ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಎಸ್ಆರ್ಎಚ್ ತಂಡವನ್ನು ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಅವರು ಮುನ್ನಡೆಸುತ್ತಿದ್ದಾರೆ.

ಇಶಾನ್ ಕಿಶನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದೇ ಮೊದಲ ಬಾರಿಗೆ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಐಪಿಎಲ್ನಲ್ಲಿ 118 ಪಂದ್ಯಗಳನ್ನು ಆಡಿದ್ದರು. ಆ ಮೂಲಕ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಬಳಿಕ ನಾಯಕರಾಗಿ ಮುನ್ನಡೆಸುತ್ತಿರುವ ಆಟಗಾರರ ಸಾಲಿಗೆ ಸೇರಿದ್ದಾರೆ.

ಐಪಿಎಲ್ನಲ್ಲಿ ಅತ್ಯಧಿಕ ಪಂದ್ಯಗಳನ್ನು ಆಡಿದ ಬಳಿಕ ನಾಯಕರಾಗಿರುವ ದಾಖಲೆಯು ರವೀಂದ್ರ ಜಡೇಜ ಅವರ ಹೆಸರಿನಲ್ಲಿದೆ. ಅವರ ಜೊತೆ ಕನ್ನಡಿಗ ಮನೀಶ್ ಪಾಂಡೆ ಎರಡನೇ ಸ್ಥಾನದಲ್ಲಿದ್ದಾರೆ.

ಅತ್ಯಧಿಕ ಪಂದ್ಯಗಳ ಬಳಿಕ ನಾಯಕರಾದ ಇತರೆ ಆಟಗಾರರು

ರವೀಂದ್ರ ಜಡೇಜ– 200 ಪಂದ್ಯಗಳು

ಮನೀಶ್ ಪಾಂಡೆ– 153 ಪಂದ್ಯಗಳು

ಅಕ್ಷರ್ ಪಟೇಲ್– 148 ಪಂದ್ಯಗಳು

ಕಿರಾನ್ ಪೋಲಾರ್ಡ್– 137 ಪಂದ್ಯಗಳು

ಸೂರ್ಯಕುಮಾರ್ ಯಾದವ್– 126 ಪಂದ್ಯಗಳು

ಇಶಾನ್ ಕಿಶನ್–119 ಪಂದ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.