್ದವು. ಎರಡು ನೇರ ಬೌಂಡರಿಗಳು ಸ್ಕೋರ್ ಸಮಮಾಡಿದವು. ಮಿಡ್ಆಫ್ ಮೇಲೆ ಚೆಂಡನ್ನು ಲಾಫ್ಟ್ ಮಾಡಿ ಮತ್ತೊಂದು ಬೌಂಡರಿಯೊಡನೆ ಪಂತ್ ಗೆಲುವನ್ನು ಭರ್ಜರಿಯಾಗಿಯೇ ಪೂರೈಸಿದರು.

ಇದಕ್ಕೆ ಮೊದಲು ಶಮಿ ಅವರ ಉರಿದಾಳಿಗೆ ಆರಂಭದ ಕುಸಿತ ಕಂಡ ಸನ್ರೈಸರ್ಸ್ ಸಂಕಷ್ಟದಲ್ಲಿತ್ತು. ಪ್ರಿನ್ಸ್ ಯಾದವ್ ಬೌಲಿಂಗ್ನಲ್ಲಿ ಡ್ರೈವ್ಗೆ ಮುಂದಾದ ನಾಯಕ ಇಶಾನ್ ಕಿಶನ್ (1) ಆಫ್ಸ್ಟಂಪ್ ಉರುಳಿತು. ಸ್ಪಿನ್ನರ್ ದಿಗ್ವೇಶ್ ರಾಠಿ ಅವರು ಲಿಯಾಮ್ ಲಿವಿಂಗ್ಸ್ಟೋನ್ (14) ವಿಕೆಟ್ ಪಡೆದಾಗ ಸನ್ರೈಸರ್ಸ್ 26 ರನ್ನಿಗೆ 4 (7.1 ಓವರ್) ವಿಕೆಟ್ ಕಳೆದುಕೊಂಡಿತ್ತು. ಕ್ರೀಡಾಂಗಣ ಮೌನವಾಯಿತು.

ಆದರೆ ಒತ್ತಡದ ಸನ್ನಿವೇಶದಲ್ಲೂ ಬೀಸಾಟವಾಡಿದ ಹೆನ್ರಿಚ್ ಕ್ಲಾಸೆನ್ (62, 41ಎ, 4x5, 6x2) ಮತ್ತು ಲಯದಲ್ಲಿರುವ ನಿತೀಶ್ ಕುಮಾರ್ ರೆಡ್ಡಿ (56, 33ಎ, 4x3, 6x5) ಅವರು ಅರ್ಧಶತಕಗಳನ್ನು ಬಾರಿಸಿದರಷ್ಟೇ ಅಲ್ಲ, ಐದನೇ ವಿಕೆಟ್ಗೆ 116 ರನ್ ಸೇರಿಸಿ ತಂಡಕ್ಕೆ ಬಲ ನೀಡಿದರು. ಆದರೆ ಇಬ್ಬರೂ ಅಲ್ಪ ಅಲ್ಪಅಂತರದಲ್ಲಿ ನಿರ್ಗಮಿಸಿದ ಮೇಲೆ ಲಖನೌ, ಎದುರಾಳಿ ತಂಡವನ್ನು 160ರ ಒಳಗೆ ಕಟ್ಟಿಹಾಕಿತು.

ಸಂಕ್ಷಿಪ್ತ ಸ್ಕೋರು: ಸನ್ರೈಸರ್ಸ್ ಹೈದರಾಬಾದ್: 20 ಓವರುಗಳಲ್ಲಿ 9 ವಿಕೆಟ್ಗೆ 156 (ಹೆನ್ರಿಚ್ ಕ್ಲಾಸೆನ್ 62, ನಿತೀಶ್ ಕುಮಾರ್ ರೆಡ್ಡಿ 56; ಮೊಹಮ್ಮದ್ ಶಮಿ 9ಕ್ಕೆ2, ಪ್ರಿನ್ಸ್ ಯಾದವ್ 34ಕ್ಕೆ2, ಆವೇಶ್ ಖಾನ್ 36ಕ್ಕೆ2); ಲಖನೌ ಸೂಪರ್ ಕಿಂಗ್ಸ್: 19.5 ಓವರುಗಳಲ್ಲಿ 5 ವಿಕೆಟ್ಗೆ 160 (ಏಡನ್ ಮರ್ಕರಂ 45, ರಿಷಭ್ ಪಂತ್ ಔಟಾಗದೇ 68; ಹರ್ಷ ದುಬೆ 18ಕ್ಕೆ2); ಪಂದ್ಯದ ಆಟಗಾರ: ಮೊಹಮ್ಮದ್ ಶಮಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-220777825

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.