ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಎಸ್ಆರ್ಎಚ್ ವಿರುದ್ಧ 6 ವಿಕೆಟ್ಗಳ ಸುಲಭ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಎಚ್ ತಂಡವು 201 ರನ್ ಗಳಿಸಿತ್ತು.

202 ರನ್ ಗುರಿ ಬೆನ್ನತ್ತಿದ ಆರ್ಸಿಬಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಆಸರೆಯಾದರು. ಅಜೇಯ 69ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ವೇಳೆ ವೈಯಕ್ತಿಕವಾಗಿ ಹಲವು ದಾಖಲೆಯನ್ನು ಮಾಡಿದ್ದಾರೆ.

ಚೇಸಿಂಗ್ನಲ್ಲಿ 4 ಸಾವಿರ ರನ್: ಚೇಸ್ ಮಾಸ್ಟರ್ ಎಂದೇ ಕ್ರಿಕೆಟ್ ಅಂಗಳದಲ್ಲಿ ಗುರುತಿಸಿಕೊಂಡಿರುವ ವಿರಾಟ್, ಐಪಿಎಲ್ ಇತಿಹಾಸದಲ್ಲೇ ಚೇಸಿಂಗ್ ವೇಳೆ 4 ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾದರು. ಚೇಸಿಂಗ್ ವೇಳೆ ಒಟ್ಟು 4027 ರನ್ ಬಾರಿಸಿದ್ದಾರೆ.

ಎಸ್ಆರ್ಎಚ್ ವಿರುದ್ಧ ಅತಿಹೆಚ್ಚು ರನ್: ಐಪಿಎಲ್ ಟೂರ್ನಿಯಲ್ಲಿ ಎಸ್ಆರ್ಎಚ್ ತಂಡದ ವಿರುದ್ಧ ವಿರಾಟ್ ಕೊಹ್ಲಿ, 874 ರನ್ ಬಾರಿಸುವ ಮೂಲಕ ಸಂಜು ಸ್ಯಾಮ್ಸನ್ ಅವರ ದಾಖಲೆಯನ್ನು ಮುರಿದರು.

ಆರಂಭಿಕನಾಗಿ ಅತಿಹೆಚ್ಚು ಸಿಕ್ಸ್: ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಒಟ್ಟು 182 ಸಿಕ್ಸರ್ ಸಿಡಿಸಿದ್ದು, ಭಾರತದ ಆರಂಭಿಕ ಆಟಗಾರನೊಬ್ಬ ಟೂರ್ನಿಯಲ್ಲಿ ಸಿಡಿಸಿದ ಅತಿಹೆಚ್ಚು ಸಿಕ್ಸರ್ ಇದಾಗಿದೆ. ಈ ಮೂಲಕ ಕೆ.ಎಲ್.ರಾಹುಲ್ ಅವರ ದಾಖಲೆಯನ್ನು ಮುರಿದರು.

ಐಪಿಎಲ್ನಲ್ಲಿ 64ನೇ ಅರ್ಧಶತಕ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಒಟ್ಟು 64 ಅರ್ಧಶತಕಗಳನ್ನು ಗಳಿಸಿದ್ದಾರೆ. ಎಂಟು ಶತಕಗಳು ಅವರ ಹೆಸರಿನಲ್ಲಿದೆ. ಎರಡನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 62 ಅರ್ಧಶತಕಗಳನ್ನು ಗಳಿಸಿದ್ದರು.

ಚೇಸಿಂಗ್ನಲ್ಲಿ ಗೆದ್ದ ಪಂದ್ಯಗಳಲ್ಲಿ ಅತಿಹೆಚ್ಚು ಅರ್ಧಶತಕ: ವಿರಾಟ್ ಕೊಹ್ಲಿ, ಐಪಿಎಲ್ ಪಂದ್ಯದ ಚೇಸಿಂಗ್ ವೇಳೆ ಅರ್ಧಶತಕ ಸಿಡಿಸಿದ 21 ಬಾರಿ ತಂಡವು ಗೆಲುವು ಸಾಧಿಸಿದೆ.

* 150ರ ಸ್ಟ್ರೈಕ್ರೇಟ್ನಲ್ಲಿ 31 ಅರ್ಧಶತಕಗಳನ್ನು ಸಿಡಿಸುವ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು.

* ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ 50ಕ್ಕೂ ಅಧಿಕ ರನ್ಗಳಿಸಿದ 24 ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಈ ಮೂಲಕ ಎಬಿಡಿ ಮತ್ತು ಧವನ್ ದಾಖಲೆಯನ್ನು ಮುರಿದರು.

* ಐಪಿಎಲ್ನಲ್ಲಿ ವಿರಾಟ್ ಬ್ಯಾಟ್ನಿಂದ 50ಕ್ಕೂ ಅಧಿಕ ರನ್ ಬಂದ 42 ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ದಾಖಲಿಸಿದೆ.

* ಐಪಿಎಲ್ನಲ್ಲಿ 67 ಬಾರಿ ಇನ್ನಿಂಗ್ಸ್ ಒಂದರಲ್ಲಿ ತಂಡದ ಇತರೆ ಎಲ್ಲಾ ಆಟಗಾರರಿಗಿಂತ ಅತಿ ಹೆಚ್ಚು ಬಾರಿ ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. 66 ಬಾರಿ ಈ ಸಾಧನೆ ಮಾಡಿದ್ದ ವಾರ್ನರ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.