ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ | ಜಲಜ್ ಮಿಂಚು; ಕೇರಳಕ್ಕೆ ಜಯ

Last Updated 13 ಜನವರಿ 2023, 19:30 IST
ಅಕ್ಷರ ಗಾತ್ರ

ತುಂಬಾ: ಎಂಟು ವಿಕೆಟ್‌ಗಳನ್ನು ಗಳಿಸಿದ ಜಲಜ್ ಸಕ್ಸೆನಾ ಅವರ ಆಟದ ನೆರವಿನಿಂದ ಕೇರಳ ತಂಡವು ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಜಯಿಸಿತು.

ಶುಕ್ರವಾರ ಇಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಕೇರಳ ತಂಡವು 204 ರನ್‌ಗಳಿಂದ ಸರ್ವಿಸಸ್ ವಿರುದ್ಧ ಗೆದ್ದಿತು. ಕೇರಳ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಅಗ್ರಸ್ಥಾನದಲ್ಲಿರುವ ಕರ್ನಾಟಕ ತನ್ನ ಮುಂದಿನ ಪಂದ್ಯದಲ್ಲಿ ಕೇರಳವು ಎದುರಿಸಲಿದೆ.

ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಜಾರ್ಖಂಡ್ ತಂಡವು 44 ರನ್‌ಗಳಿಂದ ಛತ್ತೀಸಗಢದ ವಿರುದ್ಧ ಗೆದ್ದಿತು.

ಸಂಕ್ಷಿಪ್ತ ಸ್ಕೋರು: (ತುಂಬಾ): ಮೊದಲ ಇನಿಂಗ್ಸ್: ಕೇರಳ: 327, ಸರ್ವಿಸಸ್: 229. ಎರಡನೇ ಇನಿಂಗ್ಸ್: ಕೇರಳ: 60 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 242 (ಸಚಿನ್ ಬೇಬಿ 93, ದಿವೇಶ್ ಪಠಾಣಿಯಾ 13ಕ್ಕೆ2) ಸರ್ವಿಸಸ್: 46.4 ಓವರ್‌ಗಳಲ್ಲಿ 136 (ಶುಭಂ ರೊಹಿಲಾ 28, ಸೂಫಿಯಾನ್ ಆಲಂ 52, ಜಲಜ್ ಸಕ್ಸೆನಾ 36ಕ್ಕೆ8) ಫಲಿತಾಂಶ: ಕೇರಳ ತಂಡಕ್ಕೆ 204 ರನ್‌ ಜಯ.

(ಜೆಮ್ಶೆಡ್‌ಪುರ್): ಮೊದಲ ಇನಿಂಗ್ಸ್: ಜಾರ್ಖಂಡ್: 103, ಛತ್ತೀಸಗಢ 113, ಎರಡನೇ ಇನಿಂಗ್ಸ್: ಜಾರ್ಖಂಡ್: 366. ಛತ್ತೀಸಗಢ: 114.3 ಓವರ್‌ಗಳಲ್ಲಿ 312 (ಅಮನದೀಪ್ ಖರೆ 151, ಆಶುತೋಷ್ ಸಿಂಗ್ 30, ಅಜಯ್ ಜಾಧವ್ ಮಂಡಲ್ 29, ವಾಸುದೇವ್ 26, ಶಹಬಾಜ್ ನದೀಂ 87ಕ್ಕೆ3, ಅನುಕೂಲ್ ರಾಯ್ 45ಕ್ಕೆ5) ಫಲಿತಾಂಶ:ಜಾರ್ಖಂಡ್ ತಂಡಕ್ಕೆ 44 ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT