ನವದೆಹಲಿ (ಪಿಟಿಐ): ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರು ಡ್ರೆಸಿಂಗ್ ರೂಮ್ನಲ್ಲಿ ಧೂಮ ಪಾನ ಮಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಲ್ಲನಪುರದಲ್ಲಿ ಮಂಗಳವಾರ ಪಂಜಾಬ್ ಕಿಂಗ್ಸ್ ವಿರುದ್ಧ ಐಪಿಎಲ್ ಪಂದ್ಯದ ವೇಳೆ ಅವರು ಧಮ್ಮೆಳೆಯುತ್ತಿದ್ದ ದೃಶ್ಯ ಕಂಡುಬಂದಿದೆ.

ಭಾರತದಲ್ಲಿ ಇ–ಸಿಗರೇಟ್ ಉತ್ಪಾದನೆ, ಮಾರಾಟ, ವಿತರಣೆಯನ್ನು 2019ರಲ್ಲೇ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಇದರ ಸೇವನೆಯಲ್ಲಿ ತೊಡಗಿದವರು (ಮೊದಲ ಬಾರಿಯ ತಪ್ಪಿಗೆ) ಒಂದು ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು/ ಅಥವಾ ₹1 ಲಕ್ಷ ದಂಡ ತೆರಬೇಕಾಗುತ್ತದೆ.

ಐಪಿಎಲ್ನಲ್ಲಿ ಬ್ಯಾಟರ್ ಆಗಿ ಪರಾಗ್ ಈ ಬಾರಿ ಪರದಾಡಿದ್ದಾರೆ. ತಂಡ 223 ರನ್ ಯಶಸ್ವಿಯಾಗಿ ಬೆನ್ನಟ್ಟಿದ್ದ ವೇಳೆ ಅವರು 16 ಎಸೆತಗಳಲ್ಲಿ 29 ರನ್ ಬಾರಿಸಿದ್ದರು.

ತಂಡದ ಬ್ಯಾಟಿಂಗ್ ವೇಳೆ ಡ್ರೆಸಿಂಗ್ ರೂಮ್ನಲ್ಲಿದ್ದ ಪರಾಗ್ ಧಮ್ಮೆಳೆದು ಕೊಳ್ಳುತ್ತಿರುವುದು ನೇರ ಪ್ರಸಾರದ ದೃಶ್ಯಾವಳಿಯಲ್ಲಿದೆ.

ಸಾಮಾಜಿಕ ಜಾಲತಾಣ ಮತ್ತು ಟಿವಿ ಕ್ಯಾಮೆರಾಗಳ ಹದ್ದುಗಣ್ಣಿನ ಈ ಯುಗದಲ್ಲಿ ಪರಾಗ್ ಅವರ ಕೃತ್ಯ ನಿರ್ಲಕ್ಷ್ಯದಿಂದ ಕೂಡಿದೆ ಎಂದು ಐಪಿಎಲ್ ಮತ್ತು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

‘ಹಲವು ಆಟಗಾರರು ಇ–ಸಿಗರೇಟ್ ಸೇವನೆಯಲ್ಲಿ ತೊಡಗುತ್ತಾರೆ. ಆದರೆ ಡ್ರೆಸಿಂಗ್ ರೂಮ್ನಲ್ಲಿ ಧೂಮಪಾನ ಮಾಡುವುದಿಲ್ಲ. ಎಲ್ಲೆಡೆ ಕ್ಯಾಮೆರಾ ಕಣ್ಣುಗಳಿರುವಾಗ ಇಂಥ ಕೆಲಸಕ್ಕೆ ಯಾರೂ ಮುಂದಾಗುವುದಿಲ್ಲ. ಪರಾಗ್ ಸಿಕ್ಕಿಬಿದ್ದಿದ್ದಾರೆ. ಈಗ ಕ್ರಮ ಕೈಗೊಳ್ಳುವುದು ಬಿಸಿಸಿಐಗೆ ಅನಿವಾರ್ಯವಾಗಲಿದೆ’ ಎಂದು ಐಪಿಎಲ್ ಉನ್ನತ ಮೂಲವೊಂದು ತಿಳಿಸಿದೆ.

ಈ ಬಗ್ಗೆ ರಾಜಸ್ಥಾನ ರಾಯಲ್ಸ್ ರಾಯಲ್ಸ್ ತಂಡದ ಅಧಿಕಾರಿಗಳು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ರಾಯಲ್ಸ್ ತಂಡ ವಿವಾದಗಳಿಗೆ ಸಿಲುಕಿರುವುದು ಇದೇ ಮೊದಲಲ್ಲ. ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಶಿಷ್ಟಾಚಾರ ಉಲ್ಲಂಘಿಸಿ ಡಗ್ಔಟ್ನಲ್ಲಿ ಮೊಬೈಲ್ ನೋಡುತ್ತಿದ್ದ ಕಾರಣಕ್ಕಾಗಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.

ಖಾಸಗಿತನ–ಪ್ರಸ್ತಾಪ: ಈ ಬಾರಿಯ ಐಪಿಎಲ್ ಆರಂಭಕ್ಕೆ ಮೊದಲು ತಂಡದ ನಾಯಕರ ಸಭೆಯಲ್ಲಿ ಡ್ರೆಸಿಂಗ್ ರೂಮ್ನಲ್ಲಿ ಆಟಗಾರರ ಖಾಸಗಿತನದ ವಿಷಯ ಚರ್ಚೆಗೆ ಬಂದಿತ್ತು. ನೇರ ಪ್ರಸಾರದ ವೇಳೆ ಡ್ರೆಸಿಂಗ್ ರೂಮ್ ದೃಶ್ಯಗಳನ್ನು ಸೆರೆ ಹಿಡಿಯುವುದಕ್ಕೆ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಐಪಿಎಲ್ ಮೂಲವೊಂದು ಪಿಟಿಐಗೆ ತಿಳಿಸಿದೆ.

‘ಇದು ಡ್ರೆಸಿಂಗ್ ರೂಮ್ನಲ್ಲಿ ಇ–ಸಿಗರೇಟ್ ಸೇವನೆ ವಿಷಯಕ್ಕೆ ನಿರ್ದಿಷ್ಟ ವಾಗಿ ಸಂಬಂಧಿಸಿದ್ದಲ್ಲ. ಆಟಗಾರರ ಖಾಸಗಿತನ ಕಾಪಾಡುವ ಉದ್ದೇಶದಿಂದ ಆ ಚರ್ಚೆಯಾಗಿತ್ತು. ಆಟಗಾರರೂ ಪೂರ್ಣವಾಗಿ ಉಡುಪು ಧರಿಸಿರುವುದಿಲ್ಲ ಅಥವಾ ಕ್ಯಾಮೆರಾ ಎದುರಿಸಲು ಇಷ್ಟಪಡುವುದಿಲ್ಲ’ ಎಂದು ತಿಳಿಸಿದೆ.

ಜಾನ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಇ–ಸಿಗರೇಟ್ ಸೇವನೆ ಆರೋಗ್ಯಕ್ಕೆ ಅಪಾಯಕಾರಿ. ಇದರ ಅಪಾಯ ಸಾದಾ ಸಿಗರೇಟ್ ಸೇವನೆ ಪ್ರಮಾಣದಷ್ಟು ಇಲ್ಲದೇ ಇರಬಹುದು. ಆದರೆ ನಿಕೋಟಿನ್ ಅಂಶ ಎರಡರಲ್ಲೂ ಇರುತ್ತದೆ. ಇದರ ಸೇವನೆಯು ರಕ್ತದ ಒತ್ತಡ ಹೆಚ್ಚಿಸಬಹುದು. ಹೃದಯಬಡಿತವನ್ನೂ ಹೆಚ್ಚಿಸುತ್ತದೆ. ಹೃದಯಾಘಾತಕ್ಕೂ ದಾರಿಮಾಡಿಕೊಡುವ ಸಾಧ್ಯತೆಯಿದೆ ಎಂದು ಜಾನ್ ಹಾಪ್ಕಿನ್ಸ್ ಮೆಡಿಸಿನ್ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.