ಸೋಮವಾರ, ನವೆಂಬರ್ 30, 2020
20 °C

ಲಂಕಾ ಪ್ರೀಮಿಯರ್‌ ಲೀಗ್‌: ಕ್ಯಾಂಡಿ ಟಸ್ಕರ್ಸ್ ತಂಡದಲ್ಲಿ ಇರ್ಫಾನ್‌ ಪಠಾಣ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಭಾರತ ತಂಡದ ಮಾಜಿ ವೇಗದ ಬೌಲರ್ ಇರ್ಫಾನ್‌ ಅವರು ಲಂಕಾ ಪ್ರೀಮಿಯರ್‌ ಲೀಗ್‌(ಎಲ್‌ಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಕ್ಯಾಂಡಿ ಟಸ್ಕರ್ಸ್‌ ತಂಡದ ಪರ ಆಡಲಿದ್ದಾರೆ. ಭಾನುವಾರ ಅವರು ಈ ವಿಷಯ ತಿಳಿಸಿದರು.

ಕ್ಯಾಂಡಿ ಮೂಲದ ಈ ತಂಡದಲ್ಲಿ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌, ಸ್ಥಳೀಯ ಪ್ರತಿಭೆ ಕುಶಾಲ್‌ ಪೆರೆರಾ, ಕುಶಾಲ್‌ ಮೆಂಡಿಸ್‌, ನುವಾನ್‌ ಪ್ರದೀಪ್‌ ಹಾಗೂ ಇಂಗ್ಲೆಂಡ್‌ನ ವೇಗಿ ಲಿಯಾಮ್‌ ಫ್ಲಂಕೆಟ್‌ ಇದ್ದಾರೆ.

ಶ್ರೀಲಂಕಾ ತಂಡದ ಮಾಜಿ ನಾಯಕ ಹಶನ್‌ ತಿಲಕರತ್ನೆ ಅವರು ಕ್ಯಾಂಡಿ ಟಸ್ಕರ್ಸ್‌ನ ಕೋಚಿಂಗ್ ತಂಡದ ಭಾಗವಾಗಿದ್ದಾರೆ.

36 ವರ್ಷದ ಇರ್ಫಾನ್‌, ಈ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ವಿದಾಯ ಹೇಳಿದ್ದರು. 29 ಟೆಸ್ಟ್‌, 120 ಏಕದಿನ ಹಾಗೂ 24 ಟ್ವೆಂಟಿ–20 ಪಂದ್ಯಗಳಲ್ಲಿ ಅವರು ಆಡಿದ್ದಾರೆ.

‘ಕ್ಯಾಂಡಿ ಟಸ್ಕರ್ಸ್ ತಂಡದ ಭಾಗವಾಗುತ್ತಿರುವುದಕ್ಕೆ ಸಂತಸ ಎನಿಸುತ್ತಿದೆ. ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ‘ ಎಂದು ಇರ್ಫಾನ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು