ಚೆನ್ನೈ: 2026ರ ಐಪಿಎಲ್ ಟೂರ್ನಿಯ ಆರಂಭದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಕಳಪೆ ಬ್ಯಾಟಿಂಗ್ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕಳಪೆ ಬ್ಯಾಟಿಂಗ್ ಕುರಿತು ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಆಡಿರುವ 9 ಪಂದ್ಯಗಳಲ್ಲಿ 1 ಅರ್ಧಶತಕದೊಂದಿಗೆ 183 ರನ್ಗಳನ್ನು ಕಲೆಹಾಕಿದ್ದಾರೆ.

ಸೂರ್ಯ ಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಕುರಿತು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಮಾತನಾಡಿ ‘ಸೂರ್ಯಕುಮಾರ್ ಯಾದವ್ ಅವರು ತಮ್ಮ ವೃತ್ತಿಜೀವನದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಯಕ್ಕೆ ಮರಳಲು ಹೆಚ್ಚು ಅಭ್ಯಾಸಿಸುವುದು ಬಿಟ್ಟು ಬೇರೆ ದಾರಿಯಿಲ್ಲ’ ಎಂದಿದ್ದಾರೆ.

‘ಸೂರ್ಯ ಕುಮಾರ್ ಯಾದವ್ 2025 ರ ಋತುವಿನಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಮಾತ್ರವಲ್ಲದೆ ಭಾರತವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ನಾಯಕನ ಪಾತ್ರವಹಿಸಿದರು. ಆದರೆ 2026ರ ಆವೃತಿಯಲ್ಲಿ ರನ್ ಭರ ಎದುರಿಸುತ್ತಿದ್ದಾರೆ. ಹಾರ್ಡ್ ಲೆಂತ್ ಎಸೆತಗಳೇ ಅವರಿಗೆ ಸವಾಲಾಗಿ ಪರಿಣಮಿಸಿವೆ’ ಎಂದಿದ್ದಾರೆ.

‘ಹೆಚ್ಚು ರನ್ಗಳಿಸಿದರೆ ಮಾತ್ರ, ಲಯವನ್ನು ಕಂಡುಕೊಳ್ಳಲು ಸಾಧ್ಯ. ಕೆಲವೊಮ್ಮೆ ನಾವು ಊಹಿಸಿದಂತೆ ಯಾವುದೂ ನಡೆಯುವುದಿಲ್ಲ. ಸೂರ್ಯ ಒಳ್ಳೆಯ ಹೊಡೆತಗಳತ್ತ ಯೋಚಿಸಬೇಕು. ಹೆಚ್ಚು ಅಭ್ಯಾಸ ಮಾಡುವುದರಿಂದ ಲಯಕ್ಕೆ ಮರಳಬಹುದು’ ಎಂದು ಮುಂಬೈ ಇಂಡಿಯನ್ಸ್ ತಂಡದ ಕೋಚ್ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.