ಮುಲ್ಲನಪುರ: ಭಾರತ ಟಿ20 ತಂಡದಲ್ಲಿ ಅವಕೃಪೆಗೆ ಒಳಗಾದ ಬ್ಯಾಟರ್ಗಳಾದ ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಮಂಗಳವಾರ ಇಲ್ಲಿ ನಡೆಯುವ ಐಪಿಎಲ್ ಹಾಲಿ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. ಈ ಇಬ್ಬರು ಕ್ರಮವಾಗಿ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಮುನ್ನಡೆಸಲಿದ್ದಾರೆ.

ಭಾರತ ಟೆಸ್ಟ್ ಮತ್ತು ಏಕದಿನ ತಂಡಗಳ ಸಾರಥಿಯಾಗಿರುವ ಗಿಲ್ ಅವರು ಟಿ20 ಮಾದರಿಗೂ ಉಪನಾಯಕರಾಗಿದ್ದರು. ಆದರೆ, ಟಿ20 ವಿಶ್ವಕಪ್ನಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ಕಲ್ಪಿಸುವ ಸಲುವಾಗಿ ಅವರು ತಂಡದಿಂದ ಹೊರಗುಳಿದಿದ್ದರು. ಇದೀಗ ಚುಟುಕು ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಸವಾಲು ಗಿಲ್ ಮುಂದಿದೆ.

2023ರಿಂದ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಮಾತ್ರ ಗಿಲ್ ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ. ಆದರೆ, ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಟಿ20 ವೃತ್ತಿಜೀವನದಲ್ಲಿ 138ರ ಸ್ಟ್ರೇಕ್ ರೇಟ್ ಹೊಂದಿರುವ ಅವರು, ಕಳೆದ ಋತುವಿನಲ್ಲಿ ಚೇತರಿಕೆಯ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಮ್ಯಾಥ್ಯೂ ಹೇಡನ್ ಈ ಬಾರಿ ಟೈಟನ್ಸ್ನ ಬ್ಯಾಟಿಂಗ್ ಕೋಚ್ ಜವಾಬ್ದಾರಿ ಹೊತ್ತಿದ್ದು, ಗಿಲ್ ಆಕ್ರಮಣಕಾರಿಯಾಗುವರೇ ಎಂಬ ಕುತೂಹಲವಿದೆ.

2023ರಲ್ಲಿ ಟೈಟನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ನಿರ್ಗಮಿಸಿದ ಬಳಿಕ ನಾಯಕತ್ವ ಗಿಲ್ ಹೆಗಲೇರಿದೆ. 2022ರ ತನ್ನ ಚೊಚ್ಚಲ ಋತುವಿನಲ್ಲೇ ಚಾಂಪಿಯನ್ ಆಗಿದ್ದ ತಂಡವು ಮರುವರ್ಷ ರನ್ನರ್ ಅಪ್ ಆಗಿತ್ತು. ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡಗಳಲ್ಲಿ ಇದೂ ಒಂದಾಗಿದೆ.

ಕಳೆದ ಋತುವಿನಲ್ಲಿದ್ದ 20 ಆಟಗಾರರನ್ನು ತಂಡವು ಉಳಿಸಿಕೊಂಡಿದ್ದು, ಸ್ಥಿರ ಪ್ರದರ್ಶನದ ವಿಶ್ವಾಸದಲ್ಲಿದೆ. ಕಳೆದ ಆವೃತ್ತಿಯಲ್ಲಿ 759 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿದ್ದ ಸಾಯಿ ಸುದರ್ಶನ್ ಮತ್ತು ಗಿಲ್ ತಂಡದ ಆರಂಭದ ಶಕ್ತಿಯಾಗಿದ್ದಾರೆ.

ಹಾಲಿ ರನ್ನರ್ಸ್ ಅಪ್ ಪಂಜಾಬ್ ತಂಡವು ಮತ್ತೆ ಶ್ರೇಯಸ್ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಅವರು ಮೂರು ಬೇರೆ ಬೇರೆ ತಂಡಗಳನ್ನು ಫೈನಲ್ಗೆ ಮುನ್ನಡೆಸಿ ಯಶಸ್ವಿ ನಾಯಕ ಎನಿಸಿದ್ದಾರೆ.

ಶ್ರೇಯಸ್ ಅವರ ಸ್ಥಿರ ಪ್ರದರ್ಶನದ ಹೊರತಾಗಿಯೂ ಟಿ20 ವಿಶ್ವಕಪ್ಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕಡೆಗಣಿಸಿತ್ತು. 2023ರಲ್ಲಿ ಅವರು ಕೊನೆಯ ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಐಪಿಎಲ್ನಲ್ಲಿ ಅವರು 175ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 604 ರನ್ ಬಾರಿಸಿದ್ದರು.

ಪಂಜಾಬ್ ತಂಡದ ಬ್ಯಾಟಿಂಗ್ ವಿಭಾಗ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಆರಂಭಿಕ ಆಟಗಾರರಾದ ಪ್ರಭಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಅವರು ಕಳೆದ ಋತುವಿನಲ್ಲಿ ಯಶಸ್ವಿ ಜೋಡಿ ಎನಿಸಿದ್ದರು. ಅವರಿಬ್ಬರು 169 ಸ್ಟ್ರೈಕ್ ರೇಟ್ನಲ್ಲಿ ಒಟ್ಟು 1,024 ರನ್ ಗಳಿಸಿದ್ದರು. ನೇಹಲ್ ವಧೇರಾ, ಶಶಾಂಕ್ ಸಿಂಗ್ ಮತ್ತು ಸೂರ್ಯಾಂಶ್ ಶೆಡಗೆ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುವರು.

ಕಳೆದ ಋತುವಿನಲ್ಲಿ ಪಂಜಾಬ್ ತಂಡವು ಫೈನಲ್ ತಲುಪಿದ್ದರೂ ಮುಲ್ಲನಪುರದಲ್ಲಿ ನಡೆದ ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈ ಬಾರಿ ಸುಧಾರಿತ ಪ್ರದರ್ಶನದ ಛಲದಲ್ಲಿದೆ.

ಬಲಾಬಲ

ಒಟ್ಟು ಪಂದ್ಯ 6

ಪಂಜಾಬ್ ಗೆಲುವು 3

ಗುಜರಾತ್ ಜಯ 3

ಇಂದಿನ ಪಂದ್ಯ

ಗುಜರಾತ್ ಟೈಟನ್ಸ್– ಪಂಜಾಬ್ ಕಿಂಗ್ಸ್

ತಾಣ: ಮುಲ್ಲನಪುರ, ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೊ ಹಾಟ್ಸ್ಟಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.