ನವದೆಹಲಿ: ಭಾರತ ತಂಡದ ಮುಂಚೂಣಿ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರು 2027ರ ಏಕದಿನ ವಿಶ್ವಕಪ್ಗೆ ಸಜ್ಜಾಗಲು, ಮುಂದಿನ 18 ತಿಂಗಳ ಅವಧಿಯಲ್ಲಿ ದ್ವಿಪಕ್ಷೀಯ ಟಿ20 ಸರಣಿಗಳ ಬದಲು 50 ಓವರುಗಳ ಪಂದ್ಯಗಳನ್ನೇ ಆಡುವ ಸಾಧ್ಯತೆಯಿದೆ.

ಮುಂದಿನ ವಿಶ್ವಕಪ್ಗೆ ಮೊದಲು ಭಾರತ ತಂಡವು ಹಲವು ದ್ವಿಪಕ್ಷೀಯ ಸರಣಿಗಳ ಜೊತೆ ಜಪಾನ್ನ ಐಚಿ–ನಗ್ರೊಯಾದಲ್ಲಿ ನಿಗದಿಯಾಗಿರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಲಿದೆ. ಏಷ್ಯನ್ ಗೇಮ್ಸ್ನಲ್ಲಿ ಟಿ20 ಮಾದರಿ ಸೇರ್ಪಡೆ ಮಾಡಲಾಗಿದೆ.

ಭಾರತದ ಕೆಲವು ಅನುಭವಿ ಆಟಗಾರರಂತೆ ಬೂಮ್ರಾ ಸಹ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಆದರೆ 2027ರ ವಿಶ್ವಕಪ್ವರೆಗೆ ಅವರು ಏಕದಿನ ಪಂದ್ಯಗಳ ಕಡೆಗಷ್ಟೇ ಗಮನಹರಿಸಲಿದ್ದಾರೆ ಎನ್ನಲಾಗಿದೆ.

ಮುಂದಿನ ಎರಡು ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯಲಿದ್ದು, ನಂತರವಷ್ಟೇ ಏಕದಿನ ವಿಶ್ವಕಪ್ಗೆ ಭಾರತ ತಂಡದ ಸಿದ್ಧತೆ ಆರಂಭವಾಗಲಿದೆ.

ಐಪಿಎಲ್ ನಂತರ ರಾಷ್ಟ್ರೀಯ ಆಯ್ಕೆ ಸಮಿತಿ, ಬಿಸಿಸಿಐ ಶ್ರೇಷ್ಠತಾ ಸಮಿತಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ತಂಡದ ಮ್ಯಾನೇಜ್ಮೆಂಟ್ ಪ್ರತಿನಿಧಿಗಳಾಗಿ ಗೌತಮ್ ಗಂಭೀರ್ ಮತ್ತು ಶುಭಮನ್ ಗಿಲ್ ಅವರು ಸೇರಿಕೊಂಡು ಮುಂದಿನ ಹಂತದ ನೀಲನಕ್ಷೆ ಸಿದ್ಧಪಡಿಸಲಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಭಾಗವಾಗಿರುವ ಪಂದ್ಯಗಳಲ್ಲಿ 32 ವರ್ಷ ವಯಸ್ಸಿನ ಬೌಲರ್ ಆಡುವುದು ಖಚಿತ. ಆದರೆ ಅವರ ಕಾರ್ಯಭಾರ ಒತ್ತಡ ನಿರ್ವಹಣೆ 2023–2026ರ ರೀತಿಯಲ್ಲಿ ಇರಲಿದೆ ಎಂದು ಗೊತ್ತಾಗಿದೆ. ಆ ಅವಧಿಯಲ್ಲಿ ಅವರು ಒಂದೂ ಏಕದಿನ ಪಂದ್ಯ ಆಡಿರಲಿಲ್ಲ. ಜೊತೆಗೆ ಟೆಸ್ಟ್ ಸರಣಿಯಲ್ಲೂ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು.

2023ರ ನವೆಂಬರ್ 19ರಂದು ಏಕದಿನ ವಿಶ್ವಕಪ್ ಫೈನಲ್ ಆಡಿದ್ದ ಬೂಮ್ರಾ ನಂತರ 42 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 21 ಟೆಸ್ಟ್ ಪಂದ್ಯಗಳು ಹಾಗೂ ಅಷ್ಟೇ ಸಂಖ್ಯೆಯ ಟಿ20 ಪಂದ್ಯಗಳು ಒಳಗೊಂಡಿವೆ.

ಪ್ರಸ್ತುತ ಏಕದಿನ ತಂಡದಲ್ಲಿ ಬೂಮ್ರಾ ಜೊತೆ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಪ್ರಮುಖ ಬೌಲರ್ಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.