ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಯುವ ಪಡೆಗೆ ಸರಣಿ ಗೆಲುವು

ಜೈಸ್ವಾಲ್‌ ಆಲ್‌ರೌಂಡ್‌ ಆಟ
Last Updated 28 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಈಸ್ಟ್‌ ಲಂಡನ್‌, ದಕ್ಷಿಣ ಆಫ್ರಿಕಾ: ಯಶಸ್ವಿ ಜೈಸ್ವಾಲ್‌ ಅವರ ಆಲ್‌ರೌಂಡ್‌ ಆಟದ ಬಲದಿಂದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.

ಶನಿವಾರ ನಡೆದ ಎರಡನೇ ಹಣಾಹಣಿಯಲ್ಲಿಭಾರತ 8 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು ವಶಪಡಿಸಿಕೊಂಡಿತು.

ಶನಿವಾರ 18ನೇ ವರ್ಷಕ್ಕೆ ಕಾಲಿಟ್ಟ ಯಶಸ್ವಿ ಜೈಸ್ವಾಲ್‌ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಆಚ ರಿಸಿಕೊಂಡರು.ಪಂದ್ಯದಲ್ಲಿ ನಾಲ್ಕು ವಿಕೆಟ್‌ ಕಬಳಿಸಿದ ಅವರು ಅರ್ಧಶತಕ (56 ಎಸೆತ ಗಳಲ್ಲಿ ಔಟಾಗದೆ 89) ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ; 16.5 ಓವರ್‌ಗಳಲ್ಲಿ 119 (ಜೋನಾಥನ್‌ ಬರ್ಡ್‌ 25, ಆ್ಯಂಡ್ರ್ಯೂ ಲೊವ್‌ 24, ಟಿಯಾನ್‌ ವ್ಯಾನ್‌ ವುರೆನ್‌ 18; ಯಶಸ್ವಿ ಜೈಸ್ವಾಲ್‌ 13ಕ್ಕೆ 4, ರವಿ ಬಿಷ್ಣೋಯ್‌ 20ಕ್ಕೆ 2, ಅಥರ್ವ ಅಂಕೋಲೆಕರ್‌ 16ಕ್ಕೆ 2, ಆಕಾಶ್‌ ಸಿಂಗ್‌ 37ಕ್ಕೆ 2) ಭಾರತ: 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 120 (ಯಶಸ್ವಿ ಜೈಸ್ವಾಲ್‌ 89, ಧ್ರುವ ಜುರೆಲ್‌ 26; ಮೆರಿಕ್‌ ಬ್ರೆಟ್‌ 20ಕ್ಕೆ 1) ಫಲಿತಾಂಶ: ಭಾರತ ತಂಡಕ್ಕೆ 8 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT