ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಮಿನಿ ವಿಶ್ವಕಪ್ ಇದ್ದಂತೆ: ಗ್ಲೆನ್ ಮ್ಯಾಕ್ಸ್‌ವೆಲ್

Last Updated 22 ಜುಲೈ 2020, 13:27 IST
ಅಕ್ಷರ ಗಾತ್ರ

ಮೆಲ್ಬರ್ನ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯು ಮಿನಿ ವಿಶ್ವಕಪ್ ಟೂರ್ನಿ ಇದ್ದಂತೆ ಎಂದು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದರು.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಆದ್ದರಿಂದ ಆ ಅವಧಿಯಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಯೋಜಿಸಿದೆ. ಕೋವಿಡ್ –19 ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗಿರುವ ಯುನೈಟೆಡ್ ಅರಬ್‌ ಎಮಿರೆಟ್ಸ್‌ನಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಹೆಚ್ಚಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮ್ಯಾಕ್ಸ್‌ವೆಲ್, ’ಈ ಟೂರ್ನಿಯಲ್ಲಿ ಬೇರೆ ಬೇರೆ ದೇಶಗಳ ಆಟಗಾರರು ಮುಖಾಮುಖಿಯಾಗುತ್ತಾರೆ. ಆದ್ದರಿಂದ ಬಹುತೇಕ ಎಲ್ಲ ತಂಡಗಳ ಆಟಗಾರರು ಒಂದೇ ವೇದಿಕೆಯಲ್ಲಿರುವಂತೆ ಭಾಸವಾಗುತ್ತದೆ. ಆದ್ದರಿಂದ ಇದೇನೂ ವಿಶ್ವಕಪ್ ಟೂರ್ನಿಗಿಂತ ಕಡಿಮೆಯೇನಲ್ಲ‘ ಎಂದು ಅಭಿಪ್ರಾಯಪಟ್ಟಿದ್ದಾರೆ.

’ಐಪಿಎಲ್‌ನಲ್ಲಿ ವಿಶ್ವದ ಬೇರೆ ಬೇರೆ ತಂಡಗಳ ಖ್ಯಾತಮಾನ ಆಟಗಾರರು ಸ್ಪರ್ಧಿಸುತ್ತಾರೆ. ಐಪಿಎಲ್‌ ಎಲ್ಲಿ ನಡೆಯುತ್ತದೆ. ಆಟಗಾರರಿಗೆ ಕ್ವಾರಂಟೈನ್ ಅವಧಿ, ಪ್ರಯಾಣ ಸೌಲಭ್ಯ ಇತ್ಯಾದಿಗಳು ಮೊದಲು ಅಂತಿಮವಾಗಬೇಕು. ಎಲ್ಲವೂ ಸರಿಯಾಗಿ ನಡೆದರೆ ಟೂರ್ನಿಯಲ್ಲಿ ಆಡಲು ಹೋಗದಿರಲು ನನ್ನ ಬಳಿ ಯಾವುದೇ ಕಾರಣ ಇರುವುದಿಲ್ಲ. ನಾನು ಹೋಗುತ್ತೇನೆ‘ ಎಂದು ಫಾಕ್ಸ್‌ ಸ್ಪೋರ್ಟ್ಸ್‌ ವಾಹಿನಿ ಸಂವಾದದಲ್ಲಿ ತಿಳಿಸಿದ್ದಾರೆ.

’ಪ್ರತಿ ವರ್ಷ ಈ ಋತುವಿನಲ್ಲಿ ಮನೆಯಲ್ಲಿ ಕಾಲ ಕಳೆಯಲು ಸಮಯ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಅಂತಹ ಅವಕಾಶ ಸಿಕ್ಕಿತು. ಕುಟುಂಬದೊಂದಿಗೆ ಕಾಲ ಕಳೆದಿದ್ದು ಸಂತಸ ತಂದಿದೆ. ಅದರೆ ಇದೇ ಸಂದರ್ಭದಲ್ಲಿ ಕ್ರಿಕೆಟ್ ಟೂರ್ನಿ ಆರಂಭವಾದರೆ ಅದಕ್ಕೂ ಸಿದ್ಧವಾಗಿದ್ದೇನೆ. ಮಾನಸಿಕವಾಗಿ ಯಾವಾಗಲೂ ಸದೃಢವಾಗಿದ್ದೇನೆ‘ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

’ತವರಿನಲ್ಲಿ ಟಿ20 ವಿಶ್ವಕಪ್ ನಡೆಯುತ್ತದೆಯೆಂದು ಕಾತುರದಿಂದ ನಿರೀಕ್ಷೆ ಮಾಡಿದ್ದೆ. ಆದರೆ ಪರಿಸ್ಥಿತಿ ಹೀಗಿದೆ. ಮುಂದಿನ ಸರಣಿಗೆ ಸಿದ್ಧವಾಗುತ್ತೇನೆ‘ ಎಂದರು.

ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ಗೆ ತೆರಳಲಿದೆ. ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT