ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮುಂಬೈ ತಂಡದ ತಾರಾ ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ನಡುವೆ ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆದಿದೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಪಂದ್ಯದಲ್ಲಿ ಬೂಮ್ರಾ ಹಾಗೂ ಹಾರ್ದಿಕ್ ನಡುವೆ ಫೀಲ್ಡ್ ಪ್ಲೇಸ್ಮೆಂಟ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಬೂಮ್ರಾ ಅವರು ಬೌಲಿಂಗ್ ಮಾಡುವ ವೇಳೆ ನಾಯಕ ಪಾಂಡ್ಯ ಜತೆ ಫೀಲ್ಡ್ ಪ್ಲೇಸ್ಮೆಂಟ್ ಕುರಿತು ಚರ್ಚಿಸುತ್ತಿದ್ದರು. ಈ ವೇಳೆ ಹಾರ್ದಿಕ್ ಅವರ ಮಾತಿನಿಂದ ಬೂಮ್ರಾ ನಿರಾಶೆಗೊಂಡಿದ್ದಾರೆ.

ಹಾರ್ದಿಕ್ ಅವರು ತಮ್ಮ ತಂತ್ರದ ಮೂಲಕ ಫೀಲ್ಡ್ ಪ್ಲೇಸ್ಮೆಂಟ್ ಮಾಡಿದ್ದರು. ಆದರೆ ಬೂಮ್ರಾ ಅವರು ಕೆಲ ಬದಲಾವಣೆ ಮಾಡುವಂತೆ ಸೂಚಿಸಿದರು. ಆದರೆ ಹಾರ್ದಿಕ್ ಒಪ್ಪಿಕೊಳ್ಳಲಿಲ್ಲ. ಇದರಿಂದ ಬೂಮ್ರಾ ನಿರಾಶೆಗೊಂಡು ನಾಯಕ ಹೇಳಿದ ಫೀಲ್ಡ್ಗೆ ಬೌಲಿಂಗ್ ಮಾಡಿದರು.

ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ ಪಾಂಡ್ಯ ಮಾತನಾಡಿ ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಹೇಳಲು ಏನೂ ಇಲ್ಲ. ನಮ್ಮಲ್ಲಿ ಏನು ಕೊರತೆಯಿದೆ ಎಂದು ನೋಡಬೇಕು. ಅದು ವ್ಯಕ್ತಿಗಳದ್ದೇ, ಒಂದು ಗುಂಪಿನದ್ದೇ, ಅಥವಾ ಯೋಜನೆಯದ್ದೇ ಎಂದು ಶೀಘ್ರದಲ್ಲೇ ಅದನ್ನು ಲೆಕ್ಕಾಚಾರ ಮಾಡುತ್ತೇವೆ. ನಂತರ ಮುಂದೆ ಏನು ಮಾಡಬಹುದು ಎಂದು ನೋಡೋಣ’ ಎಂದು ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದರು.

ಈ ಪಂದ್ಯದಲ್ಲಿ ಬೂಮ್ರಾ ಅವರು ಒಂದೇ ಒಂದು ವಿಕೆಟ್ ಪಡೆಯದೇ 41 ರನ್ಗಳನ್ನು ಬಿಟ್ಟುಕೊಟ್ಟರು. ಏಪ್ರಿಲ್ 20ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗೆಲ್ಲಬೇಕಾದ ಅನಿವಾರ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.