ಗುರುವಾರ , ಏಪ್ರಿಲ್ 2, 2020
19 °C

ಟೆಸ್ಟ್‌ ಸರಣಿ: ಇಶಾಂತ್‌ ಫಿಟ್‌, ಕಿವೀಸ್‌ ವಿರುದ್ಧ ಕಣಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ತಂಡದ ವೇಗದ ಬೌಲರ್‌ ಇಶಾಂತ್‌ ಶರ್ಮಾ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಶನಿವಾರ ನಡೆದ ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಎರಡು ಟೆಸ್ಟ್‌ಗಳ ಸರಣಿ ಆಡಲಿರುವ ಭಾರತ ತಂಡವನ್ನು ಅವರು ಸೇರಿಕೊಳ್ಳಲಿದ್ದಾರೆ.

ಟೆಸ್ಟ್ ಸರಣಿಯ ಮೊದಲ ಪಂದ್ಯ ಇದೇ ತಿಂಗಳ 21ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ. ಇಶಾಂತ್‌ ದೈಹಿಕ ಅರ್ಹತೆ ಪಡೆದಿರುವುದನ್ನು ಬಿಸಿಸಿಐ ಮೂಲವೊಂದು ಖಚಿತಪಡಿಸಿವೆ. ಈಗಾಗಲೇ ಪ್ರಕಟಿಸಿರುವ ತಂಡದಲ್ಲಿ ಇಶಾಂತ್‌ ಹೆಸರಿದೆ. ಆದರೆ ಇದಕ್ಕಾಗಿ ಅವರು ದೈಹಿಕ ಅರ್ಹತೆ ಪೂರೈಸಬೇಕಿತ್ತು.

ಇಶಾಂತ್‌ ಅವರಿಗೆ ನೂರು ಟೆಸ್ಟ್‌ ಪಂದ್ಯಗಳ ಮೈಲಿಗಲ್ಲು ದಾಟಲು ಇನ್ನು ನಾಲ್ಕು ಟೆಸ್ಟ್‌ ಪಂದ್ಯಗಳನ್ನಷ್ಟೇ ಆಡಬೇಕಾಗಿದೆ. ಕಪಿಲ್‌ ದೇವ್‌ ನಂತರ ನೂರು ಟೆಸ್ಟ್‌ಗಳ ಮೈಲಿಗಲ್ಲು ದಾಖಲಿಸಲಿರುವ ಎರಡನೇ ವೇಗದ ಬೌಲರ್‌ ಎನಿಸಲಿದ್ದಾರೆ ಇಶಾಂತ್‌.

ವಿದರ್ಭ ವಿರುದ್ಧ ಜನವರಿ 21ರಂದು ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಅವರ ಕಾಲು ಉಳುಕಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು