ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಲೀಗ್ನ 18ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವು ಸಾಧಿಸಿದೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಟ್ರಿಸ್ಟನ್ ಸ್ಟಬ್ ಅವರು ಬ್ಯಾಟಿಂಗ್ ವೇಳೆ ಕೈಗವಸು ಬದಲಿಸಲು ಕೇಳಿದಾಗ ಅಂಪೈರ್ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸಿಎಸ್ಕೆ ನೀಡಿದ 213 ರನ್ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯಿತು. ಟ್ರಿಸ್ಟನ್ ಸ್ಟಬ್ ಅವರು ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ ಡೆಲ್ಲಿ ಗೆಲುವಿನತ್ತ ಸಮೀಪಿಸುತ್ತಿತ್ತು. ಇದೇ ವೇಳೆ ಕೊನೆಯ ಗೆಲುವಿಗೆ 10 ಎಸೆತಗಳಿಗೆ 29 ರನ್ಗಳ ಅಗತ್ಯವಿತ್ತು. ಆಗ ಸ್ಟಬ್ ಅವರು ಕೈ ಗ್ಲೌಸ್ ಅನ್ನು ಬದಲಾಯಿಸಲು ಅಂಪೈರ್ ಬಳಿ ಕೇಳಿದಾಗ ಇವರ ವಿನಂತಿಯನ್ನು ನಿರಾಕರಿಸಿದ್ದಾರೆ.

ಬಳಿಕ ಮುಂದಿನ ಎಸೆತದಲ್ಲಿ ಸ್ಟಬ್ ಔಟ್ ಆದರು. ಆದರೆ ಪೆವಿಲಿಯನ್ನಲ್ಲಿದ್ದ ನಿತೀಶ್ ರಾಣಾ ಹಾಗೂ ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ಅವರು ಈ ವಿಷಯವಾಗಿ ಅಂಪೈರ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೀಗ ಅಂಪೈರ್ ಅವರ ಈ ನಿರ್ಣಯ ಸೋಲಿಗೆ ಕಾರಣವಾಯಿತಾ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ.

ಸ್ಟಬ್ ಅವರು 38 ಎಸೆತಗಳಲ್ಲಿ 4 ಬೌಡರಿ 3 ಸಿಕ್ಸರ್ ಸಹಿತ 60 ರನ್ಗಳನ್ನು ಸಿಡಿಸಿದರು. ಮುಂದಿನ ಎಸೆತದಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 189 ರನ್ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲುವ ಮೂಲಕ ಆವೃತಿಯ ಮೊದಲ ಜಯ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.