ಹೈದರಾಬಾದ್ (ಪಿಟಿಐ): ಬೀಸಾಟ ಆಡುವ ಬ್ಯಾಟರ್ಗಳ ದಂಡನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು, ಗೆಲುವಿನ ಹಳಿಗೆ ಈಗಷ್ಟೇ ಮರಳುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಎದುರಿಸಲಿದೆ.

ಸತತ ಐದು ಪಂದ್ಯಗಳ ಗೆಲುವಿನ ಓಟವನ್ನು ಮುಂದುವರಿಸುವ ಹುಮ್ಮಸ್ಸಿನಲ್ಲಿರುವ ಸನ್ರೈಸರ್ಸ್ ತಂಡ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಪಂದ್ಯ ಗೆಲ್ಲುವ ನೆಚ್ಚಿನ ತಂಡವೂ ಆಗಿದೆ. ಪ್ಯಾಟ್ ಕಮಿನ್ಸ್ ಪಡೆ 9 ಪಂದ್ಯಗಳಲ್ಲಿ ಆರು ಗೆದ್ದು, ಮೂರು ಸೋತಿದೆ.

ಈ ಋತುವಿನಲ್ಲಿ ತಿಣುಕಾಡಿರುವ ಅಜಿಂಕ್ಯ ರಹಾನೆ ನೇತೃತ್ವದ ನೈಟ್ರೈಡರ್ಸ್ ತಂಡ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಪುನರುತ್ಥಾನದ ವಿಶ್ವಾಸದಲ್ಲಿದೆ. ಕೋಲ್ಕತ್ತದ ತಂಡ, ಎಂಟನೇ ಸ್ಥಾನದಲ್ಲಿದೆ.

ಸನ್ರೈಸರ್ಸ್ ತಂಡದ ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಉತ್ತಮ ಲಯದಲ್ಲಿದ್ದಾರೆ. ಅಭಿಷೇಕ್ ಗರಿಷ್ಠ ರನ್ಗಳಿಕೆದಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಶಾನ್ ಕಿಶನ್ ಕೂಡ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.

ನಿತೀಶ್ ಕುಮಾರ್ ರೆಡ್ಡಿ ಮತ್ತು ಸಲೀಲ್ ಅರೋರಾ ಅವರೂ ಕೆಲವು ಪಂದ್ಯಗಳಲ್ಲಿ ಉಪಯುಕ್ತ ಆಟವಾಡಿ ದ್ದಾರೆ. ಈ ಬ್ಯಾಟಿಂಗ್ ಬಲಾಢ್ಯ ತಂಡವನ್ನು ನಿಯಂತ್ರಿಸಬೇಕಾದರೆ, ಕೋಲ್ಕತ್ತದ ಬೌಲರ್ಗಳು ತಮ್ಮ ಮಟ್ಟವನ್ನು ಬಹಳಷ್ಟು ಎತ್ತರಿಸಬೇಕಾಗಿದೆ.

ಕಮಿನ್ಸ್ ಆಗಮನದಿಂದ ಎಸ್ಆರ್ಎಚ್ ಬೌಲಿಂಗ್ ಬಲಗೊಂಡಿದೆ. ಇಶಾನ್ ಮಾಲಿಂಗ, ನಿತೀಶ್ ರೆಡ್ಡಿ, ಪ್ರಫುಲ್ ಹಿಂಗೆ, ಸಾಕಿಬ್ ಅವರ ವೇಗದ ಬಲ ತಂಡಕ್ಕಿದೆ.

ಕೋಲ್ಕತ್ತ ತಂಡದ ನಾಯಕ ರಹಾನೆ ಇನ್ನೂ ಸ್ಫೂರ್ತಿಯುತ ಇನಿಂಗ್ಸ್ ಆಡಿಲ್ಲ. ಅವರ ಕೆಲವು ನಿರ್ಧಾರಗಳೂ ತರ್ಕಕ್ಕೆ ನಿಲುಕುವಂತಿರಲಿಲ್ಲ. ಮುಂಬೈ ವಿರುದ್ಧ 40 ಎಸೆತಗಳಲ್ಲಿ 67 ರನ್ ಮತ್ತು ಲಖನೌ ವಿರುದ್ಧ 24 ಎಸೆತಗಳಲ್ಲಿ 41 ರನ್ ಗಳಿಸಿದ್ದು ಬಿಟ್ಟರೆ ಅವರ ಆಟ ಪೇಲವ ಎನಿಸಿದೆ.

ತಂಡ ರಚಿನ್ ರವೀಂದ್ರ ಅವರಿಗೆ ಕೊನೆಗೂ ಅವಕಾಶ ನೀಡುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ನ್ಯೂಜಿಲೆಂಡ್ ಜೋಡಿಯಾದ ಫಿನ್ ಅಲೆನ್ ಮತ್ತು ಟಿಮ್ ಸೀಫರ್ಟ್ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಅಂಗ್ಕ್ರಿಷ್ ರಘುವಂಶಿ, ಕ್ಯಾಮೆರಾನ್ ಗ್ರೀನ್, ರೋವ್ಮನ್ ಪಾವೆಲ್ ಸಹ ಮಿಂಚು ಹರಿಸಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1334816607

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.