ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಸರಣಿ ‘ಕ್ಲೀನ್‌ ಸ್ವೀಪ್‌’ ಮಾಡಿದ ಐರ್ಲೆಂಡ್‌

Last Updated 8 ಜುಲೈ 2019, 19:36 IST
ಅಕ್ಷರ ಗಾತ್ರ

ಬೆಲ್‌ಫಾಸ್ಟ್‌: ಟಿಮ್‌ ಮುರ್ಟಾಗ್‌ (39ಕ್ಕೆ3) ಪರಿಣಾಮಕಾರಿ ಬೌಲಿಂಗ್‌ ಮತ್ತು ಜೇಮ್ಸ್‌ ಮೆಕ್ಲಮ್‌ (54; 69ಎ, 6ಬೌಂ, 1ಸಿ) ಅರ್ಧಶತಕದ ಬಲದಿಂದ ಐರ್ಲೆಂಡ್‌ ತಂಡ ಜಿಂಬಾಬ್ವೆ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧಿಸಿದೆ.

ಸಿವಿಲ್‌ ಸರ್ವಿಸ್‌ ಕ್ಲಬ್‌ನ ಮೈದಾನದಲ್ಲಿ ಭಾನುವಾರ ರಾತ್ರಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 46.5 ಓವರ್‌ಗಳಲ್ಲಿ 190ರನ್‌ಗಳಿಗೆ ಆಲೌಟ್‌ ಆಯಿತು. ಈ ತಂಡದ ಸೀನ್‌ ವಿಲಿಯಮ್ಸ್‌ (67; 103ಎ, 6ಬೌಂ) ಅರ್ಧಶತಕ ಸಿಡಿಸಿ ಆಸರೆಯಾದರು.

191ರನ್‌ಗಳ ಗುರಿಯನ್ನು ವಿಲಿಯಂ ಪೋರ್ಟರ್‌ಫೀಲ್ಡ್‌ ನೇತೃತ್ವದ ಐರ್ಲೆಂಡ್‌ 41.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: 46.5 ಓವರ್‌ಗಳಲ್ಲಿ 190 (ಹ್ಯಾಮಿಲ್ಟನ್‌ ಮಸಕಜಾ 23, ಸೀನ್‌ ವಿಲಿಯಮ್ಸ್‌ 67, ಸೊಲೊಮನ್‌ ಮಿರೆ 14, ರಿಚ್ಮಂಡ್‌ ಮುತುಂಬಮಿ 28, ಕೈಲ್‌ ಜಾರ್ವಿಸ್‌ 28; ಟಿಮ್‌ ಮುರ್ಟಾಗ್‌ 39ಕ್ಕೆ3, ಮಾರ್ಕ್‌ ಅಡೇರ್‌ 53ಕ್ಕೆ2, ಬೊಯ್ಡ್‌ ರ‍್ಯಾಂಕಿನ್‌ 39ಕ್ಕೆ2, ಶೇನ್‌ ಗೆಟ್ಕೇಟ್‌ 30ಕ್ಕೆ2).

ಐರ್ಲೆಂಡ್‌: 41.2 ಓವರ್‌ಗಳಲ್ಲಿ 4 ವಿಕೆಟ್‌ಗೆ 191 (ಪಾಲ್‌ ಸ್ಟರ್ಲಿಂಗ್‌ 32, ಜೇಮ್ಸ್‌ ಮೆಕ್ಲಮ್‌ 54, ವಿಲಿಯಂ ಪೋರ್ಟರ್‌ಫೀಲ್ಡ್‌ 49, ಕೆವಿನ್‌ ಓಬ್ರಿಯನ್‌ ಔಟಾಗದೆ 35; ತೆಂದೈ ಚಟಾರ 32ಕ್ಕೆ1, ಸೀನ್‌ ವಿಲಿಯಮ್ಸ್‌ 14ಕ್ಕೆ1, ಸೊಲೊಮನ್‌ ಮಿರ್‌ 22ಕ್ಕೆ1, ರ‍್ಯಾನ್‌ ಬುರಿ 21ಕ್ಕೆ1).

ಫಲಿತಾಂಶ: ಐರ್ಲೆಂಡ್‌ಗೆ 6 ವಿಕೆಟ್‌ ಗೆಲುವು. 3–0ರಲ್ಲಿ ಸರಣಿ ಕೈವಶ. ಸರಣಿ ಶ್ರೇಷ್ಠ: ಟಿಮ್‌ ಮುರ್ಟಾಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT