ಹೈದರಾಬಾದ್: ಪ್ರಫುಲ್ ಹಿಂಗೆ ಮತ್ತು ಸಾಕಿಬ್ ಹುಸೇನ್ ಎಂಬ ಯುವ ವೇಗದ ಬೌಲರ್ಗಳ ಅಮೋಘ ರಂಗಪ್ರವೇಶವು ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಅತ್ಯಗತ್ಯವಾಗಿದ್ದ ಸಮತೋಲನ ನೀಡಿದೆ. ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಹೆಚ್ಚಿನ ವಿಶ್ವಾಸದೊಡನೆ ಕಣಕ್ಕಿಳಿಯಲಿದೆ.

ಅನುಭವಿಗಳಾದ ಹರ್ಷಲ್ ಪಟೇಲ್ ಮತ್ತು ಜಯದೇವ ಉನದ್ಕತ್ ಅವರ ಬದಲು ಅವಕಾಶ ಪಡೆದ ಈ ಇಬ್ಬರು ಪದಾರ್ಪಣೆ ಪಂದ್ಯದಲ್ಲೇ ಪರಿಣಾಮಕಾರಿ ಎನಿಸಿದ್ದರು. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡ 9 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು; ಮಾತ್ರವಲ್ಲ 57 ರನ್ಗಳಿಂದ ಮೊದಲ ಸೋಲನ್ನೂ ಅನುಭವಿಸಿತು.

24 ವರ್ಷದ ವಿದರ್ಭ ವೇಗಿ ಹಿಂಗೆ ಮೊದಲ ಸ್ಪೆಲ್ನಲ್ಲೇ ರಾಯಲ್ಸ್ನ ಪ್ರಮುಖ ಆಟಗಾರರಾದ ವೈಭವ್ ಸೂರ್ಯವಂಶಿ, ಧ್ರುವ್ ಜುರೇಲ್, ಲುವಾನ್ ಡ್ರೆ ಪ್ರಿಟೋರಿಯಸ್ ಮತ್ತು ನಾಯಕ ರಿಯಾನ್ ಪರಾಗ್ ವಿಕೆಟ್ಗಳನ್ನು ಗಳಿಸಿದ್ದರು. ಲೆಂಗ್ತ್ಗಳಿಂದ ಬ್ಯಾಟರ್ಗಳನ್ನು ತಬ್ಬಿಬ್ಬುಗೊಳಿಸಿದ್ದರು.

ಈ ಹಿಂದೆ ಕೆಕೆಆರ್ನಿಂದ ಅವಗಣನೆಗೆ ಒಳಗಾಗಿದ್ದ ಬಿಹಾರದ 21 ವರ್ಷದ ಸಾಕಿಬ್ ಇನ್ನೊಂದು ಕಡೆ ಯಿಂದ ಸಮರ್ಥ ಬೆಂಬಲ ನೀಡಿದ್ದರು. ಜಾಣ್ಮೆಯ ವೇರಿಯೇಷನ್ಗಳಿಂದ ಗಮನ ಸೆಳೆದಿದ್ದರು.

ಅಭಿಷೇಕ್, ಟ್ರಾವಿಸ್ ಹೆಡ್, ಇಶಾನ್ ಕಿಶನ್, ಕ್ಲಾಸೆನ್ ಅಂಥ ಆಕ್ರಮಣಕಾರಿ ಬ್ಯಾಟರ್ಗಳಿದ್ದರೂ, ಬೌಲಿಂಗ್ ವಿಭಾಗ ಅಷ್ಟೇನೂ ಪ್ರಭಾವಶಾಲಿ ಎನಿಸಿರಲಿಲ್ಲ. ದಿಢೀರ್ ಯಶಸ್ಸಿನಿಂದ ಹಿಂಗೆ ಮತ್ತು ಹುಸೇನ್ ಈಗ ಸೂಪರ್ ಕಿಂಗ್ಸ್ ವಿರುದ್ಧವೂ ಉತ್ತಮ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕವಾಡ್ ಸತತವಾಗಿ ವಿಫಲರಾಗಿದ್ದಾರೆ. ಐದು ಇನಿಂಗ್ಸ್ಗಳಲ್ಲಿ ಅವರ ಗರಿಷ್ಠ ಗಳಿಕೆ 28. ಆದರೆ ಸಂಜು ಸ್ಯಾಮ್ಸನ್ ಲಯಕ್ಕೆ ಮರಳಿರು ವುದು ತಂಡಕ್ಕೆ ನೆಮ್ಮದಿ ಮೂಡಿಸಿದೆ. ಒಂದರಲ್ಲಿ ಅಜೇಯ ಶತಕ ಬಾರಿಸಿದ್ದ ಅವರು ಕೋಲ್ಕತ್ತ ವಿರುದ್ಧ ಕೊನೆಯ ಪಂದ್ಯದಲ್ಲಿ 48 ರನ್ ಗಳಿಸಿದ್ದರು. ಗಾಯಕವಾಡ್ ಬದಲು ಆಯುಷ್ ಮ್ಹಾತ್ರೆ ಅವರಿಗೆ ಬಡ್ತಿ ನೀಡುವ ಬಗ್ಗೆ ಸಿಎಸ್ಕೆ ಪರಿಶೀಲಿಸುತ್ತಿದೆ.

ಎಡಗೈ ವೇಗಿ ಖಲೀಲ್ ಅಹ್ಮದ್ ಅವರು ಗಾಯಾಳಾಗಿ ಹೊರಬಿದ್ದಿರುವುದು ತಂಡಕ್ಕೆ ತಲೆನೋವಾಗಿದೆ.

ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಸೋತಿದ್ದ ಸನ್ರೈಸರ್ಸ್ ನಂತರ ಗೆಲುವಿನ ಹಳಿಗೆ ಮರಳಿದೆ. ಸೂಪರ್ ಕಿಂಗ್ಸ್ ಸಹ ಕೊನೆಯ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಈಗ ತವರಿನಿಂದ ಹೊರಗೆ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.