ಶನಿವಾರ, ಆಗಸ್ಟ್ 24, 2019
22 °C

ಟೆಸ್ಟ್‌ ತಂಡಕ್ಕೆ ಜೇಸನ್‌ ರಾಯ್‌

Published:
Updated:

ಲಂಡನ್‌ : ಐರ್ಲೆಂಡ್‌ ವಿರುದ್ಧ ಮುಂದಿನ ಬುಧವಾರ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯಕ್ಕೆ ಆರಂಭ ಆಟಗಾರ ಜೇಸನ್‌ ರಾಯ್‌ ಅವರನ್ನು ಮೊದಲ ಬಾರಿ ಆಯ್ಕೆ ಮಾಡಲಾಗಿದೆ. ವಿಶ್ವಕಪ್‌ನಲ್ಲಿ ಅವರು 443 ರನ್‌ ಗಳಿಸಿದ್ದರು.

ವೇಗದ ಬೌಲರ್‌ಗಳಾದ ಜೋಫ್ರಾ ಆರ್ಚರ್‌ ಮತ್ತು ಮಾರ್ಕ್‌ ವುಡ್‌ ಅವರು ಗಾಯಾಳಾಗಿರುವ ಕಾರಣ ಪರಿಗಣಿಸಿಲ್ಲ.  ತಂಡ ಇಂತಿದೆ.

ಜೋ ರೂಟ್‌ (ನಾಯಕ), ಮೊಯಿನ್‌ ಅಲಿ, ಜೇಮ್ಸ್‌ ಆ್ಯಂಡರ್ಸನ್‌, ಜಾನಿ ಬೇಸ್ಟೊ (ವಿಕೆಟ್‌ ಕೀಪರ್‌), ಸ್ಟುವರ್ಟ್‌ ಬ್ರಾಡ್‌, ರೋರಿ ಬರ್ನ್ಸ್‌, ಸ್ಯಾಮ್‌ ಕರನ್‌, ಜೊ ಡೆನ್ಲಿ, ಲೂಯಿಸ್‌ ಗ್ರೆಗರಿ, ಜಾಕ್‌ ಲೀಚ್‌, ಜೇಸನ್‌ ರಾಯ್‌, ಒಲಿ ಸ್ಟೋನ್‌, ಕ್ರಿಸ್‌ ವೋಕ್ಸ್‌.

 

Post Comments (+)