ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ 19ನೇ ಆವೃತ್ತಿಯ ಟಿವಿ ವೀಕ್ಷಕರ ಸಂಖ್ಯೆಯು 50 ಕೋಟಿ ದಾಟಿದ್ದು, ಡಿಜಿಟಲ್ ವೀಕ್ಷಕರ ಸಂಖ್ಯೆಯು ಶೇ.7ರಷ್ಟು ಹೆಚ್ಚಾಗಿದೆ. ಐಪಿಎಲ್ನ ಒಟ್ಟಾರೆ ಡಿಜಿಟಲ್ ವ್ಯಾಪ್ತಿಯು ಶೇ 15ರಷ್ಟು ಹೆಚ್ಚಾಗಿದೆ ಎಂದು ಅಧಿಕೃತ ಪ್ರಸಾರಕರಾದ ಜಿಯೋಸ್ಟಾರ್ ಹೇಳಿದೆ.

51 ಪಂದ್ಯಗಳ ಟಿವಿ ಮತ್ತು 57 ಪಂದ್ಯಗಳ ಡಿಜಿಟಲ್ ಮಾಹಿತಿಯನ್ನು ಆಧರಿಸಿ ಈ ವರದಿ ನೀಡಲಾಗಿದೆ.

ಟಿವಿ ಪ್ರಸಾರದಲ್ಲಿ ಶೇ. 25 ರಷ್ಟು ಬೆಳವಣಿಗೆ ಕಂಡಿದ್ದು, ವೀಕ್ಷಣೆ ಸಮಯ ಶೇ. 20 ರಷ್ಟು ಹೆಚ್ಚಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿನ ವೀಕ್ಷಣೆಯ ಸಮಯವು ಶೇ 42ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ.

ಟೂರ್ನಿಯಲ್ಲಿ ಫ್ಲೇ–ಆಫ್ ರೇಸ್ ಆರಂಭವಾಗಿದ್ದು, ತಂಡಗಳ ನಡುವಿನ ಸ್ಪರ್ಧಾತ್ಮಕ ತೀವ್ರತೆಯು ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ಇದು ವೀಕ್ಷಕರ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಜಿಯೋಸ್ಟಾರ್ ಕ್ರೀಡಾ ವಿಭಾಗದ ಮಾರಾಟ ಮುಖ್ಯಸ್ಥ ಅನುಪ್ ಗೋವಿಂದನ್ ಹೇಳಿದ್ದಾರೆ.

ಮೇ 31ರಂದು ಐಪಿಎಲ್ ಫೈನಲ್ ಪಂದ್ಯ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.