ಕ್ರಿಕೆಟ್‌: ಜೈನ್‌ ಕಾಲೇಜಿಗೆ ಪ್ರಶಸ್ತಿ

7

ಕ್ರಿಕೆಟ್‌: ಜೈನ್‌ ಕಾಲೇಜಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಪ್ರಜ್ವಲ್‌ (13ಕ್ಕೆ4) ಮತ್ತು ಶ್ರೀವತ್ಸ (17ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಜೈನ್‌ ಕಾಲೇಜು ವಿ.ವಿ.ಪುರಂ ತಂಡ ರೇವಾ ಅಂತರ ಪದವಿ ಪೂರ್ವ ಕಾಲೇಜು ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ರೇವಾ ಕಾಲೇಜಿನ ಮೈದಾನದಲ್ಲಿ ಬುಧವಾರ ನಡೆದ ಫೈನಲ್‌ನಲ್ಲಿ ಜೈನ್‌ ತಂಡ 7 ವಿಕೆಟ್‌ಗಳಿಂದ ಜಯನಗರದ ಜೈನ್‌ ಕಾಲೇಜು ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಜಯನಗರದ ಜೈನ್‌ ತಂಡ 20 ಓವರ್‌ಗಳಲ್ಲಿ 92ರನ್‌ಗಳಿಗೆ ಆಲೌಟ್‌ ಆಯಿತು.

ಸುಲಭ ಗುರಿಯನ್ನು ಜೈನ್‌ ಕಾಲೇಜು ವಿ.ವಿ.ಪುರಂ ತಂಡ 14 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !