ಮಂಗಳವಾರ, ಸೆಪ್ಟೆಂಬರ್ 28, 2021
21 °C

ಜೇಡನ್‌ ಸೀಲ್ಸ್‌ ವರ್ತನೆಗೆ ಐಸಿಸಿ ಖಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ನಿಯಮ ಮೀರಿ ವರ್ತಿಸಿದ್ದಕ್ಕೆ ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್‌ ಜೇಡನ್ ಸೀಲ್ಸ್‌ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯಿಂದ (ಐಸಿಸಿ) ಖಂಡನೆಗೆ ಒಳಗಾಗಿದ್ದಾರೆ. 

ಪಾಕಿಸ್ತಾನದ ವಿರುದ್ಧ ಕಿಂಗ್ಸ್‌ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಪಾಕಿಸ್ತಾನದ ಎರಡನೇ ಇನಿಂಗ್ಸ್‌ ಸಂದರ್ಭದಲ್ಲಿ ಸೀಲ್ಸ್ ಅನುಚಿತವಾಗಿ ವರ್ತಿಸಿದ್ದರು. ಹಸನ್ ಅಲಿ ವಿಕೆಟ್ ಪಡೆದ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಕುಪಿತರಾದ ಹಸನ್ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು.

ಆಟಗಾರರು ಮತ್ತು ನೆರವು ಸಿಬ್ಬಂದಿಯ ಶಿಸ್ತಿಗೆ ಸಂಬಂಧಿಸಿ ಐಸಿಸಿಯ ಲೆವೆಲ್ ಒಂದು ನಿಯಮದ 2.5 ವಿಧಿಯನ್ನು ಸೀಲ್ಸ್ ಉಲ್ಲಂಘಿಸಿದ್ದಾರೆ ಎಂದು ದೂರಲಾಗಿದೆ. ಅಂತರರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಔಟಾದಾಗ ಹಂಗಿಸುವುದಕ್ಕಾಗಿ ಕೆಟ್ಟ ಭಾಷೆ ಬಳಸುವುದು ಅಥವಾ ಕೆಟ್ಟದಾಗಿ ವರ್ತಿಸುವುದನ್ನು ತಡೆಯಲು ಈ ನಿಯಮ ಜಾರಿಯಲ್ಲಿದೆ.

‘ಅವರ ವರ್ತನೆಯನ್ನು ಖಂಡಿಸುವುದರೊಂದಿಗೆ ಶಿಸ್ತಿಗೆ ಸಂಬಂಧಿಸಿದ ಅವರ ದಾಖಲೆಯಲ್ಲಿ ಒಂದು ಡಿಮೆರಿಟ್‌ ಪಾಯಿಂಟ್‌ ಉಲ್ಲೇಖಿಸಲಾಗುವುದು. ಇದು, ಎರಡು ವರ್ಷಗಳಲ್ಲಿ ಅವರು ಮಾಡಿರುವ ಮೊದಲ ತಪ್ಪಾಗಿದೆ’ ಎಂದು ಪ್ರಕಟಣೆಯಲ್ಲಿ ಐಸಿಸಿ ತಿಳಿಸಿದೆ.  

ಫೀಲ್ಡ್‌ ಅಂಪೈರ್‌ಗಳಾದ ಗ್ರೆಗರಿ ಬ್ರಾಥ್‌ವೇಟ್, ಜೊಯೆಲ್ ವಿಲ್ಸನ್ ಮತ್ತು ನಿಗೆಲ್ ಡುಗಿಡ್, ಟಿವಿ ಅಂಪೈರ್ ಲೆಸ್ಲಿ ರೀಫರ್ ಅವರ ವರದಿ ಪ್ರಕಾರ ಪಂದ್ಯದ ರೆಫರಿ ರಿಚಿ ರಿಚರ್ಡ್ಸನ್‌ ಅವರು ಸೀಲ್ಸ್ ಮಾಡಿರುವ ಪ್ರಮಾದವನ್ನು ಗುರುತಿಸಿದ್ದಾರೆ. ಅದನ್ನು ಐಸಿಸಿ ಕ್ರಿಕೆಟ್ ಆಪರೇಷನ್ಸ್ ವಿಭಾಗ ಅದನ್ನು ಎತ್ತಿಹಿಡಿದೆ. ತಪ್ಪನ್ನು ಸೀಲ್ಸ್ ಒಪ್ಪಿಕೊಂಡಿರುವುದರಿಂದ ಔಪಚಾರಿಕ ವಿಚಾರಣೆ ಇರುವುದಿಲ್ಲ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.