ಮುಂಬೈ: ಮುಂದಿನ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವತ್ತ ಚಿತ್ತ ನೆಟ್ಟಿರುವ ಈ ಕಾಲಘಟ್ಟದ ಇಬ್ಬರು ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದಾರೆ.

ಈ ಪಂದ್ಯವು ಉಭಯ ತಂಡಗಳಿಗೆ ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳಲು ವೇದಿಕೆಯಾಗಲಿದೆ. ಆದ್ದರಿಂದ ರೋಚಕ ಹಣಾಹಣಿಯ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳಲ್ಲಿ ಗರಿಗೆದರಿದೆ. ಅದರಲ್ಲೂ ವಿರಾಟ್ ಮತ್ತು ರೋಹಿತ್ ಅವರನ್ನು ಎದುರು ಬದುರು ನೋಡುವ ಅವಕಾಶವೂ ಸಿಗಲಿದೆ. ವಿರಾಟ್ 2008ರಿಂದಲೂ ಆರ್ಸಿಬಿಯನ್ನು ಪ್ರತಿನಿಧಿಸುತ್ತಿದ್ದಾರೆ. ಹೋದ ವರ್ಷ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಮುಂಬೈ ತಂಡವು ಐದು ಸಲ ಐಪಿಎಲ್ ಟ್ರೋಫಿ ಜಯಿಸಿದ್ದಾಗ ರೋಹಿತ್ ಅವರು ನಾಯಕರಾಗಿದ್ದರು. ಈ ಟೂರ್ನಿಯಲ್ಲಿ ವಿರಾಟ್–ರೋಹಿತ್ ಇಬ್ಬರೂ ಅಮೋಘ ಲಯದಲ್ಲಿದ್ದಾರೆ.

ಶುಕ್ರವಾರ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15ರ ಪೋರ ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್ ಮುಂದೆ ಆರ್ಸಿಬಿ ತಂಡವು ತಲೆಬಾಗಿತ್ತು. ಜೋಷ್ ಹೇಜಲ್ವುಡ್, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ ಅಂತಹ ಅನುಭವಿ ಬೌಲರ್ಗಳ ಎದುರು ವೈಭವ್ ಆರ್ಭಟಿಸಿದ್ದರು. ಅಲ್ಲದೇ ಧ್ರುವ ಜುರೇಲ್ ಕೂಡ ಅಮೋಘ ಆಟವಾಡಿ ರಾಜಸ್ಥಾನ ತಂಡವು ಸತತ 4ನೇ ಪಂದ್ಯ ಜಯಿಸಲು ಕಾರಣರಾಗಿದ್ದರು.

ಆರ್ಸಿಬಿ ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಆಘಾತ ಅನುಭವಿಸಿತು. ರಾಯಲ್ಸ್ ಎದುರು ಕೂಡ ಆರ್ಸಿಬಿ ತಂಡವು 200ಕ್ಕಿಂತ ಹೆಚ್ಚು ರನ್ ಗಳಿಸಿತ್ತು. ನಾಯಕ ರಜತ್ ಪಾಟೀದಾರ್ ಅರ್ಧಶತಕ ಹೊಡೆದರು. ಆದರೆ ಫಿಲ್ ಸಾಲ್ಟ್ ಈ ಪಂದ್ಯದಲ್ಲಿಯೂ ಲಯಕ್ಕೆ ಮರಳಲಿಲ್ಲ. ವಿರಾಟ್, ರೊಮೆರಿಯೊ ಶೆಫರ್ಡ್ ಹಾಗೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವೆಂಕಟೇಶ್ ಅಯ್ಯರ್ ಅವರು ಉಪಯುಕ್ತ ಕಾಣಿಕೆ ನೀಡಿದ್ದರು.

ಇನ್ನೊಂದೆಡೆ ಮುಂಬೈ ತಂಡವು 13 ವರ್ಷಗಳ ನಂತರ ಐಪಿಎಲ್ ಟೂರ್ನಿಯಲ್ಲಿ ತನ್ನ ಆರಂಭಿಕ ಪಂದ್ಯವನ್ನು ಗೆದ್ದಿತ್ತು. ಆ ಪಂದ್ಯದಲ್ಲಿ ರೋಹಿತ್ ಚುರುಕಿನ ಅರ್ಧಶತಕ ಗಳಿಸಿದ್ದರು. ರಿಯಾನ್ ರಿಕೆಲ್ಟನ್ ಕೂಡ ಮಿಂಚಿದ್ದರು. ಆದರೆ ನಂತರದ ಎರಡೂ ಪಂದ್ಯಗಳಲ್ಲಿ ತಂಡವು ಸೋತಿತ್ತು. ರೋಹಿತ್ ಮತ್ತು ರಿಕೆಲ್ಟನ್ ಅವರು ಈ ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭ ನೀಡಿರಲಿಲ್ಲ. ಆ ಪಂದ್ಯಗಳು ಕ್ರಮವಾಗಿ ದೆಹಲಿ ಮತ್ತು ಗುವಾಹಟಿ ಯಲ್ಲಿ ನಡೆದಿದ್ದವು.

ಇದೀಗ ಮತ್ತೆ ಮುಂಬೈ ತನ್ನ ತವರಿಗೆ ಮರಳಿದೆ. ಅದರಿಂದಾಗಿ ಹಾರ್ದಿಕ್ ಬಳಗದ ಆತ್ಮವಿಶ್ವಾಸವೂ ಮರುಕಳಿಸಿದೆ. ವಿರಾಟ್, ಸಾಲ್ಟ್, ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ಜಿತೇಶ್ ಶರ್ಮಾ, ವೆಂಕಟೇಶ್ ಅಯ್ಯರ್ ಹಾಗೂ ರಜತ್ ಅವರು ಇರುವ ಆರ್ಸಿಬಿಯ ಬಲಿಷ್ಠ ಬ್ಯಾಟಿಂಗ್ ಪಡೆಯು ಮುಂಬೈನ ಬೌಲಿಂಗ್ ಸವಾಲು ಎದುರಿಸಬೇಕಿದೆ.

ವೇಗಿ ಜಸ್ಪ್ರೀತ್ ಬೂಮ್ರಾ ಅವರು ಟೂರ್ನಿಯಲ್ಲಿ ವಿಕೆಟ್ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ. ಶಾರ್ದೂಲ್ ಠಾಕೂರ್, ಟ್ರೆಂಟ್ ಬೌಲ್ಟ್, ಅಲ್ಲಾಹ ಘಜನಫರ್ ಅವರು ಪರಿಣಾಮಕಾರಿ ದಾಳಿ ಮಾಡುವ ಸಮರ್ಥರು.

ಮುಂಬೈ ಬ್ಯಾಟಿಂಗ್ ಬಲ ಕೂಡ ಹೆಚ್ಚು ಆಳವಾಗಿದೆ. ರಿಕೆಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶೆರ್ಫೇನ್ ರುದರ್ಫೋರ್ಡ್ ಮತ್ತು ಉಳಿದ ಆಲ್ರೌಂಡರ್ಗಳು ತಮ್ಮ ಲಯಕ್ಕೆ ತಕ್ಕಂತೆ ಆಡಿದರೆ, ಆರ್ಸಿಬಿ ತಂಡಕ್ಕೆ ಹಾದಿ ಕಠಿಣವಾಗಬಹುದು. ಮುಂಬೈ ಕೂಡ ಅಷ್ಟೇ. ಹಾರ್ದಿಕ್ ನಾಯಕತ್ವದಲ್ಲಿ ತೋರುವ ಜಾಣ್ಮೆಯು ಫಲಿತಾಂಶದ ಮೇಲೆ ಪ್ರಮುಖ ಪಾತ್ರವಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.